twitter
    For Quick Alerts
    ALLOW NOTIFICATIONS  
    For Daily Alerts

    ರೈತರ ಭೂಮಿ ಕಿತ್ತುಕೊಂಡು 'ಉಪ್ಪಿ' ರೆಸಾರ್ಟ್ ಮಾಡಿದ್ರಾ? ರಿಲಯ್ ಸ್ಟಾರ್ ಪ್ರತಿಕ್ರಿಯೆ

    |

    ಸ್ಯಾಂಡಲ್ ವುಡ್ ನಟ, ಪ್ರಜಾಕೀಯ ಸಂಸ್ಥಾಪಕ ರಿಯಲ್ ಸ್ಟಾರ್ ಉಪೇಂದ್ರ ಕೊರೊನಾ ಲಾಕ್ ಡೌನ್ ಬಳಿಕ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ಉಪೇಂದ್ರ ನೆರವಾಗುತ್ತಿದ್ದಾರೆ. ತಮ್ಮ ಉಪ್ಪಿ ಫೌಂಡೇಶನ್ ಮೂಲಕ ಸಂಕಷ್ಟದಲ್ಲಿರುವ ಅನೇಕ ಮಂದಿಗೆ ಆಹಾರ ಕಿಟ್ ಒದಗಿಸುತ್ತಿದ್ದಾರೆ.

    Recommended Video

    ತನ್ನ ಮೇಲಿರುವ ಎಲ್ಲಾ ಆರೋಪಕ್ಕೂ ಪ್ರತ್ಯುತ್ತರ ಕೊಟ್ಟ ರಿಯಲ್ ಸ್ಟಾರ್ Upendra | Oneindia Kannada

    ಈ ನಡುವೆ ಉಪ್ಪಿ ವಿರುದ್ಧ ಗಂಭೀರವಾದ ಆರೋಪ ಕೇಳಿಬರುತ್ತಿದೆ. ರಿಯಲ್ ಸ್ಟಾರ್ ತಮ್ಮ ಉಪ್ಪಿ ರೆಸಾರ್ಟ್ ಅನ್ನು ರೈತರ ಭೂಮಿ ಕಿತ್ತುಕೊಂಡು ನಿರ್ಮಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ನೆಟ್ಟಿಗನೊಬ್ಬ ವಿಡಿಯೋ ಮೂಲಕ ಉಪೇಂದ್ರ ಅವರಿಗೆ ನೇರ ಪ್ರಶ್ನೆ ಮಾಡಿದ್ದಾರೆ.

    'ನಾನು ಈ ರಾಜ್ಯದ ಮುಖ್ಯಮಂತ್ರಿ (CM) ಆಗ್ಬೇಕು': ಫ್ಯಾನ್ಸ್‌ಗೆ ನಿರಾಸೆ ತಂದ ಉಪ್ಪಿ ನಿರ್ಧಾರ 'ನಾನು ಈ ರಾಜ್ಯದ ಮುಖ್ಯಮಂತ್ರಿ (CM) ಆಗ್ಬೇಕು': ಫ್ಯಾನ್ಸ್‌ಗೆ ನಿರಾಸೆ ತಂದ ಉಪ್ಪಿ ನಿರ್ಧಾರ

    ಈ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಅವರೇ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಏನಾದರು ಹೇಳುವ ಮೊದಲು ದಯವಿಟ್ಟು ದಾಖಲೆ ಪರಿಶೀಲಿಸಿ ಎಂದು ಹೇಳಿದ್ದಾರೆ. ಮುಂದೆ ಓದಿ..

    ರೈತರ ಭೂಮಿ ಕಿತ್ತುಕೊಂಡ್ರಾ ಉಪೇಂದ್ರ?

    ರೈತರ ಭೂಮಿ ಕಿತ್ತುಕೊಂಡ್ರಾ ಉಪೇಂದ್ರ?

    'ಸಮಾಜಿಕ ಜಾಲತಾಣದಲ್ಲಿ ವಿಡಿಯೊ ಮಾಡಿ ನನ್ನ ಒಂದಿಷ್ಟು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರ ಕೊಡಲು ಬಂದಿದ್ದೀನಿ. ಮೊದಲನೆ ಪ್ರಶ್ನೆ ನಾನು ರೈತರ ಭೂಮಿ ಕಿತ್ತುಕೊಂಡು ರೆಸಾರ್ಟ್ ಮಾಡಿದ್ದೀವಿ ಅಂತ ಹೇಳುತ್ತಿದ್ದಾರೆ. ದಯವಿಟ್ಟು ತಾವು ಏನಾದರು ಹೇಳುವ ಮುಂಚೆ ದಾಖಲೆಗಳನ್ನು ಪರಿಶೀಲಿಸಿ. ಸುಮಾರು 13-14 ವರ್ಷಗಳ ಹಿಂದೆ ವಿಲೇಜ್ ಅಂತ ಒಂದು ರೆಸಾರ್ಟ್ ಇತ್ತು. ಅದು ಹರಾಜಿಗೆ ಬಂದಿತ್ತು ಅದನ್ನು ಸರ್ಕಾರದಿಂದ ನೇರವಾಗಿ ಖರೀದಿ ಮಾಡಿ ಉಪ್ಪಿ ರೆಸಾರ್ಟ್ ಮಾಡಿರುವುದು. ಅದು ಮೊದಲು ಕೂಡ ರೆಸ್ಟಾರ್ಟ್ ಆಗಿತ್ತು' ಎಂದಿದ್ದಾರೆ.

    ಶಿವಣ್ಣನಿಂದ ಜಮೀನು ಖರೀದಿ ಮಾಡಿದ್ದು

    ಶಿವಣ್ಣನಿಂದ ಜಮೀನು ಖರೀದಿ ಮಾಡಿದ್ದು

    'ಅದರ ಹಿಂದೆ ಇರುವುದು ಜಮೀನು. ಅದನ್ನು ಶಿವಣ್ಣ ಅವರಿಂದ ಖರೀದಿ ಮಾಡಿದ್ದು, ಇವತ್ತಿಗೂ ಕೂಡ ಅಲ್ಲಿ ವ್ಯವಸಾಯ ಮಾಡುತ್ತಿದ್ದೇವೆ. ತರಕಾರಿ ಬೆಳೆದಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ತಮಗೆ ಅನುಮಾನ ಇದ್ದರೆ ನಾವು ರೆಸಾರ್ಟ್ ಗೆ ಬಂದು ನೋಡಿ, ಮತ್ತು ಜಮೀನನ್ನು ನೋಡಿ' ಎಂದು ಹೇಳಿದ್ದಾರೆ.

    ಉಪೇಂದ್ರಗೆ 1 ಮಿಲಿಯನ್ ಫಾಲೋವರ್ಸ್: ಹೆಚ್ಚು ಫಾಲೋವರ್ಸ್ ಹೊಂದಿರುವ 2ನೇ ನಟ

    ಈಗಿನ ಆಡಳಿತ ಯಾಕೆ ಖಂಡಿಸಲ್ಲ

    ಈಗಿನ ಆಡಳಿತ ಯಾಕೆ ಖಂಡಿಸಲ್ಲ

    'ಇನ್ನು ಯಾಕೆ ಹೋರಾಟದಲ್ಲಿ ಭಾಗವವಿಸಲಿಲ್ಲ ಮತ್ತು ಈಗಿರುವ ಆಡಳಿತವನ್ನು ಯಾಕೆ ಖಂಡಿಸಲ್ಲ ಎಂದು ಪ್ರಶ್ನೆ ಮಾಡಿದ್ದೀರಿ. ನಾವು ಯಾವುದನ್ನು ಖಂಡಿಸಿಲ್ಲ. ಹೋರಾಟ ಮಾಡಿಲ್ಲ, ಖಂಡಿಸಿಲ್ಲ. ಯಾಕೆಂದರೆ ನನಗೆ ಅದರಲ್ಲಿ ನಂಬಿಕೆ ಇಲ್ಲ ಎಂದಿದ್ದಾರೆ.

    ಮೊದಲು ಜನ ಬದಲಾಗಬೇಕು

    ಮೊದಲು ಜನ ಬದಲಾಗಬೇಕು

    'ಮೊದಲು ಜನ ಬದಲಾಗಬೇಕು. ನಾಯಕ ಸಂಸ್ಕೃತಿಯಿಂದ ರಾಜಕೀಯ ಬ್ಯುಸಿನೆಸ್ ಮಾಡಿ ಅಲ್ಲಿ ಸಾವಿರಾರು ಕೋಟಿ ಹಣ ಹೂಡಿಕೆ ಮಾಡಲು ಕಾರಣ ನಾವು ಕೂಡ. ಪ್ರಚಾರ, ಜಾತಿ, ಧರ್ಮ ಇಲ್ಲದೆ ಮತಹಾಕಲ್ಲ. ಇದೆಲ್ಲವೂ ನಮ್ಮ ತಪ್ಪು. ಆದರೆ ನಮ್ಮ ಪ್ರಜಾಕೀಯ ಹಾಗಲ್ಲ' ಎಂದಿದ್ದಾರೆ.

    English summary
    Real Star Upendra responses to his Uppi Resort controversy.
    Thursday, May 27, 2021, 9:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X