Daddy's Home: ರಾಯನಾಗಿ ವಿರಾಟ್ ದರ್ಶನ ಮಾಡಿಸಿದ ಆರ್‌ಸಿಬಿ; ಮತ್ತೆ ಅಗ್ರಸ್ಥಾನಕ್ಕೇರಿದ ಕೊಹ್ಲಿ

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಟೀಸರ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. Dassy's Home ಎನ್ನುವ ಒಂದೇ ಒಂದು ಡೈಲಾಗ್ ಗಮನ ಸೆಳೆಯುತ್ತಿದೆ. ಇನ್ನು ಗನ್ ಹಿಡಿದ ರಾಯನ ಲುಕ್ ಕೂಡ ವೈರಲ್ ಆಗ್ತಿದೆ. ಇದೇ ಅವತಾರದಲ್ಲಿ ಇದೀಗ ಕ್ರಿಕೆಟಿಗ ವಿರಾಟ್ ಕೊಹ್ಲಿ ದರ್ಶನ ಮಾಡಿಸಿ ಆರ್‌ಸಿಬಿ.

ಗೀತು ಮೋಹನ್ ದಾಸ್ ನಿರ್ದೇಶನ 'ಟಾಕ್ಸಿಕ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ಟೀಸರ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಸುನಾಮಿ ಎಬ್ಬಿಸಿದೆ. 300 ಮಿಲಿಯನ್‌ಗೂ ಹೆಚ್ಚು ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. ಇದೇ ಕ್ರೇಜ್ ಬಳಸಿಕೊಂಡು ವಿರಾಟ್‌ ಕೊಹ್ಲಿಗೆ ಅಭಿನಂದನೆ ತಿಳಿಸಿದೆ ಆರ್‌ಸಿಬಿ ಮ್ಯಾನೇಜ್‌ಮೆಂಟ್.

RCB Uses Yash s Toxic Craze to Celebrate Virat Kohli s Return to No 1 ODI Ranking

ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಮತ್ತೆ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ ಬಳಿಕ ರ್ಯಾಕಿಂಗ್‌ನಲ್ಲಿ ಬದಲಾವಣೆ ಆಗಿ ಕೊಹ್ಲಿ ಮೊದಲ ಸ್ಥಾನಕ್ಕೆ ಏರಿದ್ದಾರೆ. 785 ರೇಟಿಂಗ್ ಪಾಯಿಂಟ್ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಡ್ಯಾರಿಲ್ ಮಿಚೆಲ್ 784 ಪಾಯಿಂಟ್ ಪಡೆದು 2ನೇ ಸ್ಥಾನಕ್ಕಿಳಿದಿದ್ದಾರೆ. ಕೇಲವ ಒಂದೇ ಒಂದು ಅಂಕ ಹೆಚ್ಚು ಪಡೆದು 4 ವರ್ಷಗಳ ಬಳಿಕ ರ್ಯಾಕಿಂಗ್‌ನಲ್ಲಿ ಕೊಹ್ಲಿ ಗಮನ ಸೆಳೆದಿದ್ದಾರೆ.

ವಿರಾಟ್ ಸಾಧನೆಗೆ ಆರ್‌ಸಿಬಿ ಅಭಿನಂದನೆ ತಿಳಿಸಿದೆ. ಅದಕ್ಕಾಗಿ 'ಟಾಕ್ಸಿಕ್' ಚಿತ್ರದ ಟ್ರೆಂಡ್ ಬಳಸಿಕೊಂಡಿರುವುದು ವಿಶೇಷ. "Daddy's Home.. ಕಿಂಗ್ ತಮ್ಮ ಅರ್ಹ ಸ್ಥಾನಕ್ಕೆ ವಾಪಸ್ ಬಂದಿದ್ದಾರೆ. ICC ODI ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಮರಳಿ ಪಡೆದಿದ್ದಾರೆ.. ಇನ್ನು ಸ್ವಲ್ಪ ಸಮಯ ಅದೇ ಸ್ಥಾನದಲ್ಲಿ ಅವರು ಉಳಿದರೆ ಅಚ್ಚರಿಯಿಲ್ಲ" ಎಂದು ಆರ್‌ಸಿಬಿ ಟ್ವೀಟ್ ಮಾಡಿದೆ. 'ಟಾಕ್ಸಿಕ್' ಟೀಸರ್ ರಿಲೀಸ್ ಬೆನ್ನಲ್ಲೇ "Daddy's Home" ಡೈಲಾಗ್ ವೈರಲ್ ಆಗ್ತಿದೆ. ಅಪ್ಪ ಮನೆಗೆ ಬಂದ್ರು, ನಾಯಕ ಅಥವಾ ಲೀಡರ್ ವಾಪಸ್ ಬಂದಾಯ್ತು ಎನ್ನು ಅರ್ಥ ಇದಕ್ಕಿದೆ. "ನಾಯಕ ಮತ್ತಷ್ಟು ಪ್ರಬಲನಾಗಿ ಮರಳಿ ಬಂದಿದ್ದಾನೆ" ಎನ್ನುವ ಅರ್ಥದಲ್ಲಿ ಈ ಪದವನ್ನು ಬಳಸುತ್ತಾರೆ. ವಿರಾಟ್ ಕೊಹ್ಲಿ ಮತ್ತೆ ನಂಬರ್‌ 1 ಸ್ಥಾನಕ್ಕೆ ಏರಿದ್ದನ್ನು ಈ ರೀತಿ ಆರ್‌ಸಿಬಿ ವಿಶ್ಲೇಷಿಸಿದೆ.

ಆರ್‌ಸಿಬಿ ತಂಡದ ಖಾಯಂ ಸದಸ್ಯನಾಗಿ ವಿರಾಟ್ ಕೊಹ್ಲಿ ಆಡುತ್ತಾ ಬರ್ತಿದ್ದಾರೆ. ತಮ್ಮ ಅದ್ಭುತ ಆಟದ ಮೂಲದ ತಂಡಕ್ಕೆ ನೆರವಾಗುತ್ತಿದ್ದಾರೆ. ಇನ್ನು 'ಟಾಕ್ಸಿಕ್‌' ಟೀಸರ್‌ನಲ್ಲಿ ಯಶ್ ಗನ್ ಹಿಡಿದ ರೀತಿಯಲ್ಲೇ ವಿರಾಕ್ ಕೊಹ್ಲಿ ಬ್ಯಾಟ್ ಹಿಡಿದು ನಿಂತಂತೆ ಪೋಸ್ಟರ್ ಡಿಸೈನ್ ಮಾಡಿ ಆರ್‌ಸಿಬಿ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿದೆ.

'ಟಾಕ್ಸಿಕ್' ಕ್ರೇಜ್ ಅನ್ನು ಈ ರೀತಿ ಬಳಸಿಕೊಂಡಿದ್ದಕ್ಕೆ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಅಂದ್ರೆ ಆರ್‌ಸಿಬಿ ಅಭಿಮಾನಿಗಳಿಗೂ ಅಚ್ಚುಮೆಚ್ಚು. ಹಾಗಾಗಿ ಪೋಸ್ಟರ್ ಸಖತ್ ವೈರಲ್ ಆಗ್ತಿದೆ. ರಾಯನಾಗಿ ವಿರಾಟ್ ಕೊಹ್ಲಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಈ ಪೋಸ್ಟ್ ಸಾಕಷ್ಟು ಲೈಕ್ಸ್, ಶೇರ್ ಪಡೆದುಕೊಳ್ತಿದೆ.

ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ನಯನತಾರಾ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

More from Filmibeat

Read more about: yash toxic sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X