RCB Vs PBKS: ಇಬ್ಬರಲ್ಲಿ ಗೆಲ್ಲೋರು ಯಾರು? ಆರ್ಯವರ್ಧನ್ ಗುರೂಜಿ, ರಾಮಚಿಲುಕ ಭವಿಷ್ಯವೇನು?

By ಫಿಲ್ಮಿಬೀಟ್ ಡೆಸ್ಕ್

ಇಂದು (ಜೂನ್ 3) ಐಪಿಎಲ್ 2025ರ ಕೊನೆಯ ಪಂದ್ಯ ನಡೆಯುತ್ತಿದೆ. ಆರ್‌ಸಿಬಿ ಹಾಗೂ ಪಂಜಾಬ್ ತಂಡಗಳು ಫೈನಲ್ ಪ್ರವೇಶಿಸಿವೆ. ಈ ಎರಡೂ ಪಂದ್ಯಗಳ ನಡುವೆ ಟಫ್ ಫೈಟ್ ನಡೆಯಲಿದ್ದು, ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹೈ ವೋಲ್ಟೇಜ್ ಪಂದ್ಯದಲ್ಲಿ ಗುಜರಾತ್‌ನ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಈ ಎರಡೂ ಪಂದ್ಯಗಳಿಗೂ ವೇದಿಕೆ ಸಜ್ಜಾಗಿದೆ.

ಬಹಳ ವರ್ಷಗಳ ಬಳಿಕ ಆರ್‌ಸಿಬಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಇತ್ತ ಪಂಜಾಬ್ ಕೂಡ ಬರೋಬ್ಬರಿ 11 ವರ್ಷಗಳ ಬಳಿಕ ಫೈನಲ್‌ಗೆ ಲಗ್ಗೆ ಇಟ್ಟಿದೆ. ಹೀಗಾಗಿ ಈ ಬಾರಿ ಟ್ರೋಫಿಯನ್ನೇ ಗೆಲ್ಲದ ಎರಡು ತಂಡಗಳ ಪೈಕಿ ಒಂದು ಗೆಲುವನ್ನು ಸಂಭ್ರಮಿಸುವುದು ಗ್ಯಾರಂಟಿ. ಆದರೆ, ಎರಡೂ ಪ್ರಬಲ ತಂಡಗಳಾಗಿದ್ದು, ಯಾರು ಗೆಲ್ಲುತ್ತಾರೆ ಎನ್ನುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ.

RCB Vs PBKS IPL Final match Aryavardhan Guruji and Ramachiluka Babayi Astrology prediction

ಇತ್ತ ಆರ್‌ಸಿಬಿ ಹಾಗೂ ಪಂಜಾಬ್ ನಡುವೆ ಪಂದ್ಯ ನಡೆಯುವುದಕ್ಕೂ ಮುನ್ನ ಲೆಕ್ಕಾಚಾರಗಳು ಶುರುವಾಗಿವೆ. ಫೈನಲ್ ಪಂದ್ಯ ಯಾರು ಗೆಲ್ಲುತ್ತಾರೆ ಎನ್ನುವ ಭವಿಷ್ಯ ನುಡಿಯುತ್ತಿದ್ದಾರೆ. ಅದರಲ್ಲೂ ಬಿಗ್ ಬಾಸ್ ಖ್ಯಾತಿಯ ಆರ್ಯವರ್ಧನ್ ಗುರೂಜಿ ಹಾಗೂ ತೆಲುಗಿನಲ್ಲಿ ಗಿಳಿ ಶಾಸ್ತ್ರ ಹೇಳುವ ರಾಮಚಿಲುಕ ಭವಿಷ್ಯವನ್ನು ನುಡಿದಿದ್ದಾರೆ. ಹಾಗಿದ್ದರೆ, ಇವರಿಬ್ಬರು ನುಡಿದ ಭವಿಷ್ಯ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ತಂಡಗಳ ನಡುವಿನ ಪಂದ್ಯ ರೋಚಕವಾಗಿ ಇರುತ್ತೆ. ಒಂದ್ಕಡೆ ವಿರಾಟ್ ಕೊಹ್ಲಿಯ ಫೇವರಿಟ್ ನಂಬರ್ 18. ಈ ಸೀಸನ್ ಕೂಡ 18. ಹೀಗಾಗಿ ಇದು ವಿರಾಟ್‌ಗೆ ಭಾವನಾತ್ಮಕವಾಗಿ ವಿಶೇಷ ಸೀಸನ್. ಹೀಗಾಗಿ ಈ ಸೀಸನ್ ಗೆಲ್ಲಲೇ ಬೇಕು ಎಂದು ಪಣ ತೊಟ್ಟಿದ್ದಾರೆ. ಇನ್ನೊಂದು ಕಡೆ ಐಪಿಎಲ್‌ನ ಯಶಸ್ವಿ ಕ್ಯಾಪ್ಟನ್ ಎಂದೇ ಜನಪ್ರಿಯರಾಗಿರುವ ಶ್ರೇಯಸ್ ಅಯ್ಯರ್ ಪಂಜಾಬ್ ಮುನ್ನೆಡೆಸುತ್ತಿರುವುದು. ಹೀಗಾಗಿ ಯಾವ ತಂಡ ಗೆಲ್ಲುತ್ತೆ ಎನ್ನುವುದನ್ನು ಹೇಳುವುದಕ್ಕೆ ಆಗದ ಪರಿಸ್ಥಿತಿಯಲ್ಲಿ ಜನರು ಇದ್ದಾರೆ.

ಹಾಗಿದ್ದರೆ, ಆರ್ಯವರ್ಧನ್ ಗುರೂಜಿ ಪ್ರಕಾರ, ಫೈನಲ್ ಪಂದ್ಯವನ್ನು ಗೆಲ್ಲುವವರು ಯಾರು? ಇತ್ತೀಚೆಗೆ ಆರ್ಯವರ್ಧನ್ ಗುರೂಜಿ ಬಿಯಾಂಡ್ ಲಿಮಿಟ್ಸ್ ಎಂಬ ಯೂಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಫೈನಲ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂದು ಸಂಖ್ಯೆಗಳ ಆಧಾರದಲ್ಲಿ ಲೆಕ್ಕ ಹಾಕಿ ಭವಿಷ್ಯ ನುಡಿದಿದ್ದಾರೆ. ಆರ್ಯವರ್ಧನ್ ಪ್ರಕಾರ ಆರ್‌ಸಿಬಿ ಟಾಸ್ ಗೆಲ್ಲುತ್ತೆ. ಅಲ್ಲದೆ ಪಂಜಾಬ್‌ಗೆ ಗೆಲುವಿನ ಚಾನ್ಸ್ ಜಾಸ್ತಿಯಿದೆ ಎಂದು ಹೇಳಿದ್ದಾರೆ. ಆರ್‌ಸಿಬಿ ಚೆನ್ನಾಗಿ ಆಡಿ ಫೈನಲ್‌ಗೆ ಬಂದಿರಬಹುದು. ಆದರೆ, ಪಂಜಾಬ್‌ಗೆ ಜೂನ್ 3ನೇ ತಾರೀಕು ಒಳ್ಳೆಯ ದಿನ. ಆರ್‌ಸಿಬಿಗಿಂತ ಹೆಚ್ಚಾಗಿ ಪಂಜಾಬ್ ಹೆಚ್ಚು ಚಾನ್ಸ್ ಇದೆ ಎಂದಿದ್ದಾರೆ.

RCB Vs PBKS IPL Final match Aryavardhan Guruji and Ramachiluka Babayi Astrology prediction

ಆರ್‌ಸಿಬಿ ಅಭಿಮಾನಿಗಳು ಅಣ್ಣಾಮ್ಮನ ಪೂಜೆ ಮಾಡಿ ಪಂದ್ಯ ಗೆಲ್ಲುತ್ತೆ ಎಂದು ಹೇಳಿದ್ದಾರೆ. ಆ ಗ್ರೌಂಡ್‌ನಲ್ಲಿ ಸಿಕ್ಸ್ ಹೊಡೆಯುವುದಕ್ಕೆ ಹೋಗಬಾರದು. ಬೌಂಡರಿ ಹೊಡೆಯುವುದಕ್ಕೆ ಪ್ರಯತ್ನ ಪಡಬೇಕು ಎಂದು ಸಲಹೆ ನೀಡಿದ್ದಾರೆ. ಜೂನ್ 3 ಪಂಜಾಬ್ ಪರವಾಗಿದ್ದರೂ, ಆರ್‌ಸಿಬಿ ಗೆಲ್ಲುವ ಚಾನ್ಸ್ ಇದೆ ಎಂದೂ ಹೇಳಿ ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದಾರೆ.

ಇನ್ನೊಂದು ಕಡೆ ಗಿಳಿಯಿಂದ ಭವಿಷ್ಯ ಹೇಳಿಸುವ ರಾಮಚಿಲುಕ ಬಾಬಾಯಿ ಕೂಡ ಈ ಫೈನಲ್ ಪಂದ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಆರ್‌ಸಿಬಿ ಹಾಗೂ ಪಂಜಾಬ್ ಎರಡೂ ಪಂದ್ಯಗಳಲ್ಲಿ ಗಿಳಿಯು ಪಂಜಾಬ್ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದೆ. ಒಟ್ಟಾರೆ, ಆರ್ಯವರ್ಧನ್ ಗುರೂಜಿ ಎರಡೂ ತಂಡಗಳಿಗೂ ಚಾನ್ಸ್ ಇದೆ ಎಂದರೆ, ರಾಮಚಿಲುಕ ಬಾಬಾಯಿ ಪಂಜಾಬ್ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದಾರೆ.

More from Filmibeat

English summary
RCB Vs PBKS IPL Final match Aryavardhan Guruji and Ramachiluka Babayi Astrology prediction.
Read more about: rcb ipl astrology
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X