twitter
    For Quick Alerts
    ALLOW NOTIFICATIONS  
    For Daily Alerts

    ವಿಶ್ವರೂಪಂ ವಿವಾದದ ಹಿಂದಿನ ನಿಜವಾದ ಕಾರಣವೇನು?

    By Prasad
    |

    ಕಮಲ್ ಹಾಸನ್ ಅವರ ಚಿತ್ರ 'ವಿಶ್ವರೂಪಂ' ವಿವಾದಗಳ ಮೂಟೆಯನ್ನೇ ಬೆನ್ನಮೇಲೆ ಹೊತ್ತು ಕುಳಿತಿದೆ. ಈ ಮಹತ್ವಾಕಾಂಕ್ಷಿ ಚಿತ್ರದಲ್ಲಿ ಮುಸ್ಲಿಂರನ್ನು ಭಯೋತ್ಪಾದಕರನ್ನಾಗಿ ತೋರಲಾಗಿದೆ ಎಂದು ಮುಸ್ಲಿಂ ಸಂಘಟನೆಗಳು ತಮಿಳುನಾಡಿನಲ್ಲಿ ದಂಗೆ ಎದ್ದಿರುವುದು ಒಂದೆಡೆಯಾದರೆ, ವಿಶ್ವದಾದ್ಯಂತ ಚಿತ್ರ ನೋಡಿ ಬಂದವರು ಈ ಆರೋಪ ಕೇಳಿ ದಂಗುಬಡಿದಿದ್ದಾರೆ. ಚಿತ್ರ ನೋಡಿದವರು ಹೇಳುವುದೇನೆಂದರೆ, ಚಿತ್ರದಲ್ಲಿ ಮುಸ್ಲಿಂರನ್ನು ಆ ರೀತಿಯಾಗಿ ಬಿಂಬಿಸಿಲ್ಲ.

    ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಮುನ್ನ ಡಿಟಿಎಚ್ ಮುಖಾಂತರ ಮನೆಮನೆಯಲ್ಲಿ ಬಿಡುಗಡೆ ಮಾಡುವ ಕಮಲ್ ಅವರ ಪ್ಲಾನ್ ವಿರುದ್ಧ ಚಿತ್ರವಿತರಕರು, ಚಿತ್ರಮಂದಿರ ಮಾಲಿಕರು ದಂಗೆ ಎದ್ದಿದ್ದು ಕೂಡ ಮಾತುಕತೆಯಿಂದ ಬಗೆಹರಿಸಿಕೊಳ್ಳಲಾಗಿದೆ. ಅದರ ಪ್ರಕಾರ, ಫೆ.2ರವರೆಗೆ ಡಿಟಿಎಚ್ ಮುಖಾಂತರ ಬಿಡುಗಡೆ ಮಾಡಬಾರದೆಂದು ಒಪ್ಪಂದವಾಗಿರುವುದರಿಂದ ಆ ವಿವಾದವೂ ಈಗ ಬಗೆಹರಿದಿದೆ.

    ಹಾಗಿದ್ರೆ ಅಸಲಿಯತ್ತಾದರೂ ಏನು? ಡಿ.30, 2012ರಂದು ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ರಾಜಕೀಯದಿಂದ ದೂರವೇ ಉಳಿದಿರುವ ಕಮಲ್ ಹಾಸನ್ ನೀಡಿದ ಹೇಳಿಕೆ ಈ ಎಲ್ಲ ವಿವಾದದ ಮೂಲದ್ರವ್ಯ. ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಅವರ ಕುರಿತು ಬರೆಯಲಾಗಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ, ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರಿಂದ ಮೊದಲ ಪ್ರತಿಯನ್ನು ಪಡೆದ ನಂತರ ಕಮಲ್ ಅವರು, ತಮಿಳರು ಈ ದೇಶವನ್ನಾಡಲು ಸಮರ್ಥರಿದ್ದಾರೆ ಎಂದು ಹೇಳಿ ತಮ್ಮ ಬೆರಳನ್ನು ಪಿ. ಚಿದಂಬರಂ ಅವರತ್ತ ತೋರಿಸಿದ್ದರು.

    Real reason behind Vishwaroopam controversy

    ಕಮಲ್ ಅವರ ಈ ನುಡಿ 'ರಾಜಕೀಯ ಪ್ರೇರಿತ'ವಾಗಿರಲಿಕ್ಕಿಲ್ಲ ಅಥವಾ ಏನನ್ನೋ ಉದ್ದೇಶವಾಗಿಟ್ಟುಕೊಂಡು ಹೇಳಿರಲಿಕ್ಕಿಲ್ಲ. ಆದರೆ, ಅವರಿಗರಿವಿಲ್ಲದಂತೆ 'ವಿಶ್ವರೂಪಂ' ವಿವಾದ ಅವರನ್ನು ಸಂಕೋಲೆಯಲ್ಲಿ ಸಿಲುಕಿಸಿದೆ. ಡಿಎಂಕೆ ವಿರೋಧಿ ಜಯಲಲಿತಾ ಅವರನ್ನು ಕೆರಳಿಸಿರುವುದು ಕಮಲ್ ಅವರ ಈ ಹೇಳಿಕೆಯೆ. ಮುಸ್ಲಿಂ ಸಂಘಟನೆಗಳು ವಿಶ್ವರೂಪಂ ವಿರುದ್ಧ ದೂರು ಸಲ್ಲಿಸುತ್ತಿದ್ದಂತೆ, ಮುಂದೊಂದು ದಿನ ಪ್ರಧಾನಿಯಾಗುವ ಕನಸು ಕಟ್ಟಿಕೊಂಡಿರುವ ಜಯಲಲಿತಾ ಅವರ ಎಐಎಡಿಎಂಕೆ ಸರಕಾರ ಕಮಲ್ ಹಾಸನ್ ಅವರ ವಿರುದ್ಧ ಮುರಿದುಕೊಂಡು ಬಿದ್ದಿದೆ.

    ವಿಶ್ವರೂಪಂ ಚಿತ್ರದಂತೆಯೆ ವಿಜಯ್ ಅವರು ನಟಿಸಿದ್ದ ತುಪಾಕಿ ಚಿತ್ರಕ್ಕೂ ಇದೇ ರೀತಿಯ ವಿವಾದ ಸುತ್ತಿಕೊಂಡಿತ್ತು. ಆಗ ಕೂಡ ಮುಸ್ಲಿಂ ಸಂಘಟನೆಗಳು ಚಿತ್ರದ ವಿರುದ್ಧ ದೂರು ನೀಡಿದ್ದವು. ಚಿತ್ರದ ಪ್ರದರ್ಶನಕ್ಕೆ ಆಗ ಯಾವುದೇ ಧಕ್ಕೆಯಾಗಿರಲಿಲ್ಲ, ಚಿತ್ರ ತಮಿಳುನಾಡಿನಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಕೇಂದ್ರ ಸರಕಾರ ಚಿತ್ರದಲ್ಲಿ ಅಂತಹ ವಿವಾದಾತ್ಮಕ ದೃಶ್ಯಗಳಿಲ್ಲ ಎಂದು ಹೇಳಿದ್ದರೂ ರಾಜ್ಯ ಸರಕಾರ ಕಮಲ್ ವಿರುದ್ಧ ಹಟ ಸಾಧಿಸುತ್ತಿದೆ. ಬುಧವಾರ ಚೆನ್ನೈನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಮಲ್ ಅವರು, ತಮ್ಮ ಚಿತ್ರಕ್ಕೇಕೆ ಹೀಗಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. [ವಿಶ್ವರೂಪಂ ಚಿತ್ರವಿಮರ್ಶೆ]

    English summary
    What is the real reason behind multilingual movie Vishwaroopam, directed and produced by actor Kamal Haasan? So far, Kamal has stayed away from politics. But, a statement made at a political function by Kamal has put him in the spot.
    Thursday, January 31, 2013, 14:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X