»   » ಅಲ್ಲು ಅರ್ಜುನ್ ಜೊತೆ ರಿಯಲ್ ಸ್ಟಾರ್ ಉಪೇಂದ್ರ

ಅಲ್ಲು ಅರ್ಜುನ್ ಜೊತೆ ರಿಯಲ್ ಸ್ಟಾರ್ ಉಪೇಂದ್ರ

Posted By:
Subscribe to Filmibeat Kannada

ಟಾಲಿವುಡ್ ನಲ್ಲಿ ಹೊಸ ಅಲೆ ಹುಟ್ಟಿಸಿದಂತಹ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್. ಸಾಕಷ್ಟು ಕೌಟುಂಬಿಕ ಕಥಾಹಂದರದ ಸಿನಿಮಾಗಳನ್ನು ಕೊಟ್ಟಂತಹ ಟಾಲಿವುಡ್ ಡೈರೆಕ್ಟರ್ ಇವರು. ಇದೀಗ ಹೊಸ ಕಥಾವಸ್ತುವಿನೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದಾರೆ.

ತ್ರಿವಿಕ್ರಮ್ ಚಿತ್ರಗಳ ವಿಶೇಷತೆ ಎಂದರೆ, ಹೀರೋಗಳನ್ನು ಪ್ರೆಸೆಂಟ್ ಮಾಡೋ ರೀತಿ, ಕತ್ತಿಯ ಅಂಚಿನಂತಹ ಡೈಲಾಗ್ಸ್, ಭಿನ್ನ ಕಥೆ. ಅವರ ಸಿನಿಮಾಗಳನ್ನು ಕಾತುರದಿಂದ ಎದುರುನೋಡುವ ಪ್ರೇಕ್ಷಕ ವರ್ಗವೂ ಇದೆ. [ಉಪೇಂದ್ರ ಮಾನವೀಯತೆಯ ಮತ್ತೊಂದು ಮುಖ]

Uppi to act with Allu Arjun

ಇದೀಗ ತ್ರಿಕ್ರಮ್ ಅವರು ಹೊಸ ತ್ರಿವಿಕ್ರಮ ಸಾಧನೆಯನ್ನೇ ಮಾಡಲು ಹೊರಟಿದ್ದಾರೆ. ಈ ಬಾರಿ ಅವರು ಮಲ್ಟಿ ಸ್ಟಾರರ್ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ತ್ರಿವಿಕ್ರಮ್ ಸಿನಿಮಾದಲ್ಲಿ ಈ ಭಾರಿ ಮಿಂಚಲಿರುವ ಸ್ಟಾರ್ ಅಲ್ಲು ಅರ್ಜುನ್. ಇನ್ನೂ ಶೀರ್ಷಿಕೆ ಇಡದ ಈ ಚಿತ್ರದಲ್ಲಿ ದಕ್ಷಿಣದ ಹಲವು ತಾರೆಗಳು ಬಣ್ಣ ಹಚ್ಚಲಿದ್ದಾರೆ.

ವಿಶೇಷ ಎಂದರೆ ರಿಯಲ್ ಸ್ಟಾರ್ ಉಪೇಂದ್ರ ಅವರು ವಿಶೇಷ ಪಾತ್ರದಲ್ಲಿ ಈ ತೆಲುಗು ಚಿತ್ರದಲ್ಲಿ ಕಾಣಿಸಲಿದ್ದಾರೆ ಎಂಬುದು. ಉಪ್ಪಿ ಅವರದು ಯಾವ ರೀತಿಯ ಪಾತ್ರ ಎಂಬುದು ಇನ್ನಷ್ಟೇ ಗೊತ್ತಾಗಬೇಕು. ಈ ಚಿತ್ರದಲ್ಲಿ ಅರ್ಜುನ್ ಅವರಿಗೆ ತಂದೆಯಾಗಿ ಬಿಗ್ ಬಿ ಅಭಿನಯಿಸಲಿದ್ದಾರೆ ಎಂಬುದು ಇನ್ನೊಂದು ವಿಶೇಷ.

ಇದಕ್ಕೂ ಮುನ್ನ ಮೋಹನ್ ಲಾಲ್ ಹಾಗೂ ಮಮ್ಮುಟ್ಟಿ ಅವರಿಗೂ ಬುಲಾವ್ ಹೋಗಿದೆ. ಅಲ್ಲು ಅರ್ಜುನ್ ಅವರಿಗೆ ಯಾರು ತಂದೆಯಾಗಿ ಕಾಣಿಸಲಿದ್ದಾರೆ ಎಂಬುದು ಇನ್ನೂ ಫೈನಲ್ ಆಗಿಲ್ಲ. ಈ ಚಿತ್ರಕ್ಕೆ ನಿತ್ಯಾ ಮೆನನ್, ಸ್ನೇಹಾ ಹಾಗೂ ಸಮಂತಾ ನಾಯಕಿಯರು. (ಏಜೆನ್ಸೀಸ್)

English summary
Sandalwood Real Star Upendra to act with Tollywood hero Allu Arjun in his next with Trivikram Srinivas. The movie simultaneously made in Telugu, Tamil and Malayalam languages.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada