ಲಾಕ್ ಡೌನ್ ನಲ್ಲಿ ಸಾವಯವ ಕೃಷಿ ಮಾಡಿ ತೋರಿಸಿದ ನಟ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಲಾಕ್ ಡೌನ್ ಅವದಿಯಲ್ಲಿ ಸಾವಯವ ಕೃಷಿ ಮಾಡಿ ತೋರಿಸಿದ್ದಾರೆ. ಪ್ರಜಾಕೀಯ, ಸಿನಿಮಾ ಅಂತ ಬ್ಯುಸಿ ಇರುವ ಉಪ್ಪಿ ಇದರ ನಡುವೆಯೂ ಕೃಷಿಕನಾಗಿ ಹೊಲದಲ್ಲಿ ಕೆಲಸ ಮಾಡಿ ತರಕಾರಿಗಳನ್ನು ಬೆಳೆದು ತೋರಿಸಿದ್ದಾರೆ.

ಭಾರತದಲ್ಲಿ ಲಾಕ್ ಡೌನ್ ಘೋಷಿಸುತ್ತಿದ್ದಂತೆ ಎಲ್ಲರೂ ಮನೆಯಲ್ಲಿಯೇ ಕಾಲಕಳೆಯಬೇಕಾಗಿತ್ತು. ಆದರೆ ಕೃಷಿ ಚಟುವಟಿಕೆಗೆ ಯಾವುದೆ ನಿರ್ಬಂಧವಿರಲಿಲ್ಲ. ಈ ಸಮಯವನ್ನುಉಪಯೋಗಿಸಿಕೊಂಡ ಉಪೇಂದ್ರ ಕೃಷಿ ಮಾಡಲು ಪ್ರಾರಂಭಿಸಿದ್ದರು. ಮೈಸೂರಿ ರಸ್ತೆಯಲ್ಲಿರುವ ರಾಮೋಹಳ್ಳಿಯಲ್ಲಿರುವ ಅವರ ಜಮೀನಿನಲ್ಲಿ ಉಪ್ಪಿ ತರಕಾರಿ ಗಿಡಗಳನ್ನು ಬೆಳೆದಿದ್ದರು. ಈಗ ಗಿಡಗಳು ಫಸಲು ನೀಡುತ್ತಿವೆ. ವಿಡಿಯೋವನ್ನು ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಉಪ್ಪಿ ಜಮೀನಿನಲ್ಲಿ ಬೆಳೆಯುವ ಬೆಳೆ

ಉಪ್ಪಿ ಜಮೀನಿನಲ್ಲಿ ಬೆಳೆಯುವ ಬೆಳೆ

ಉಪೇಂದ್ರ ತನ್ನ ಜಮೀನಿನಲ್ಲಿ ಟೊಮ್ಯಾಟೋ, ಬಾಳೆ, ಬದನೆ ಮತ್ತು ಹೂ ಸೇರಿದ್ದಂತೆ ಸಾಕಷ್ಟು ತರಕಾರಿ ಗಿಡಗಳನ್ನು ಬೆಳೆಸಿದ್ದಾರೆ. ಸಾವಯುವ ಕೃಷಿ ಮಾದರಿಯಲ್ಲಿ ನಾಟಿ ಮಾಡಿದ್ದಾರೆ. ಉಪ್ಪಿ ಜಮೀನಿನಲ್ಲಿ ಹಲವು ಬಗೆಯ ಹಣ್ಣಿನ ಮರಗಳು, ನೆರಳು ನೀಡುವ ಮರಗಳನ್ನು ಬೆಳೆಸಿದ್ದಾರೆ.

ತರಕಾರಿ ಬೆಳೆದು ತೋರಿಸಿದ ಉಪ್ಪಿ

ತರಕಾರಿ ಬೆಳೆದು ತೋರಿಸಿದ ಉಪ್ಪಿ

ಕಳೆದ ಎರಡೂವರೆ ತಿಂಗಳಲ್ಲಿ ಉಪೇಂದ್ರ ಕೃಷಿಯಲ್ಲಿ ತೊಡಗಿಕೊಂಡಿದ್ದ ಉಪ್ಪಿ ಈ ಅವದಿಯಲ್ಲಿ ಉತ್ತಮವಾದ ಬೆಳೆತೆಗೆದಿದ್ದಾರೆ. ಅದೂ ಸಾವಯವ ಪದ್ಧತಿ ಮೂಲಕ ಎನ್ನುವುದು ವಿಶೇಷ. ಬೆಳೆದ ಬೆಳೆಯನ್ನು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾವಯವ ಕೃಷಿಗೆ ಅಭಿಮಾನಿಗಳು ಫಿದಾ

ಸಾವಯವ ಕೃಷಿಗೆ ಅಭಿಮಾನಿಗಳು ಫಿದಾ

ಕಡಿಮೆ ಅಡಿಮೆ ವೆಚ್ಚದಲ್ಲಿ ಮಾಡಬಹುದಾದ ನೈಸರ್ಗಿಕ ಕೃಷಿ ಎಂದು ಹೇಳಿದ್ದಾರೆ. "ಚೆಂಡು ಹೂ, ಸೌತೆಕಾಯಿ, ಬದನೆಕಾಯಿ ಅದ್ಭುತವಾಗಿವೆ ನೋಡಿ. ಕ್ರಿಮಿನಾಶಕ, ರಸಗೊಬ್ಬರವನ್ನು ಬಳಕೆ ಮಾಡಿಲ್ಲ. ಹುಳ ಬೀಳಲ್ಲ ಅಂತಲ್ಲ, ಶೇ 5ರಷ್ಟು ಹುಳು ಬೀಳುತ್ತೆ. ಆದರೆ ನಮ್ಮ ಜೊತೆ ಅವು ಬದುಕಬೇಕಲ್ಲವೆ. ರಾಸಾಯನಿಕ ಬಳಸದೆ ಬೆಳೆದು ತೋರಿಸಬೇಕೆಂದು ಕೃಷಿ ಮಾಡಿದೆ" ಎಂದಿದ್ದಾರೆ.

ಉಪೇಂದ್ರ ಸಿನಿಮಾ

ಉಪೇಂದ್ರ ಸಿನಿಮಾ

ಉಪೇಂದ್ರ ಸದ್ಯ ಕಬ್ಜ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಉಪ್ಪಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಉಪ್ಪಿ ಅಭಿನಯದ ಹೋಮ್ ಮಿನಿಸ್ಟರ್ ಸಿನಿಮಾ ರಿಲೀಸ್ ಗೆ ರೆಡಿಯಾಗುತ್ತಿದೆ. ಸದ್ಯ ಕೊರೊನಾ ಲಾಕ್ ಡೌನ್ ಹಿನ್ನಲೆ ಕೃಷಿಯಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Real star Upendra Organic farming amid lockdown. He is working in his Farm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X