ಟ್ರೇಲರ್ ನಲ್ಲಿ 'ಬ್ರಹ್ಮ' ರಿಯಲ್ ಸ್ಟಾರ್ ಉಪ್ಪಿ ಸೂಪರ್

By Mahesh

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಆರ್ ಚಂದ್ರು ನಿರ್ದೇಶನದ 'ಬ್ರಹ್ಮ' ಚಿತ್ರದ ಟ್ರೇಲರ್ ಬಿಡುಗಡೆಗೊಂಡು ಸಾಕಷ್ಟು ಅಲೆಗಳನ್ನು ಎಬ್ಬಿಸಿದೆ. ಚಿತ್ರದ ಟೈಟಲ್ ನಿಂದ ಹಿಡಿದು ಅದರ ಹಿಂದಿರುವ ನಿರ್ದೇಶಕ ಆರ್ ಚಂದ್ರು ಅವರ ಕಾರಣ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ. 'The Leader' ಎಂಬುದು ಚಿತ್ರದ ಅಡಿಬರಹ. ಈಗಾಗಲೆ ಈ ಚಿತ್ರದ ಮೇಕಿಂಗ್ ವಿಡಿಯೋ ಯೂಟ್ಯೂಬ್ ನಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದು ಅಭಿಮಾನಿಗಳಿಗೆ ಗೊತ್ತೇ ಇದೆ.

ಈಗ ದೀಪಾವಳಿ ಕೊಡುಗೆಯಾಗಿ ಯೂಟ್ಯೂಬ್ ನಲ್ಲಿ ಬ್ರಹ್ಮ ಚಿತ್ರದ ಟ್ರೇಲರ್ ಕಾಣಿಸಿಕೊಂಡಿದ್ದು ಸಿನಿರಸಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ಕನ್ನಡ,ತೆಲುಗು,ತಮಿಳು ಸೇರಿದಂತೆ ಮೂರು ಭಾಷೆಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

ಚಿತ್ರದ ಮೇಕಿಂಗ್ ವಿಡಿಯೋ, ಫಸ್ಟ್ ಲುಕ್ ಝಲಕ್ ಲಕ್ಷಾಂತರ ಹಿಟ್ ನೀಡಿರುವುದರಿಂದ ಟ್ರೇಲರ್ ಬಗ್ಗೆ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ. ಸದ್ಯಕ್ಕೆ 'The Leader' ಎಂಬುದು ಚಿತ್ರದ ಅಡಿಬರಹ ಹೊಂದಿರುವ ಮೈಲಾರಿ ಎಂಟರ್ ಪ್ರೈಸಸ್ ನ ಈ ಚಿತ್ರದ ಟ್ರೇಲರ್ ಮೂರುವರೆ ಸಾವಿರ ಹಿಟ್ಸ್ ಪಡೆದಿದೆ. 'ರಿಯಲ್ ಸ್ಟಾರ್ ಉಪೇಂದ್ರ' ಹಾಗೂ 'ಪ್ರಣೀತ' ನಟನೆಯ, ಬಹು ನಿರೀಕ್ಷಿತ, 'ಬ್ರಹ್ಮ' ಚಿತ್ರದ ಟ್ರೇಲರ್ ಹೊಸ ದಾಖಲೆ ನಿರ್ಮಿಸುತ್ತದೆ ಎಂಬ ನಿರೀಕ್ಷೆ ನಿರ್ದೇಶಕ ಆರ್ ಚಂದ್ರು ಅವರಿಗಿದೆ. ಕಾದು ನೋಡೋಣ...

ಫಸ್ಟ್ ಲುಕ್ ಹಿಸ್ಟರಿ

ಫಸ್ಟ್ ಲುಕ್ ಹಿಸ್ಟರಿ

ಆರ್ ಚಂದ್ರು ನಿರ್ದೇಶನದ ಉಪೇಂದ್ರ ಅಭಿನಯದ ಬ್ರಹ್ಮ ಚಿತ್ರದ ವಿಭಿನ್ನ ಫಸ್ಟ್ ಲುಕ್ ಸೆ.14ರಂದು ಬಿಡುಗಡೆಗೊಂಡು ಒಂದೇ ದಿನದಲ್ಲಿ 55,804 ಹಿಟ್ಸ್ ಕೊಟ್ಟಿತ್ತು. ಸದ್ಯಕ್ಕೆ 10,17,188 ವೀಕ್ಷಣೆ ಪಡೆದು ಹೊಸ ದಾಖಲೆ ನಿರ್ಮಿಸಿದೆ. ಇದು ಡೈರೆಕ್ಟರ್ಸ್ ಕಟ್ ವಿಡಿಯೋ ಆದರೆ, ದೀಪಾವಳಿಗೆ ನೀಡುವುದು ಟ್ರೇಲರ್ ಕಮ್ ಫಸ್ಟ್ ಲಿಕ್ ಎನ್ನಬಹುದು ಎಂದು ಚಂದ್ರು ಗೊಂದಲ ಸರಿಪಡಿಸಿದ್ದಾರೆ.

 ನಿರ್ದೇಶಕ-ನಿರ್ದೇಶಕ

ನಿರ್ದೇಶಕ-ನಿರ್ದೇಶಕ

ರಿಯಲ್ ಸ್ಟಾರ್ ಉಪೇಂದ್ರ ಅವರು ಈ ಚಿತ್ರದ ಕಥೆ ಮೆಚ್ಚಿಗೆಯಾದ ಮೇಲೆ ಚಿತ್ರವನ್ನು ಒಪ್ಪಿಕೊಂಡರಂತೆ ಜನಪ್ರಿಯ ನಿರ್ದೇಶಕ ಎನಿಸಿರುವ ಆರ್ ಚಂದ್ರು ಅವರು ವಿಭಿನ್ನ ನಿರ್ದೇಶಕ ಉಪ್ಪಿ ಅವರಿಗೆ ನಿರ್ದೇಶನ ಮಾಡುತ್ತಿರುವುದು ಇದೆ ಮೊದಲು. ಹೀಗಾಗಿ ಸಹಜವಾಗಿ ಇವರಿಬ್ಬರ ಕಾಂಬಿನೇಷನ್ ಮೇಲೆ ನಿರೀಕ್ಷೆ ತುಂಬಾ ಇದೆ

ಗಮನ ಸೆಳೆದ ಗೆಟಪ್

ಗಮನ ಸೆಳೆದ ಗೆಟಪ್

ಚಿತ್ರದ ಮುಹೂರ್ತ ಹಾಗೂ ಡೈರೆಕ್ಟರ್ಸ್ ಕಟ್ ವಿಡಿಯೋಗಳಲ್ಲೂ ಎದ್ದು ಕಾಣುತ್ತಿದ್ದದ್ದು ಉಪೇಂದ್ರ ಅವರಿಗೆ ಹಾಕಲಾಗಿರುವ ಉಡುಗೆ ತೊಡುಗೆಗಳು ವಿಭಿನ್ನ ಗೆಟೆಪ್ ನಲ್ಲಿ ಕಾಣಿಸಿಕೊಂಡಿರುವ ಉಪೇಂದ್ರ ಅವರು H2O ಚಿತ್ರದ ನಂತರ 16ನೇ ಶತಮಾನದ ಆರಸನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ಆದರೆ ಕಥೆ ಬಗ್ಗೆ ಚಂದ್ರು ಸುಳಿವು ನೀಡಿಲ್ಲ

ಪ್ರಣೀತಾ ಉಪ್ಪಿ ಜೋಡಿ

ಪ್ರಣೀತಾ ಉಪ್ಪಿ ಜೋಡಿ

ಇದೇ ಮೊದಲ ಬಾರಿಗೆ ಗ್ಲಾಮರ್ ಗೊಂಬೆ ಪ್ರಣೀತಾ ಅವರು ಉಪೇಂದ್ರ ಅವರಿಗೆ ನಾಯಕಿಯಾಗಿ ಕಾಣಿಸಲಿದ್ದಾರೆ. ತೆಲುಗಿನಲ್ಲಿ ಪವನ್ ಕಲ್ಯಾಣ್ ನಂತರ ಜ್ಯೂ ಎನ್ಟಿಆರ್ ಜತೆ ನಟಿಸುವ ತವಕದಲ್ಲಿರುವ ಪ್ರಣೀತಾ ಇಲ್ಲಿ ಉಪ್ಪಿ ಜತೆ ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರಂತೆ

ತಾಂತ್ರಿಕವಾಗಿ ಶ್ರೀಮಂತ ಚಿತ್ರ

ತಾಂತ್ರಿಕವಾಗಿ ಶ್ರೀಮಂತ ಚಿತ್ರ

ಈ ಚಿತ್ರದ ತಾಂತ್ರಿಕ ಬಳಗದಲ್ಲಿ ಹಾಲಿವುಡ್ ಹಾಗೂ ಬಾಲಿವುಡ್ ಚಿತ್ರಗಳಿಗೆ ಕೆಲಸ ಮಾಡಿದ ತಂತ್ರಜ್ಞರಿದ್ದಾರೆ. ಧೂಮ್ 2 ನಂಥ ಚಿತ್ರಗಳಿಗೆ ವಿಎಫ್ಎಕ್ಸ್ ಮಾಡಿದ ತಂತ್ರಜ್ಞರನ್ನು ಬಳಸಿಕೊಳ್ಳಲಾಗಿದೆ ಎಂದು ಚಂದ್ರು ಹೇಳಿದ್ದಾರೆ. ಚಿತ್ರಕ್ಕೆ ಏನಿಲ್ಲವೆಂದರೂ 30 ಕೋಟಿ ರು ಗೂ ಮೀರಿ ಖರ್ಚು ಮಾಡಲಾಗಿದೆಯಂತೆ

ಕನ್ನಡ, ತೆಲುಗು ಭಾಷೆಯಲ್ಲಿ ಚಿತ್ರ ಬರುವುದು ಗ್ಯಾರಂಟಿಯಾಗಿದೆ. ತಮಿಳಿಗೂ ಚಿತ್ರ ಡಬ್ ಆಗುವ ನಿರೀಕ್ಷೆಯಿದೆ. ಡಿಸೆಂಬರ್ ನಲ್ಲಿ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿದೆ.

ಟ್ರೇಲರ್ ನೋಡಿ ಆನಂದಿಸಿ

ಸದ್ಯಕ್ಕೆ ಬಹುನಿರೀಕ್ಷಿತ್ ಬ್ರಹ್ಮ ಚಿತ್ರದ ಟ್ರೇಲರ್ ನೋಡಿ ಆನಂದಿಸಿ

More from Filmibeat

English summary
The Real Star Upendra and Pranitha starrer movie 'Brahma' Trailer hits internet. Brahma is slated to release in 250-300 screens during the month of December. The same movie will be released under the title Upendrudu in Telugu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X