For Quick Alerts
  ALLOW NOTIFICATIONS  
  For Daily Alerts

  'RCB' ಇಂದಿನ ಪಂದ್ಯವನ್ನ ಗೆಲ್ಲಲೇಬೇಕು, ಸೋತ್ರೆ ಮತ್ತೆ ಅದೇ ಕಳಂಕ.!

  By Bharath Kumar
  |

  ಐಪಿಎಲ್ 11 ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಿನ ಸುಳಿಯಲ್ಲಿ ಸಿಲುಕಿದೆ. ಆಡಿದ ಎಲ್ಲ ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯವನ್ನ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಇದರಿಂದ ಆರ್.ಸಿ.ಬಿ ತಂಡದ ನಾಯಕ ವಿರಾಟ್ ಕೊಹ್ಲಿಗೆ ತಲೆನೋವಾಗಿದೆ.

  ಅದಕ್ಕಿಂತ ಹೆಚ್ಚಾಗಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಇದು ತಲೆನೋವಾಗಿದೆ. ಹೌದು, ಆರ್.ಸಿ.ಬಿ ಸೋತ ಪ್ರತಿ ಪಂದ್ಯದ ನಂತರವೂ ವಿರಾಟ್ ಪತ್ನಿ ಟ್ರೋಲ್ ಆಗ್ತಿದ್ದಾರೆ. ಆರ್.ಸಿ.ಬಿ ಫ್ಯಾನ್ಸ್ ಪಂದ್ಯದ ಸೋಲಿನ ಹೊಣೆಯನ್ನ ಅನುಷ್ಕಾ ಹಣೆಗೆ ಕಟ್ಟುತ್ತಿದ್ದಾರೆ. ಅನುಷ್ಕಾ ಮ್ಯಾಚ್ ನೋಡಲು ಬರುವುದೇ ತಂಡದ ಸೋಲಿಗೆ ಕಾರಣವೆಂದು ಕಾಲೆಳೆಯುತ್ತಿದ್ದಾರೆ.

  'ಈ ಸಲ ಕಪ್ ನಮ್ದೆ' ಅನ್ನೋದಕ್ಕೆ ಇದೊಂದು ಕಾರಣ ಸಾಕು.!'ಈ ಸಲ ಕಪ್ ನಮ್ದೆ' ಅನ್ನೋದಕ್ಕೆ ಇದೊಂದು ಕಾರಣ ಸಾಕು.!

  ಆದ್ದರಿಂದ ಇಂದಿನ ಪಂದ್ಯವನ್ನ ಗೆದ್ದು ವಿರಾಟ್ ಪತ್ನಿ ಮೇಲಿನ ಆಪಾದನೆಯನ್ನ ತೆಗೆದುಹಾಕಬೇಕಿದೆ. ಯಾಕಂದ್ರೆ, ಇವತ್ತು ಅದಕ್ಕೆ ಒಳ್ಳೆಯ ದಿನ. ಇಂದು (ಮೇ 1) ಅನುಷ್ಕಾ ಶರ್ಮಾ ಅವರ 30ನೇ ಹುಟ್ಟುಹಬ್ಬ. ಹೀಗಾಗಿ, ಮುಂಬೈ ವಿರುದ್ಧ ಇಂದು ನಡೆಯಲಿರುವ ಪಂದ್ಯವನ್ನ ಗೆದ್ದು ಕೊಹ್ಲಿ ತನ್ನ ಪತ್ನಿಗೆ ಉಡುಗೊರೆಯಾಗಿ ನೀಡಬೇಕಿದೆ.

  'ಫೋರ್ಬ್ಸ್ ಅಂಡರ್-30 ಏಷ್ಯಾ' ಪಟ್ಟಿಯಲ್ಲಿ ಸ್ಥಾನ ಪಡೆದ ಅನುಷ್ಕಾ ಶರ್ಮಾ'ಫೋರ್ಬ್ಸ್ ಅಂಡರ್-30 ಏಷ್ಯಾ' ಪಟ್ಟಿಯಲ್ಲಿ ಸ್ಥಾನ ಪಡೆದ ಅನುಷ್ಕಾ ಶರ್ಮಾ

  ಬಹುಶಃ ಅನುಷ್ಕಾ ಶರ್ಮಾಗೆ ಪತಿ ವಿರಾಟ್ ಕೊಹ್ಲಿ ಈ ವರ್ಷ ಇದಕ್ಕಿಂತ ಉತ್ತಮ ಗಿಫ್ಟ್ ನೀಡಲು ಸಾಧ್ಯವಿಲ್ಲ ಅನಿಸುತ್ತೆ. ಅದೇನೆ ಆಗಲಿ ಇಂದಿನ ಪಂದ್ಯ ಆರ್.ಸಿ.ಬಿಗಿಂತ ಕೊಹ್ಲಿಗೆ ಅತಿ ಮುಖ್ಯ. ತನ್ನ ಪತ್ನಿಯನ್ನ ಟೀಕೆಗಳಿಂದ ರಕ್ಷಿಸಬೇಕಿದೆ.

  ಜೊತೆಗೆ ಈ ಸರಣಿಯಲ್ಲಿ ತೀವ್ರ ಮುಖಭಂಗ ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಕಂಬ್ಯಾಕ್ ಮಾಡಲು ಇದು ಉತ್ತಮ ಸಮಯ. ಇಲ್ಲಿಂದ ಪಂದ್ಯಗಳನ್ನ ಸೋಲದೆ ಜಯದ ಲಯಕ್ಕೆ ಮರಳಿದರೇ ಪ್ಲೇ-ಆಫ್ ಕನಸು ಜೀವಂತವಾಗಿರಿಸಬಹುದು.

  ಒಟ್ನಲ್ಲಿ, ಬಾಲಿವುಡ್ ಇಂಡಸ್ಟ್ರಿಯ ಲಕ್ಕಿ ನಾಯಕಿಯಾಗಿರುವ ಅನುಷ್ಕಾ ಶರ್ಮಾ, ಆರ್.ಸಿ.ಬಿ ಸತತ ಪಂದ್ಯಗಳನ್ನ ಸೋಲುತ್ತಿರುವುದರಿಂದ ಟೀಕೆಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ, ಇಂದಿನ ಪಂದ್ಯ ಗೆದ್ದು ಅನುಷ್ಕಾ ಅವರ ಮೇಲಿನ ಆಪಾದನೆಯನ್ನು ತೆಗೆದುಹಾಕಬೇಕಿದೆ. ಇದಕ್ಕೆ ಕೊಹ್ಲಿ ಅಂಡ್ ಬಾಯ್ಸ್ ಸಹಾಯ ಮಾಡಲಿ ಎನ್ನುವುದು ಅಭಿಮಾನಿಗಳ ಆಸೆ.

  ಇಂದಿನ ಪಂದ್ಯ: ಆರ್.ಸಿ.ಬಿ vs ಮುಂಬೈ ಇಂಡಿಯನ್ಸ್
  ಸ್ಥಳ: ಬೆಂಗಳೂರು, ಸಮಯ ರಾತ್ರಿ 8 ಗಂಟೆ

  English summary
  On Anushka Sharma's 30th birthday today, Royal Challengers Bangalore, captained by her husband Virat Kohli, will face Mumbai Indians in the ongoing Indian Premier League. RCB's victory in this match, we believe, could be the best birthday for her from Virat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X