»   » ಉಪ್ಪಿUnknownನು ಬಗ್ಗೆ ಮತ್ತೊಂದು ಪೋಸ್ಟರ್

ಉಪ್ಪಿUnknownನು ಬಗ್ಗೆ ಮತ್ತೊಂದು ಪೋಸ್ಟರ್

Posted By:
Subscribe to Filmibeat Kannada

ವಿಭಿನ್ನ ಕತೆ, ವಿಶಿಷ್ಟ ಸಂಭಾಷಣೆ, ವಿಶೇಷ ಹಾಡುಗಳಿಂದ ಪ್ರೇಕ್ಷಕರನ್ನು ರಂಜಿಸುವ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿ, ನಿರ್ದೇಶಿಸಿದ್ದ 'ಉಪೇಂದ್ರ' ಚಿತ್ರದ ಎರಡನೇ ಭಾಗ ಸೆಟ್ಟೇರಿದ್ದು ಎಲ್ಲರಿಗೂ ತಿಳಿದೇ ಇದೆ.

ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಹುಟ್ಟುಹಬ್ಬದ ದಿನ (ಸೆ.18) ಉಪೇಂದ್ರ ಪ್ರೊಡಕ್ಷನ್ ಹಾಗೂ ಉಪ್ಪಿ 2 ಚಿತ್ತ್ರಕ್ಕೆ ನಾಂದಿ ಹಾಡಿದ್ದರು. ಉಪ್ಪಿ 2 ಚಿತ್ರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಮೊದಲಿಗೆ ಕಳೆದ ವರ್ಷ ಅಕ್ಷರಗಳು, ಪದಗಳಿಂದ ತುಂಬಿದ ಪೋಸ್ಟರ್ ಬಿಡುಗಡೆ ಮಾಡಿ ತಲೆಗೆ ಹುಳ ಬಿಟ್ಟಿದ್ದ ಉಪ್ಪಿ ನಂತರ ಕೂಲಿಂಗ್ ಗ್ಲಾಸ್ ಹಾಕಿಕೊಂಡ ಉಪ್ಪಿUnknownನು ನಾನು ಎಂದರು. ಈಗ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ನಾನು ಚಿತ್ರ ಮಾಡುವುದು ನನಗಾಗಿ. ನನ್ನೊಳಗಿನ ಕಲಾವಿದನ ಸಂತೃಪ್ತಿಗಾಗಿ ನನ್ನ ಅಭಿಮಾನಿಗಳು ನನ್ನ ಎಲ್ಲಾ ಪ್ರಯತ್ನಗಳಿಗೆ ಕೈ ತಟ್ಟಿ ಬೆಂಬಲಿಸಿರುವುದರಿಂದ ನಾನು ಅವರ ಮುಂದೆ ನೈಜವಾಗಿ ನನ್ನೊಳಗಿರುವ ಪ್ರತಿಭೆ ಅನಾವರಣ ಮಾಡುತ್ತಾ ಬಂದಿದ್ದೇನೆ ಎಂದು ಉಪೇಂದ್ರ ಹೇಳಿದ್ದಾರೆ. ನಿMMA ಉಪ್ಪಿUnknownನು ಹೇಳಿದ್ದೇನು.. ಹೊಸ ಪೋಸ್ಟರ್ ಹೇಗಿದೆ ಮುಂದೆ ನೋಡಿ...

ಹೊಸ ಪೋಸ್ಟರ್ ಬಗ್ಗೆ

ಉಪೇಂದ್ರ ಅವರ ಅಪ್ಪಟ ಅಭಿಮಾನಿ ಸುಶಾಂತ್ ಅವರು ಉಪೇಂದ್ರ ಬಗ್ಗೆ ಹೊಸ ಬ್ಲಾಗ್ ಸೃಷ್ಟಿಸಿದ್ದು, ಉಪ್ಪಿ 2 ಚಿತ್ರದ ಪ್ರಚಾರಕ್ಕೆ ಮುಂದಾಗಿದ್ದಾರೆ.

ಈ ಹೊಸ ಪೋಸ್ಟರ್ ನಲ್ಲಿ ಬಲ್ಬ್ ಇದೆ ಕಿವಿಯಂಥ ಕಣ್ಣು(ಕೂಲಿಂಗ್ ಗ್ಲಾಸ್) ಕಾಣಿಸುತ್ತದೆ. ದಪ್ಪ ಮೀಸೆಯ ಮುಖ ಎದ್ದು ಕಾಣುತ್ತದೆ. ಚಿತ್ರದ ಶೀರ್ಷಿಕೆ 'ಉಪ್ಪಿ 2 ಅಡಿ ಬರಹ ನೀನು (ಅಂದು ನಾನು ಈಗ ನೀನು)

ಉಪೇಂದ್ರ ಎಂದು ಬರೆಯುವ ಬದಲು ಉ ಆದಮೇಲೆ pen ಚಿತ್ರ ನೀಡಿ ನಂತರದ ಅಕ್ಷರ ದ್ರ ಬರೆಯಲಾಗಿದೆ.

ಇದು ಹೇಗಿದೆ

ಈ ಪೋಸ್ಟರ್ ನೋಡಿದರೆ ಸೂಪರ್ ಚಿತ್ರದ ಒಂದು ಅವತಾರಕ್ಕೆ ಇನ್ನೊಂದಿಷ್ಟು ಬಣ್ಣ ಹಾಕಿದಂತೆ ಕಾಣುತ್ತದೆ.

ಬಣ್ಣ ಬಣ್ಣದ ಮನಸ್ಸಿನ ಆಲೋಚನೆಗಳು ಮುಖರಾವಿಂದದಲ್ಲಿ ಪ್ರತಿಫಲಿಸುತ್ತದೆ. (ಫಿಲ್ಟರ್ ಇಲ್ಲದೆ ಮಾತು ಹೇಗೆ ಹೊರ ಬರುತ್ತದೋ ಹಾಗೆ) ಮನಸ್ಸಿನ ಮಾತು ಮುಖದಲ್ಲಿ ಮೂಡುವಂತೆ ಈ ಪೋಸ್ಟರ್ ವಿನ್ಯಾಸಗೊಳಿಸಲಾಗಿದೆ.

'ಉಪ್ಪಿ 2' ಪೋಸ್ಟರ್

ಹೊಸ ಫೊಸ್ಟರ್ ನಲ್ಲಿ ಅಂದು 'ಉಪೇಂದ್ರ' ನಾನು ಇಂದು 'ಉಪ್ಪಿ 2' ನೀನು ಎಂದು ಬರೆಯಲಾಗಿದೆ. ಗಾಗಲ್ಸ್ ಹಾಕಿರುವ ಉಪ್ಪಿ ಹಣೆ ಮೇಲೆ Unknown(ಅನ್ನುವವನು) ಎಂದು ಹಾಕಲಾಗಿದೆ.

ಕನ್ನಡ ಹಾಗೂ ಇಂಗ್ಲೀಷ್ ಅಕ್ಷರ ಮಿಕ್ಸ್ ಮಾಡಿ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ನೀನು, ಕ್ಲ್ಯಾಪ್ : ನೀನು, ಮೊದಲ ದೃಶ್ಯದ ನಟನೆ : ನೀನು ಎಂದು ಬರೆಯಲಾಗಿದೆ. ಮಿಕ್ಕಂತೆ ಪೋಸ್ಟರ್ ಆಹ್ವಾನ ಪತ್ರಿಕೆ ಎನ್ನಬಹುದು.

ಆಹ್ವಾನ ಪತ್ರಿಕೆ

ವಿಭಿನ್ನ ರೀತಿಯಲ್ಲಿ ಆಹ್ವಾನ ಪತ್ರಿಕೆ ನೀಡುವುದರಲ್ಲಿ ಉಪೇಂದ್ರ ಎತ್ತಿದ ಕೈ.. ಸೆ.18ರ ಕಾರ್ಯಕ್ರಮದ ಮತ್ತೊಂದು ಆಹ್ವಾನ ಪತ್ರಿಕೆ ಹೀಗಿತ್ತು.

ಮೊದಲ ಪೋಸ್ಟರ್

ಮೊದಲ ಪೋಸ್ಟರ್ ನಲ್ಲಿ ಚಿತ್ರದ ಹೆಸರನ್ನು ಅಡಗಿಸಿಟ್ಟ ಉಪೇಂದ್ರ ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸಿ ಕೊನೆಗೆ ಉತ್ತರ ಹುಡುಕುವ ಸಾಹಸ ಮಾಡುವಂತೆ ಪ್ರಚೋದಿಸಿದ್ದರು.

'ಉಪೇಂದ್ರ' (1999) ಚಿತ್ರದ ಮುಂದಿವರಿದ ಭಾಗವಂತೂ ಖಂಡಿತ ಅಲ್ಲ ಎಂದಿದ್ದಾರೆ ಉಪ್ಪಿ. ಕಳೆದ ಒಂದು ವರ್ಷದಲ್ಲಿ ಸಿಕ್ಕಾಪಟ್ಟೆ ಪೆನ್ನು, ಪೇಪರ್ ಖರ್ಚು ಮಾಡಿರುವ ಉಪ್ಪಿ ಅವರು ಅದಕ್ಕಿಂತ ಹೆಚ್ಚಾಗಿ ತಲೆ ಓಡಿಸಿದ್ದು ಅದ್ಭುತ ಸ್ಕ್ರಿಪ್ಟ್ ಕೊನೆಗೂ ತಯಾರಿಸಿದ್ದಾರಂತೆ.

ಉಪ್ಪಿ 2 ಕಥೆ ಏನು?

ಉಪೇಂದ್ರ ಚಿತ್ರದಲ್ಲಿ ಅದ್ವೈತ ತತ್ತ್ವ(ತತ್ವಮಸಿ) ಸಾರಿದ್ದ ಉಪ್ಪಿ ಇಲ್ಲಿ ದ್ವೈತ ತತ್ತ್ವ ಸಾರಲು ಹೊರಟ ಹಾಗೆ ಕಾಣುತ್ತದೆ. ನಾನು-ನೀನು ಎಂಬುದು ಅದನ್ನೇ ಹೇಳುವಂತಿದೆ.

ಚಿತ್ರ ಸೆಟ್ಟೇರುವ ಕಾಲದಲ್ಲೂ ಆಹ್ವಾನ ಪತ್ರಿಕೆ ಜತೆಗೆ ಎಲ್ಲರ ಕೈಲಿ ಇದ್ದಿದ್ದು ಕನ್ನಡಿ.. ಕನ್ನಡಿಯಲ್ಲಿ ಕಾಣುವುದು ನಿಮ್ಮನ್ನು ನೀವೇ ಎಂದು ಉಪ್ಪಿ ಹೇಳಲು ಹೊರಟ್ಟಂತಿದೆ.

English summary
The Real Star Upendra production has released another poster of his directorial movie Uppi- 2. First poster had English alphabets and letters thereby making audience to think, Invitation card to production and movie launch also raised eye brows of many.
Please Wait while comments are loading...