»   » ಟಾಲಿವುಡ್ ಗೆ ಖಳನಟನಾಗಿ ಎಂಟ್ರಿ ಕೊಟ್ಟ ಉಪೇಂದ್ರ?

ಟಾಲಿವುಡ್ ಗೆ ಖಳನಟನಾಗಿ ಎಂಟ್ರಿ ಕೊಟ್ಟ ಉಪೇಂದ್ರ?

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ವಿಭಿನ್ನ ಪಾತ್ರಗಳ ಗಮನಸೆಳೆದವರು. ಇದೀಗ ಅವರು ಖಳನಟನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಆದರೆ ಅವರು ಖಳನಟನಾಗುತ್ತಿರುವುದು ಕನ್ನಡ ಚಿತ್ರದಲ್ಲಲ್ಲ. ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಟಾಲಿವುಡ್ ಚಿತ್ರ ಸನ್ ಆಫ್ ಸತ್ಯಮೂರ್ತಿ ಚಿತ್ರದಲ್ಲಿ ಎಂಬುದು ವಿಶೇಷ.

ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಅಲ್ಲು ಅರ್ಜುನ್, ಸಮಂತಾ, ನಿತ್ಯಾ ಮೆನನ್ ಹಾಗೂ ಆದಾ ಶರ್ಮಾ ಇದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಭಾರಿ ಸದ್ದು ಮಾಡುತ್ತಿದೆ. ಅತ್ತಾರಿಂಟಿಕಿ ದಾರೇದಿ (ಕನ್ನಡದಲ್ಲಿ 'ರನ್ನ' ರೀಮೇಕ್) ಚಿತ್ರದ ಬಳಿಕ ತ್ರಿವಿಕ್ರಮ್ ನಿರ್ದೇಶಿಸುತ್ತಿರುವ ಚಿತ್ರ.

Real Star Upendra in Son of Satyamurthy

ಸನ್ ಆಫ್ ಸತ್ಯಮೂರ್ತಿ ಚಿತ್ರದ ಟ್ರೇಲರ್ ನಲ್ಲಿ ಉಪೇಂದ್ರ ಅವರ ರಗಡ್ ಲುಕ್ ನೋಡಿದರೆ ಅವರು ಖಳನಟನಾಗಿ ಅಭಿನಯಿಸಿರುವುದು ಗಮನಕ್ಕೆ ಬರುತ್ತದೆ. ಆದರೆ ಟ್ರೇಲರ್ ನೋಡಿ ಅವರದು ಯಾವ ರೀತಿಯ ಶೇಡ್ ವುಳ್ಳ ಪಾತ್ರ ಎಂಬುದನ್ನು ಈಗಲೇ ನಿರ್ಧರಿಸುವುದು ಕಷ್ಟ.

ಉಪೇಂದ್ರ ಅವರ ಹಲವಾರು ಚಿತ್ರಗಳು ತೆಲುಗು ಭಾಷೆಗೆ ಡಬ್ ಆಗಿವೆ. ಹಾಗಾಗಿ ಅವರು ತೆಲುಗು ಪ್ರೇಕ್ಷಕರಿಗೇನು ಹೊಸಬರಲ್ಲ. ಈ ಪಾತ್ರವನ್ನು ಉಪೇಂದ್ರ ಅವರೇ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಕಾರಣಕ್ಕೆ ತ್ರಿವಿಕ್ರಮ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ತೆಲುಗಿನಲ್ಲಿ ಕನ್ಯಾದಾನಂ, ಓಕೇ ಮಾಟ, ರಾ, ನೀತೋನೇ ಉಂಟಾನು, ಟಾಸ್, ಬ್ರಹ್ಮ ಈಗ ಸನ್ ಆಫ್ ಸತ್ಯಮೂರ್ತಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಬಾರಿ ಉಪ್ಪಿ ಭಾರಿ ತಾರಾಗಣದ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ.

English summary
Real Star Upendara to play a villain role in Allu Arjun lead movie 'S/o Satyamurthy'. The movie is being directed by Trivikram Srinivas. It features an ensemble cast of Allu Arjun, Samantha Ruth Prabhu, Sneha, Adah Sharma, Nithya Menen and Rajendra Prasad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada