For Quick Alerts
  ALLOW NOTIFICATIONS  
  For Daily Alerts

  ನಟ ಉಪೇಂದ್ರ ಇವ್ರನ್ನ ಅನಾಥರನ್ನಾಗಿ ಮಾಡಿದ್ರಾ?

  By ಜೀವನರಸಿಕ
  |

  ರಿಯಲ್ ಸ್ಟಾರ್ ಉಪೇಂದ್ರ ಬರ್ತಡೇ ಕಂಠೀರವ ಸ್ಟುಡಿಯೋದಲ್ಲಿ ಭರ್ಜರಿಯಾಗೇ ನಡೀತು. ಆದ್ರೆ ಪ್ರತೀವರ್ಷ ರಿಯಲ್ ಸ್ಟಾರ್ ಉಪ್ಪಿಯ ಹುಟ್ಟುಹಬ್ಬದಲ್ಲಿ ಲವಲವಿಕೆಯಿಂದ ಓಡಾಡ್ತಾ ಉಪ್ಪಿಯ ಬಾಡಿಗಾರ್ಡ್ ತರಹಾ ಸದಾ ಜೊತೆಗಿರ್ತಿದ್ದ ವ್ಯಕ್ತಿಯೊಬ್ರು ಈ ಬಾರಿ ಉಪ್ಪಿ ಜೊತೆ ಇರ್ಲಿಲ್ಲ.

  ಅವರೇ ಹೆಚ್ ಟುಓ ಚಿತ್ರದ ನಿರ್ದೇಶಕ ಕಮ್ ಉಪ್ಪಿಯ ಮ್ಯಾನೇಜರ್ ಆಗಿದ್ದ ಲೋಕನಾಥ್. ಲೋಕನಾಥ್ ಈಗ ಚೆನ್ನೈನಲ್ಲೇ ಸೆಟ್ಲ್ ಆಗಿದ್ದಾರಂತೆ. ಅಲ್ಲಿ ಅವರೊಂದು ತಮಿಳು ಸಿನಿಮಾಗೆ ಸ್ಕ್ರಿಪ್ಟ್ ಮಾಡೋದ್ರಲ್ಲಿ ಬಿಜಿಯಾಗಿದ್ದಾರೆ.

  ಉಪ್ಪಿಯ ಮ್ಯಾನೇಜರ್ ಆಗಿದ್ದ ಲೋಕನಾಥ್ ಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲ ಅಂತ ಬಿಟ್ಟು ಹೋಗಿರೋದು 'ಸೂಪರೋ ರಂಗ' ಚಿತ್ರದಿಂದ. 'ಸೂಪರೋ ರಂಗ' ಚಿತ್ರವನ್ನ ಎಚ್ ಟುಓ ನಿರ್ದೇಶಕ ಲೋಕನಾಥ್ ಡೈರೆಕ್ಟ್ ಮಾಡ್ತಾರೆ ಅಂತ ಸುದ್ದಿಯಾಗಿತ್ತು. ಆದ್ರೆ ಸ್ವಲ್ಪ ದಿನಗಳಲ್ಲೇ ಅದು ಸಾಧು ಕೋಕಿಲ ಕೈ ಸೇರ್ತು.

  ಅನಾಥರು ನಂತರ ಸಾಧು ಉಪ್ಪಿಗೆ ಮತ್ತೊಂದು ಸಿನಿಮಾ ಮಾಡೋಕೆ ರೆಡಿಯಾದ್ರು. ಆದರೆ ಉಪ್ಪಿಯ ಒಂದು ಸಿನಿಮಾಗಾಗಿ 11 ವರ್ಷ ಕಾದಿದ್ದ ನನ್ನನ್ನ ಅನಾಥನನ್ನಾಗಿ ಮಾಡಿದ್ರು ಅನ್ನೋ ನೋವಿಂದ ಲೋಕನಾಥ್ ವಿದಾಯ ಹೇಳಿದ್ದಾರೆ. ಆದ್ರೆ ನನ್ನ ನಿನ್ನ ನಡುವೆ ಏನಿಲ್ಲ ಅಂತ ತೋರಿಸಿಕೊಳ್ಳೋಕೆ ಉಪ್ಪಿ ಬರ್ತಡೇಗೆ ಬಂದು ಕಾಣಿಸಿಕೊಂಡ್ರು.

  ಈಗ ಉಪ್ಪಿಯ ಮ್ಯಾನೇಜರ್ ಬದ್ಲಾಗಿದ್ದಾರೆ. ಶ್ರೀರಾಮ್ ಅನ್ನೋ ಹೊಸ ಮ್ಯಾನೇಜರ್ ಉಪ್ಪಿಯ ಎಲ್ಲ ಕಾರ್ಯಕ್ರಮಗಳನ್ನ ನೋಡಿಕೊಳ್ತಿದ್ದಾರೆ. ಉಪ್ಪಿ ಏನೇ ಮಾಡಿದ್ರೂ ಬುದ್ಧಿವಂತ ತಾನೇ. ಉಪ್ಪಿ ಸಾಮಾನ್ಯರ ತರಹ ಯೋಚ್ನೆ ಮಾಡಲ್ಲ. ಸೋ ಉಪ್ಪಿ ಮಾಡಿದ್ರಲ್ಲಿ ಅರ್ಥವಿರುತ್ತೆ ಅನ್ನೋದು ಗಾಂಧಿನಗರದ ಲೆಕ್ಕಾಚಾರ.

  English summary
  Real Star Upendra appoints new personal manager. The Super Star's personal manager named Sriram will manage her schedules about TV shows, shooting interviews and fixing appointments for other purposes. Meanwhile his ex manager Lokanath settled in Chennai. Don't know the actual reason why Uppi changed his manager. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X