RCB VS KKR ; ಡಾ. ರಾಜ್‌ಕುಮಾರ್ ಡೈಲಾಗ್ ಹೇಳುವ ಮೂಲಕ ಕನ್ನಡಿಗರ ಹೃದಯ ಗೆದ್ದ RCB ಕ್ಯಾಪ್ಟನ್..!
ಸಾಮಾಜಿಕ, ಪೌರಾಣಿಕ, ಚಾರಿತ್ರಿಕ, ಜಾನಪದ ಹೀಗೆ ಎಲ್ಲ ಪ್ರಕಾರದ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಏಕೈಕ ಕಲಾವಿದ ಅಂದರೆ ಅದು ಡಾ. ರಾಜಕುಮಾರ್ ಮಾತ್ರ. ಭಕ್ತಚೇತ, ಕನಕದಾಸ, ಬೇಡರಕಣ್ಣಪ್ಪ, ಕುಂಬಾರ, ಪುರಂದರದಾಸ, ರಾಘವೇಂದ್ರಸ್ವಾಮಿ, ಸರ್ವಜ್ಞ, ಹೋಟೆಲ್ ಕಾರ್ಮಿಕ, ಕೃಷಿಕಾರ್ಮಿಕ, ರೈತ, ಆಧ್ಯಾಪಕ, ಸೈನಿಕ, ಅಧಿಕಾರಿ, ರಾಜ ಮಹಾರಾಜ.
ಹೀಗೆ ಹತ್ತಾರು ರೂಪ.. ಅವತಾರದಲ್ಲಿ ಕಾಣಿಸಿಕೊಂಡ ಡಾ.ರಾಜ್ ಕುಮಾರ್ ಕನ್ನಡ ಚಿತ್ರರಂಗದ ಮಾಸದ ಮುತ್ತು ಹೌದು. ಕರ್ನಾಟಕದ ಸಾಂಸ್ಕ್ರತಿಕ ರಾಯಭಾರಿ ಕೂಡ ಹೌದು. ವರನಟ ಡಾ.ರಾಜ್ ಕುಮಾರ್ ಅವರನ್ನ ಹೊರತು ಪಡಿಸಿದ ಕನ್ನಡ ಚಿತ್ರರಂಗದ ಇತಿಹಾಸ ಸಮಾಪ್ತಿಯಾಗದು. ಇಂಥಾ ಡಾ.ರಾಜ್ ಕುಮಾರ್ ಅವರಿಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕ ರಜತ್ ಪಾಟೀದಾರ್ ಸಲಾಂ ಹೊಡೆದಿದ್ದಾರೆ. ಡಾ.ರಾಜ್ ಕುಮಾರ್ ಅವರ 'ಅಭಿಮಾನಿಗಳೇ ನಮ್ಮ ದೇವರು' ಎಂಬ ಡೈಲಾಗ್ ಹೊಡೆದಿದ್ದಾರೆ. ಈ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ.

ಡ್ಯಾನಿಶ್ ಸೇಠ್ ಅಲಿಯಾಸ್ ಮಿಸ್ಟರ್ ನಾಗ್ಸ್ ಅವರ ಜೊತೆ ಇನ್‌ಸೈಡರ್ ಶೋನಲ್ಲಿ ಎರಡು ಕೈಗಳನ್ನು ಜೋಡಿಸಿ ಅಭಿಮಾನಿಗಳೇ ನಮ್ಮ ದೇವರು ಎಂದು ರಜತ್ ಪಾಟೀದಾರ್ ಹೇಳಿದ್ದು ಸದ್ಯ ಈ ವಿಡಿಯೋ ಕನ್ನಡಿಗರ ಹೃದಯವನ್ನು ಗೆಲ್ಲುತ್ತಿದೆ. ರಜತ್ ಪಾಟೀದಾರ್ ಅವರ ಬಾಯಿಂದ ಕನ್ನಡವನ್ನು ಕೇಳಿ ಖುಷಿಯಾಗಿರುವ ಅನೇಕರು ಆರ್‌ಸಿಬಿ ನಮ್ಮ ಉಸಿರು, ನಮ್ಮ ಹೆಮ್ಮೆ, ಈ ಬಾರಿ ಕಪ್ ನಮ್ದೇ ಎಂದು ಹೇಳಿದ್ದಾರೆ. ನಮ್ಮ ಪ್ರೋತ್ಸಾಹ ಮತ್ತು ಬೆಂಬಲ ಸದಾ ಕಾಲ ನಿಮಗೆ ಇದ್ದೇ ಇರುತ್ತೆ ಎಂದು ಹೇಳಿದ್ಧಾರೆ.
ಇನ್ನು ಇದಕ್ಕೂ ಮುನ್ನ ಆರ್ ಸಿ ಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಕೂಡ ಕನ್ನಡ ಮಾತನಾಡುವ ಪ್ರಯತ್ನ ಮಾಡಿದ್ದ ರಜತ್ ಪಾಟೀದಾರ್ ನಮಸ್ಕಾರ ಬೆಂಗಳೂರು ಎಲ್ಲರೂ ಹೇಗಿದ್ದೀರಾ ಎಂದು ಹೇಳುವ ಮೂಲಕ ಅನೇಕರ ಮನ ಗೆದ್ದಿದ್ದರು.


Click it and Unblock the Notifications











