For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರಗೆ 1 ಮಿಲಿಯನ್ ಫಾಲೋವರ್ಸ್: ಹೆಚ್ಚು ಫಾಲೋವರ್ಸ್ ಹೊಂದಿರುವ 2ನೇ ನಟ

  |

  ಸ್ಯಾಂಡಲ್‌ವುಡ್‌ ನರಿಯಲ್ ಸ್ಟಾರ್, ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಸದ್ಯ ಕೊರೊನಾ ಸಂಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಉಪೇಂದ್ರ ನೆರವು ನೀಡುವ ಮೂಲಕ ಮಾನವೀಯ ಕೆಲಸ ಮಾಡುತ್ತಿದ್ದಾರೆ.

  ಮತ್ತೊಂದು ಮೈಲಿಗಲ್ಲು ತಲುಪಿದ ಉಪೇಂದ್ರ | Filmibeat Kannada

  ಸಿನಿಮಾ ಜೊತೆಗೆ ಪ್ರಜಾಕೀಯದಲ್ಲೂ ಸಕ್ರೀಯರಾಗಿರುವ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯರಾಗಿರುವ ಸ್ಯಾಂಡಲ್ ವುಡ್ ಕಲಾವಿದರಲ್ಲಿ ಉಪೇಂದ್ರ ಕೂಡ ಒಬ್ಬರು. ಇದೀಗ ರಿಯಲ್ ಸ್ಟಾರ್ ಟ್ವಿಟ್ಟರ್‌ನಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಮತ್ತೊಂದು ಸಾಧನೆ ಮಾಡಿದ್ದಾರೆ. ಮುಂದೆ ಓದಿ..

  'ನಾನು ಈ ರಾಜ್ಯದ ಮುಖ್ಯಮಂತ್ರಿ (CM) ಆಗ್ಬೇಕು': ಫ್ಯಾನ್ಸ್‌ಗೆ ನಿರಾಸೆ ತಂದ ಉಪ್ಪಿ ನಿರ್ಧಾರ 'ನಾನು ಈ ರಾಜ್ಯದ ಮುಖ್ಯಮಂತ್ರಿ (CM) ಆಗ್ಬೇಕು': ಫ್ಯಾನ್ಸ್‌ಗೆ ನಿರಾಸೆ ತಂದ ಉಪ್ಪಿ ನಿರ್ಧಾರ

  ಮೊದಲ ಸ್ಥಾನದಲ್ಲಿ ಸುದೀಪ್, 2ನೇ ಸ್ಥಾನದಲ್ಲಿ ಉಪೇಂದ್ರ

  ಮೊದಲ ಸ್ಥಾನದಲ್ಲಿ ಸುದೀಪ್, 2ನೇ ಸ್ಥಾನದಲ್ಲಿ ಉಪೇಂದ್ರ

  ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಸ್ಯಾಂಡಲ್‌ವುಡ್‌ನ 2ನೇ ನಟ ಉಪೇಂದ್ರ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಸುದೀಪ್ ಟ್ವಿಟ್ಟರ್‌ನಲ್ಲಿ 2.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಇದ್ದರೆ ಮೂರನೆ ಸ್ಥಾನದಲ್ಲಿ ದರ್ಶನ್ ಇದ್ದಾರೆ. ಚಾಲೆಂಜಿಂಗ್ ಸ್ಟಾರ್ ಟ್ವಿಟ್ಟರ್‌ನಲ್ಲಿ 879.K ಫಾಲೋವರ್ಸ್ ಹೊಂದಿದ್ದಾರೆ.

  ಸಾಮಾಜಿಕ ಕಾರ್ಯದಲ್ಲಿ ಉಪ್ಪಿ ಬ್ಯುಸಿ

  ಸಾಮಾಜಿಕ ಕಾರ್ಯದಲ್ಲಿ ಉಪ್ಪಿ ಬ್ಯುಸಿ

  ರಿಯಲ್ ಸ್ಟಾರ್ ಉಪೇಂದ್ರ ಲಾಕ್ ಡೌನ್ ಘೋಷಣೆಯಾದ ಬಳಿಕ ಕಷ್ಟದಲ್ಲಿರೋರ ಸಹಾಯಕ್ಕೆ ಧಾವಿಸಿದ್ದಾರೆ. ಉಪ್ಪಿ ಫೌಂಡೇಶನ್ ಮೂಲಕ ಸಿನಿ ಕಾರ್ಮಿಕರಿಗೆ ಆಹಾರ ಕಿಟ್ ಒದಗಿಸುತ್ತಿದ್ದಾರೆ. ಇನ್ನು ರೈತರ ನೆರವಿಗೆ ನಿಂತಿರುವ ಉಪೇಂದ್ರ ಲಾಕ್ ಡೌನ್ ನಲ್ಲಿ ರೈತರು ಬೆಳೆದ ಬೆಳೆಯನ್ನು ಮಾರಲು ಕಷ್ಟವಾಗಿದ್ದರೆ ತಾವೇ ಖರೀದಿ ಮಾಡುವುದಾಗಿ ಹೇಳಿದ್ದಾರೆ.

  ನಿರ್ದೇಶಕ ಆರ್.ಚಂದ್ರು ಮತ್ತು 'ಕಬ್ಜ' ಚಿತ್ರತಂಡದಿಂದ 1ಲಕ್ಷ ರೂ. ನೆರವುನಿರ್ದೇಶಕ ಆರ್.ಚಂದ್ರು ಮತ್ತು 'ಕಬ್ಜ' ಚಿತ್ರತಂಡದಿಂದ 1ಲಕ್ಷ ರೂ. ನೆರವು

  ಉಪ್ಪಿ ಫೌಂಡೇಶನ್ ಮೂಲಕ ನೆರವು

  ಉಪ್ಪಿ ಫೌಂಡೇಶನ್ ಮೂಲಕ ನೆರವು

  ಉಪ್ಪಿ ಫೌಂಡೇಶನ್‌ಗೆ ಸಾಕಷ್ಟು ಮಂದಿ ನೆರವು ನೀಡಿದ್ದು, ಹಣವನ್ನು ಉಪೇಂದ್ರ ಸಂಕಷ್ಟದಲ್ಲಿರುವ ಜನರಿಗೆ ವಿತರಿಸುತ್ತಿದ್ದಾರೆ. ಸಾಮಾಜಿಕ ಕಾರ್ಯದ ಮೂಲಕ ಸಂಚಲನ ಸೃಷ್ಟಿಸಿದ್ದ ಉಪೇಂದ್ರ ಇದೀಗ ಟ್ವಿಟ್ಟರ್‌ನಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

  ಧನ್ಯವಾದ ತಿಳಿಸಿದ ರಿಲಯ್ ಸ್ಟಾರ್

  ಧನ್ಯವಾದ ತಿಳಿಸಿದ ರಿಲಯ್ ಸ್ಟಾರ್

  ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಉಪೇಂದ್ರ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಉಪ್ಪಿ ಬಹುನಿರೀಕ್ಷೆಯ ಕಬ್ಜ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿದ್ದು, ಲಾಕ್ ಡೌನ್ ಮುಗಿದು ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡುವ ಸಾಧ್ಯತೆ ಇದೆ.

  English summary
  Real star Upendra crosses 1 million followers on Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X