For Quick Alerts
  ALLOW NOTIFICATIONS  
  For Daily Alerts

  ಐತಿಹಾಸಿಕ ಚಿತ್ರಕ್ಕಾಗಿ 5ನೇ ಬಾರಿ ಒಂದಾದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಾಗಣ್ಣ

  |

  ರಿಯಲ್ ಸಟಾರ್ ಉಪೇಂದ್ರ ಪ್ರಜಾಕೀಯದ ಜೊತೆಗೆ ಸಾಲು ಸಾಲು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿರುವ ಉಪೇಂದ್ರ ಕಡೆಯಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ರಿಯಲ್ ಸ್ಟಾರ್ ಐತಿಹಾಸಿಕ ಸಿನಿಮಾ ಮಾಡಲು ಮುಂದಾಗಿದ್ದು ಚಿತ್ರಕ್ಕೆ 'ಕುರುಕ್ಷೇತ್ರ' ಖ್ಯಾತಿಯ ನಿರ್ದೇಶಕ ನಾಗಣ್ಣ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ.

  ವಿಶೇಷ ಎಂದರೆ ನಾಗಣ್ಣ ಮತ್ತು ಉಪೇಂದ್ರ ಈಗಾಗಲೇ 4 ಸಿನಿಮಾಗಳನ್ನು ಮಾಡಿದ್ದಾರೆ. ಇದೀಗ 5ನೇ ಸಿನಿಮಾಗೆ ಮತ್ತೆ ಒಂದಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಈ ಹಿಂದೆ ಕುಟುಂಬ, ಗೌರಮ್ಮ, ಗೋಕರ್ಣ, ದುಬೈ ಬಾಬು ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದಾರೆ. ಮುಂದೆ ಓದಿ..

  ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಉಪೇಂದ್ರ

  ಐತಿಹಾಸಿಕ ಸಿನಿಮಾಗಾಗಿ ಒಂದಾದ ಉಪೇಂದ್ರ-ನಾಗಣ್ಣ

  ಐತಿಹಾಸಿಕ ಸಿನಿಮಾಗಾಗಿ ಒಂದಾದ ಉಪೇಂದ್ರ-ನಾಗಣ್ಣ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಕುರುಕ್ಷೇತ್ರ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಪೌರಾಣಿಕ ಸಿನಿಮಾ ಮಾಡಿದ್ದರು. ಇದೀಗ ಉಪೇಂದ್ರ ಜೊತೆ ಐತಿಹಾಸಿಕ ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದ್ದು, ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.

  ಸಿನಿಮಾ ಬಗ್ಗೆ ನಿರ್ದೇಶಕ ನಾಗಣ್ಣ ಹೇಳಿದ್ದೇನು?

  ಸಿನಿಮಾ ಬಗ್ಗೆ ನಿರ್ದೇಶಕ ನಾಗಣ್ಣ ಹೇಳಿದ್ದೇನು?

  ಈ ಬಗ್ಗೆ ಇಂಗ್ಲಿಷ್ ವೆಬ್ ಪೋರ್ಟಲ್ ಜೊತೆ ಮಾತನಾಡಿರುವ ನಿರ್ದೇಶಕ ನಾಗಣ್ಣ, 'ಇಬ್ಬರ ನಡುವೆ ಉತ್ತಮ ಹೊಂದಾಣಿಕೆ ಇದೆ. ಹಾಗಾಗಿ ಸುಲಭವಾಗಿ ಕೆಲಸ ಮಾಡಲು ಸಹಾಯಕವಾಗುತ್ತೆ. ಹೊಸ ಸಿನಿಮಾ ಐತಿಹಾಸಿಕ ಘಟನೆಯನ್ನು ಆಧರಿಸಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ತಯಾರಾಗಲಿದೆ. ಸದ್ಯ ಸ್ಕ್ರಿಪ್ಟ್ ಕೆಲಸ ಆರಂಭವಾಗಿದೆ. ಸಿನಿಮಾದಲ್ಲಿ ನಾಯಕಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ಅಭಿನಯಿಸಲಿದ್ದಾರೆ. ರಾಜಸ್ಥಾನ, ಉತ್ತರ ಕರ್ನಾಟಕ, ಕೇರಳ ಸೇರಿದಂತೆ ಮುಂತಾದ ಕಡೆ ಚಿತ್ರೀಕರಣ ಮಾಡಲಿದ್ದೇವೆ' ಎಂದು ಹೇಳಿದ್ದಾರೆ.

  ಪ್ರಜಾಕೀಯ ಪಕ್ಷವನ್ನು ಮೆಚ್ಚಿ ಕೊಂಡಾಡಿದ ಖ್ಯಾತ ನಿರ್ದೇಶಕ: ಧನ್ಯವಾದ ಹೇಳಿದ ಉಪ್ಪಿ

  4 ಭಾಷೆಯಲ್ಲಿ ತಯಾರಾಗುತ್ತಿದೆ ಈ ಸಿನಿಮಾ

  4 ಭಾಷೆಯಲ್ಲಿ ತಯಾರಾಗುತ್ತಿದೆ ಈ ಸಿನಿಮಾ

  ದೊಡ್ಡ ಮಟ್ಟದಲ್ಲಿ ಸಿದ್ಧವಾಗುತ್ತಿದೆ ಅಂದಮೇಲೆ ಪ್ಯಾನ್ ಇಂಡಿಯಾ ಸಿನಿಮಾವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಸಿನಿಮಾ ರಿಲೀಸ್ ಆಗಲಿದೆ. ಚಿತ್ರಕ್ಕೆ ಸಂಗೀತ ಮಾಂತ್ರಿಕ ಹಂಸಲೇಖ ಸಂಗೀತ ಸಂಯೋಜನೆ ಮಾಡಲಿದ್ದಾರೆ. 2021ಕ್ಕೆ ಸಿನಿಮಾ ಸೆಟ್ಟೇರಲಿದ್ದು, ಹೆಚ್ಚಿನ ಮಾಹಿತಿ ಮುಂದಿನ ವರ್ಷ ಬಹಿರಂಗವಾಗುವ ಸಾಧ್ಯತೆ ಇದೆ.

  ಉಪೇಂದ್ರ ಬಳಿ ಇರುವ ಸಿನಿಮಾಗಳು

  ಉಪೇಂದ್ರ ಬಳಿ ಇರುವ ಸಿನಿಮಾಗಳು

  ಉಪೇಂದ್ರ ಬಳಿ ಈಗಾಗಲೇ ಸಾಕಷ್ಟು ಸಿನಿಮಾಗಳಿವೆ. ಸದ್ಯ ಬಹುನಿರೀಕ್ಷೆಯ ಕಬ್ಜ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಇತ್ತೀಚಿಗೆ ಲಗಾಮು ಎನ್ನುವ ಹೊಸ ಸಿನಿಮಾ ಕೂಡ ಅನೌನ್ಸ್ ಆಗಿದೆ. ತೆಲುಗಿನಲ್ಲಿ ವರುಣ್ ತೇಜ್ ಅಭಿನಯದ ಬಾಕ್ಸರ್ ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲಾ ಸಿನಿಮಾಗಳ ಜೊತೆಗೆ ಐತಿಹಾಸಿಕ ಸಿನಿಮಾ ಕೂಡ ಸೇರಿದೆ.

  English summary
  Real star Upendra And Director Naganna to collaborate for fifth time with Historical subject.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X