'ನಾನೂ ಒಂದು ಹೆಣ್ಣುಮಗುವಿನ ತಂದೆ': ನೆಟ್ಟಿಗರ ಟೀಕೆಗೆ ಉಪೇಂದ್ರ ಬೇಸರ

Recommended Video

ದಿಶಾ ಕೇಸ್ ಬಲ್ಲಿ ಉಪ್ಪಿ ಮಾಡಿದ ಟ್ವೀಟ್ ಯಾರ ಪರವಾಗಿತ್ತು ಗೊತ್ತಾ..? | FILMIBEAT KANNADA

ಇಡೀ ದೇಶವನ್ನೆ ಬೆಚ್ಚಿಬೀಳಿಸಿದ್ದ ಹೈದರಾಬಾದ್ ಪಶು ವೈದ್ಯೆ ರೇಪ್ ಮತ್ತು ಹತ್ಯೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಸುಟ್ಟು ಬಿಸಾಡಿದ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಒಂದಿಷ್ಟು ಪ್ರಶ್ನೆಗಳನ್ನು ಎತ್ತಿದ್ದರು. ಉಪೇಂದ್ರ ರಿಯಾಲಿಟಿ ಚೆಕ್ ಗೆ ಹೊರಟಿರುವುದರ ವಿರುದ್ಧ ನೆಟ್ಟಿಗರು ರೊಚ್ಚಿಗೆದ್ದಿದ್ದರು.

ಇಡೀ ದೇಶವೆ ಪೊಲೀಸರ ಕಾರ್ಯವೈಕರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದರೆ, ರಿಯಲ್ ಸ್ಟಾರ್ ರಿಯಾಲಿಟಿ ಚೆಕ್ ಗೆ ಹೊರಟಿದ್ದಾರೆ ಎಂದು ಉಪ್ಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಉಪೇಂದ್ರ ಅವನ್ನು ಸರಿಯಾಗೆ ತರಾಟೆಗೆ ತೆಗೆದುಕೊಂಡಿದ್ದರು.

ಸದ್ಯ ಈ ಬಗ್ಗೆ ಉಪೇಂದ್ರ ಮತ್ತೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಒಂದು ಹೆಣ್ಣುಮಗುವಿನ ತಂದೆ. ಅತ್ಯಾಚಾರಿಗಳ ಪರವಾಗಿ ಮಾತನಾಡಿದೆ ಎಂದು ಬಿಂಬಿಸುವಂತಹ ಹ್ಯೇಯ ಮನಸಿನ ಜನ ಈ ಸಮಾಜದಲ್ಲಿ ಇದ್ದಾರಲ್ಲಾ ಎಂದು ನೋವಾಗುತ್ತಿದೆ ಎಂದು ಹೇಳಿದ್ದಾರೆ.

Real Star Upendra Clarified His Tweet About Encounter Of Hyderabad Rapist

ಈ ಬಗ್ಗೆ ಟ್ವೀಟ್ ಮಾಡಿರುವ ಉಪೇಂದ್ರ "ಎನ್ ಕೌಂಟರ್ ಗಳು ಪ್ರಭಾವಿಗಳಿಂದ ದುರುಪಯೋಗವಾಗಬಾರದು, ನ್ಯಾಯಾಂಗ ವ್ಯವಸ್ಥೆಯನ್ನು ಸರ್ಕಾರ ಚುರುಕುಗೊಳಿಸಬೇಕು ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು. ನಾನೂ ಒಂದು ಹೆಣ್ಣು ಮಗುವಿನ ತಂದೆ, ಅತ್ಯಾಚಾರಿಗಳ ಪರವಾಗಿ ಮಾತನಾಡಿದೆ ಎಂದು ಬಿಂಬಿಸುವಂತಹ ಹ್ಯೇಯ ಮನಸಿನ ಜನ ಈ ಸಮಾಜದಲ್ಲಿ( ಕೆಲವರು ನನ್ನ ಜೊತೆಗೇ ) ಇದ್ದಾರಲ್ಲ ಎಂದು ನೋವಾಗುತ್ತಿದೆ. ಎಂದು ಹೇಳಿದ್ದಾರೆ.

ಎನ್ ಕೌಂಟರ್ ಬಗ್ಗೆ ಉಪೇಂದ್ರ ಹೇಳಿದ್ದೇನು?

"ಈ ನಾಲ್ಕು ಹುಡುಗರೇ ಆಕೆಯನ್ನು ರೇಪ್ ಮಾಡಿ ಸುಟ್ಟು ಹಾಕಿದ್ದಾರೋ ಇಲ್ಲ ಇದರ ಹಿಂದೆ ಬೇರೆ ಯಾರೋ ಪ್ರಮುಖ ವ್ಯಕ್ತಿಗಳ ಕೈವಾಡವಿದೆಯೊ? ಈ ರೀತಿಯ ಎನ್ ಕೌಂಟರ್ ಪ್ರಮುಖ ವ್ಯಕ್ತಿಗಳ ಕೇಸ್ನಲ್ಲಿ ಯಾಕಾಗುವುದಿಲ್ಲ? ಕೋರ್ಟನಲ್ಲಿ ವಿಚಾರಣೆಗೂ ಮುನ್ನ ನಡೆದ ಈ ಎನ್ಕೌಂಟರ್ ಇನ್ನು ಮುಂದೆ ಪ್ರಭಾವಶಾಲೀ ಭ್ರಷ್ಟ ರೇಪಿಷ್ಟ್ ಗಳಿಗೆ ರತ್ನಗಂಬಳಿಯಾಗುವುದೇ?" ಎಂದು ಪ್ರಶ್ನಿಸಿದ್ದರು. ಉಪೇಂದ್ರ ಟ್ವೀಟ್ ಗೆ ಭಾರಿ ವಿರೋಧ ವ್ಯಕ್ತವಾಗಿತ್ತು.

More from Filmibeat

English summary
Real star Upendra clarified for his tweet about police encounter of Hyderabad rapist.
Read more about: upendra ಉಪೇಂದ್ರ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X