For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಬಿಡುಗಡೆ ಹಿನ್ನೆಲೆ ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದ ಪಡೆದ 'ರೇಮೊ' ಹೀರೊ ಇಶಾನ್!

  |

  ಪವನ್ ಒಡೆಯನ್ ನಿರ್ದೇಶಿಸಿದ 'ರೇಮೊ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸ್ಯಾಂಡಲ್‌ವುಡ್‌ನ ಯುವ ಪ್ರತಿಭೆ ಇಶಾನ್ ಈ ಸಿನಿಮಾ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮ್ಯೂಸಿಕಲ್ ಸಿನಿಮಾದ ಹಾಡುಗಳು ಹಾಗೂ ಟ್ರೈಲರ್ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿವೆ.

  ರಾಕ್‌ ಸ್ಟಾರ್ ಲುಕ್‌ನಲ್ಲಿ ತೆರೆಮೇಲೆ ಮಿಂಚಲು ರೆಡಿಯಾಗಿರೋ ಇಶಾನ್‌ಗೆ ಈ ಸಿನಿಮಾ ತುಂಬಾನೇ ಮುಖ್ಯ. ಇನ್ನು ಇಶಾನ್ ಜೊತೆ ಆಶಿಕಾ ರಂಗನಾಥ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ 'ರೇಮೊ' ಬಾಕ್ಸಾಫೀಸ್‌ನಲ್ಲಿ ಏನಾಗಬಹುದು ಎಂದು ಸ್ಯಾಂಡಲ್‌ವುಡ್‌ ಎದುರು ನೋಡುತ್ತಿದೆ.

  9 ವರ್ಷಗಳ ಬಳಿಕ ಬಾಲಿವುಡ್‌ಗೆ 'ಗೂಗ್ಲಿ': ಏನಂದ್ರು ಪವನ್ ಒಡೆಯರ್?9 ವರ್ಷಗಳ ಬಳಿಕ ಬಾಲಿವುಡ್‌ಗೆ 'ಗೂಗ್ಲಿ': ಏನಂದ್ರು ಪವನ್ ಒಡೆಯರ್?

  ಇನ್ನು 'ರೇಮೊ' ಸಿನಿಮಾ ಹೀರೊ ಇಶಾನ್‌ಗೆ ಚಿತ್ರರಂಗದ ದಿಗ್ಗಜರ ಸರ್ಪೋರ್ಟ್ ಸಿಕ್ಕಿದೆ. ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಸುದೀಪ್, ಕ್ರೇಜಿ ಸ್ಟಾರ್ ರವಿಚಂದ್ರನ್ ಹೀಗೆ ಸೂಪರ್‌ಸ್ಟಾರ್‌ಗಳು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಈಗ ಟಾಲಿವುಡ್‌ನ ಮೆಗಾ ಸ್ಟಾರ್ ಚಿರಂಜೀವಿ ಕೂಡ ಇಶಾನ್‌ಗೆ ಆಶೀರ್ವಾದ ಮಾಡಿದ್ದಾರೆ.

  ಅಂದ್ಹಾಗೆ 'ರೇಮೊ' ಸಿನಿಮಾ ಇದೇ ನವೆಂಬರ್ 25ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ 'ರೇಮೊ' ಕೂಡ ಭರ್ಜರಿಯಾಗಿಯೇ ಪ್ರಚಾರ ಮಾಡುತ್ತಿದೆ. ಸಿನಿಮಾಗಾಗಿ ಊರೆಲ್ಲಾ ಸುತ್ತುತ್ತಿರುವ ಇಶಾನ್ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿಯವರನ್ನೂ ಭೇಟಿ ಮಾಡಿದ್ದಾರೆ.

  ಈ ಸಂದರ್ಭದಲ್ಲಿ ಮೆಗಾಸ್ಟಾರ್ ಚಿರಂಜೀವಿ 'ರೇಮೊ' ಸಿನಿಮಾದ ತುಣುಕುಗಳನ್ನು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಇಶಾನ್ ಬಗ್ಗೆನೂ ಭರವಸೆಯ ಮಾತನಾಡಿದ್ದು, ಸಿನಿಮಾಗೆ ಶುಭ ಹಾರೈಸಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿಯ ಆಶೀರ್ವಾದ ಪಡೆದು ಇಶಾನ್ ಫುಲ್ ಖುಷಿಯಾಗಿದ್ದು, ಚಿರಂಜೀವಿ ಭೇಟಿಯಾದ ಪೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

  Raymo Star Ishaan Met Tollywood Mega Star Chiranjeevi And Took Blessings

  'ರೇಮೊ' ಪಕ್ಕಾ ಮ್ಯೂಸಿಕಲ್ ಹಾಗೂ ರೊಮ್ಯಾಂಟಿಕ್ ಸಿನಿಮಾ. 'ದಿ ವಿಲನ್' ನಿರ್ಮಿಸಿದ್ದ ಸಿ. ಆರ್. ಮನೋಹರ್ ಈ ಸಿನಿಮಾವನ್ನೂ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ವೈದಿ ಕ್ಯಾಮೆರಾ ವರ್ಕ್, ಕೆ.ಎಂ. ಪ್ರಕಾಶ್ ಸಂಕಲನ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸಂಗೀತ ಪ್ರಿಯರು ಹಾಗೂ ಯುವಕರು 'ರೇಮೊ' ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದು, ನವೆಂಬರ್ 25ರಂದು ಭವಿಷ್ಯ ಹೊರಬೀಳಲಿದೆ.

  English summary
  Raymo Star Ishaan Met Tollywood Mega Star Chiranjeevi And Took Blessings, Know More.
  Wednesday, November 23, 2022, 23:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X