»   » ಸದ್ಯದಲ್ಲೇ ಹೆಲಿಕಾಪ್ಟರ್ ನಲ್ಲಿ ನಟ ಉಪೇಂದ್ರ ಎಂಟ್ರಿ

ಸದ್ಯದಲ್ಲೇ ಹೆಲಿಕಾಪ್ಟರ್ ನಲ್ಲಿ ನಟ ಉಪೇಂದ್ರ ಎಂಟ್ರಿ

By: ಜೀವನರಸಿಕ
Subscribe to Filmibeat Kannada

ರಿಯಲ್ ಸ್ಟಾರ್ ಉಪ್ಪಿಯ ಹೆಸರಿಲ್ಲದ 'ಬಸವಣ್ಣ' ಚಿತ್ರದ ಉಪ್ಪಿ ಗೆಟಪ್ ಗಳು ಹೆಸರು ಬದಲಾಯಿಸುವಂತೆ ವಿವಾದಕ್ಕೆ ಕಾರಣವಾದವು. 'ಬಸವಣ್ಣ', 'ಬ್ರಾಹ್ಮಣ' ಅಂತ ಟೈಟಲ್ ಚೇಂಜ್ ಮಾಡಿಕೊಳ್ಳೋಕೆ ಹೊರಟಾಗ 'ಬ್ರಾಹ್ಮಣ' ಸಮುದಾಯದಿಂದ ವಿರೋಧ ಎದುರಾಯ್ತು.

ಆದರೆ ಟೈಟಲ್ ಇಲ್ಲದೇನೇ ಉಪ್ಪಿ ಸಿನಿಮಾ ಮುಗಿಸಿದ್ದಾರೆ. ಟೈಟಲ್ ಇಲ್ಲದೇ ಸಿನಿಮಾ ರಿಲೀಸ್ ಮಾಡೋ ತಾಕತ್ತು ರಿಯಲ್ ಸ್ಟಾರ್ ಗಿದೆ ಅಂತ ಮಾತ್ನಾಡ್ತಿದ್ದಾರೆ ಸಿನಿ ಪಂಡಿತರು. ಬಸವಣ್ಣ ಅನ್ನೋ ಟೈಟಲ್ ಇರೋ ಮಾತ್ರಕ್ಕೆ ಉಪ್ಪಿ ಓಲ್ಡ್ ಶೇಡ್ ನಲ್ಲಿ ಬರ್ತಾರೆ ಅಂದುಕೊಳ್ಳೋ ಹಾಗಿಲ್ಲ. ಇಲ್ಲಿ ಉಪ್ಪಿ ಹೆಲಿಕಾಪ್ಟರ್ ನಲ್ಲಿ ಬರ್ತಾರೆ.

Real Star Upendra enters in Helicopter Basavanna

ಇತ್ತೀಚೆಗೆ ಉಪ್ಪಿ ಹೆಲಿಕಾಪ್ಟರ್ ನಲ್ಲಿ ಹಾರಾಡೋದನ್ನ ಚಿತ್ರೀಕರಿಸಲಾಗಿದೆ. ಹಾಗೆ ನೋಡಿದ್ರೆ ಟೈಟಲ್ ಇನ್ನೂ ಕನ್ಫರ್ಮ್ ಆಗದ ಬಸವಣ್ಣ ಚಿತ್ರ ಅದ್ಧೂರಿಯಾಗಿರುತ್ತೆ ಅನ್ನೋದ್ರಲ್ಲಿ ಅನುಮಾನವಿಲ್ಲ.

ಇನ್ನು ರಿಯಲ್ ಸ್ಟಾರ್ ಸದ್ಯ ಬಸವಣ್ಣ ಶೂಟಿಂಗ್ ಮುಗಿಸಿದ್ದಾರೆ. ತೆಲುಗಿನ 'ಕಿಕ್' ರೀಮೇಕ್ ಸೂಪರೋ ರಂಗ ಸೂಪರ್ ಕಿಕ್ ಕೊಡೋಕೆ ಬರ್ತಿದೆ. ಇವೆರಡನ್ನೂ ಮುಗಿಸಿ 'ಉಪ್ಪಿ-2' ಸಿನಿಮಾದಲ್ಲಿ ಬಿಜಿಯಾಗಲಿದ್ದಾರೆ. ಆದರೆ ಈಗ ಬಂದಿರೋ ಸುದ್ದಿ ನೋಡಿದ್ರೆ ಬಸವಣ್ಣ ಸಿನಿಮಾ ಅಷ್ಟೊಂದು ರಿಚ್ಚಾಗಿರುತ್ತಾ? ಅನ್ನೋ ಕುತೂಹಲ ಅಭಿಮಾನಿಗಳಿಗೆ ಶುರುವಾಗಿದೆ.

English summary
Recently helicopter scene shot for Real Star Upendra's untitled Kannada movie (Earlier titled as Basavanna). It is based on sensitive subject and it will feature two heroines.
Please Wait while comments are loading...