'ಅವನೇ ಶ್ರೀಮನ್ನಾರಾಯಣ' ಹಾಗೂ 'ದಬಾಂಗ್ 3'ಯನ್ನು ಹಿಂದೆ ಹಾಕಿದ 'ರೇಮೊ'
ಸದ್ಯ ಹಿಂದಿಯ 'ದಬಾಂಗ್ 3' ಹಾಗೂ ಕನ್ನಡದ 'ಅವನೇ ಶ್ರೀಮನ್ನಾರಾಯಣ' ಸಿನಿಮಾಗಳು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿವೆ. ಸ್ಟಾರ್ ಗಳ ಈ ಸಿನಿಮಾವನ್ನು ಐಎಂಡಿಬಿ ಪಟ್ಟಿಯಲ್ಲಿ 'ರೇಮೊ' ಸಿನಿಮಾ ಹಿಂದೆ ಹಾಕಿದೆ.
ಪವನ್ ಒಡೆಯರ್ ನಿರ್ದೇಶನ 'ರೇಮೊ' ಸಿನಿಮಾ ಐಎಂಡಿಬಿ ಟ್ರೆಂಡಿಂಗ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಇದೆ. ಬಾಲಿವುಡ್, ಹಾಲಿವುಡ್ ಸಿನಿಮಾಗಳ ಜೊತೆಗೆ ಕನ್ನಡದ ಈ ಸಿನಿಮಾ ಪೈಪೋಟಿ ನಡೆಸಿದೆ. 'ದಬಾಂಗ್ 3' ಸಿನಿಮಾ ಟಾಪ್ 6 ನಲ್ಲಿ ಇದ್ದರೆ, 'ಅವನೇ ಶ್ರೀಮನ್ನಾರಾಯಣ' ಚಿತ್ರ ಟಾಪ್ 9 ರಲ್ಲಿ ಇದೆ.
'ರೇಮೊ' ಸಿನಿಮಾ ಮೋಷನ್ ಪೋಸ್ಟರ್ ನಿನ್ನೆ (ಜನವರಿ 3) ಬಿಡುಗಡೆಯಾಗಿದೆ. ಯೂಟ್ಯೂಬ್ ನಲ್ಲಿ ಮೋಷನ್ ಪೋಸ್ಟರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ರಾಕ್ ಸ್ಟಾರ್ ಆಗಿ ಇಶಾನ್ ಕಾಣಿಸಿಕೊಂಡಿದ್ದಾರೆ.

ಇಶಾನ್ ಹಾಗೂ ಆಶಿಕಾ ರಂಗನಾಥ್ ಚಿತ್ರದ ನಾಯಕ ನಾಯಕಿ ಆಗಿದ್ದಾರೆ. ಚಿತ್ರದ ನಾಯಕನ ಹೆಸರು ರೇವಂತ, ನಾಯಕಿಯ ಹೆಸರು ಮೋಹನಾ ಈ ಪಾತ್ರದ ಹೆಸರು ಸೇರಿ 'ರೇಮೊ' ಎಂದು ಸಿನಿಮಾದ ಟೈಟಲ್ ಇಡಲಾಗಿದೆ.
'ಗೂಗ್ಲಿ' ನಂತರ ಪವನ್ ಒಡೆಯರ್ ಲವ್ ಸ್ಟೋರಿ ಹೇಳುತ್ತಿದ್ದಾರೆ. ಸಿ ಆರ್ ಮನೋಹರ್ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಮೊದಲ ಬಾರಿಗೆ ಪವನ್ ಹಾಗೂ ಅರ್ಜುನ್ ಒಂದಾಗಿದ್ದು, ಹಾಡುಗಳ ಮೇಲೆ ನಿರೀಕ್ಷೆ ಹೆಚ್ಚಿದೆ.


Click it and Unblock the Notifications











