ಉಪೇಂದ್ರ 'ಯುಐ' ಸೆನ್ಸಾರ್ ಕಂಪ್ಲೀಟ್; ಟ್ರೋಲ್ ಸಾಂಗ್‌ಗೆ ಕತ್ತರಿ ಬಿತ್ತಾ? ರನ್ ಟೈಮ್ ಎಷ್ಟು?

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ಸೆನ್ಸಾರ್ ಮುಗಿಸಿದೆ. ಮುಂದಿನ ವಾರವೇ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಭರ್ಜರಿ ಪ್ರಚಾರ ಶುರುವಾಗಿದೆ. ಬಹಳ ವರ್ಷಗಳ ಬಳಿಕ ಉಪೇಂದ್ರ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವುದು ಕುತೂಹಲ ಮೂಡಿಸಿದೆ.

ರೀಷ್ಮಾ ನಾಣಯ್ಯ, ಸಾಧು ಕೋಕಿಲ, ನಿಧಿ ಸುಬ್ಬಯ್ಯ, ಗುರು ಪ್ರಸಾದ್ ಚಿತ್ರದ ತಾರಾಗಣದಲ್ಲಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಇತ್ತೀಚೆಗೆ ಬಂದ 'ಯುಐ' ವಾರ್ನರ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಕೆ. ಪಿ ಶ್ರೀಕಾಂತ್ ಹಾಗೂ ಜಿ. ಮನೋಹರ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.

Real star Upendra Starrer UI movie gets censored runtime revealed

ಸದ್ಯ ಸೆನ್ಸಾರ್ ಮಂಡಳಿ ಸಿನಿಮಾ ನೋಡಿ U/A ಸರ್ಟಿಫಿಕೇಟ್ ಕೊಟ್ಟಿದೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ನು ಚಿತ್ರದ ಟ್ರೋಲ್ ಸಾಂಗ್ ಬಹಳ ಸದ್ದು ಮಾಡಿದ್ದು ಗೊತ್ತೇಯಿದೆ. ಸೋಶಿಯಲ್ ಮೀಡಿಯಾದಲ್ಲಿ ಬಹಳ ಟ್ರೋಲ್ ಆಗಿದ್ದ ವಿಚಾರಗಳನ್ನೆಲ್ಲಾ ಈ ಹಾಡಿನಲ್ಲಿ ಬಿಚ್ಚಿಡಲಾಗಿತ್ತು. ಆದರೆ ಈ ಸಾಂಗ್ ಚಿತ್ರದಲ್ಲಿ ಇರುತ್ತಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ.

ಟ್ರೋಲ್ ಸಾಂಗ್‌ನಲ್ಲಿ ಕೆಲ ಗಣ್ಯ ವ್ಯಕ್ತಿಗಳನ್ನು ಪರೋಕ್ಷವಾಗಿ ಟ್ರೋಲ್ ಮಾಡಿದಂತೆ ಕಾಣುತ್ತಿದೆ. ಆದರೆ ಸಾಂಗ್ ಅನ್ನು ಎಲ್ಲರೂ ಎಂಜಾಯ್ ಮಾಡಿದ್ದರು. ಯಾರೂ ಕೂಡ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಆದರೂ ಸಿನಿಮಾದಲ್ಲಿ ಈ ಹಾಡು ಇರುತ್ತಾ? ಅಥವಾ ಸೆನ್ಸಾರ್ ವೇಳೆ ಕತ್ತರಿ ಹಾಕಿದ್ದಾರಾ? ಎಂದು ಕೆಲವರು ಕೇಳುತ್ತಿದ್ದಾರೆ. ಸಿನಿಮಾದಲ್ಲಿ ಸಾಂಗ್ ಇರಲ್ವಾ? ಬರೀ ಪ್ರಮೋಷನ್‌ಗಾಗಿ ಈ ಸಾಂಗ್ ಬಳಕೆ ಆಗುತ್ತಾ? ಎನ್ನುವುದು ಕೆಲವರ ಪ್ರಶ್ನೆ.

ಕನ್ನಡ ಮಾತ್ರವಲ್ಲದೇ 5 ಭಾಷೆಗಳಲ್ಲಿ 'ಯುಐ' ಸಿನಿಮಾ ಬಿಡುಗಡೆ ಆಗುತ್ತಿದೆ. ಆಯಾ ಭಾಷೆಯಲ್ಲಿ ಟ್ರೋಲ್ ಆಗಿದ್ದ ವಿಚಾರಗಳನ್ನು ಬಳಸಿಕೊಂಡು ಸಾಂಗ್ ಮಾಡಿದ್ದರು. ಹಾಗಾಗಿ ಬೇರೆ ಭಾಷೆಗಳಲ್ಲಿ 'ಟ್ರೋಲ್' ಸಾಂಗ್‌ಗೆ ಯಾರಾದರೂ ಚಕಾರ ಎತ್ತುತ್ತಾರಾ? ಕಾದು ನೋಡಬೇಕಿದೆ. ತಮ್ಮ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ತಂದಿದೆ.

'ಯುಐ' ಸಿನಿಮಾ ಕಥೆ ಬಗ್ಗೆ ಬಹಳ ಕುತೂಹಲ ಇದೆ. ಸದ್ಯ ಬಂದಿರುವ ಟೀಸರ್‌ಗಳಲ್ಲಿ ಹೆಚ್ಚಿನ ಸುಳಿವು ಸಿಕ್ಕಲ್ಲ. ಟ್ರೈಲರ್ ಬಂದರೆ ಒಂದು ಅಂದಾಜು ಸಿಗಬಹುದು. ಆದರೆ ಟ್ರೈಲರ್ ರಿಲೀಸ್ ಮಾಡ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ. ಸಿನಿಮಾ ಬಿಡುಗಡೆಗೆ ಇನ್ನು 8 ದಿನ ಮಾತ್ರ ಬಾಕಿಯಿದೆ. ಚಿತ್ರದ ವಾರ್ನರ್ ಟೀಸರ್ ನೋಡಿದಾಗ ಇದು 2040ರಲ್ಲಿ ನಡೆಯುವ ಕಥೆ ಎನ್ನುವಂತೆ ಬಿಂಬಿಸಲಾಗಿದೆ. ಆದರೆ ಇಡೀ ಸಿನಿಮಾ ಕಥೆ ಆ ಕಾಲಘಟ್ಟದಲ್ಲೇ ನಡೆಯುವಂತೆ ಇರುತ್ತಾ? ಎನ್ನುವುದು ಗೊತ್ತಿಲ್ಲ.

ರಿಯಲ್ ಸ್ಟಾರ್ ಸಿನಿಮಾಗಳೇ ಹಾಗೆ. ವಿಭಿನ್ನ, ವಿಚಿತ್ರ ಆಲೋಚನೆಗಳನ್ನು ಉಪ್ಪಿ ತೆರೆಮೇಲೆ ತರುತ್ತಾರೆ. ಆದರೆ ಅದು ಅಷ್ಟು ಸುಲಭಕ್ಕೆ ಅರ್ಥವಾಗುವಂತದಲ್ಲ. 'ಯುಐ' ಚಿತ್ರದಲ್ಲಿ ಏನಿರುತ್ತದೆ ಎಂದು ಕಾದು ನೋಡಬೇಕಿದೆ. ಇನ್ನು ವಿದೇಶದಲ್ಲಿ ರೀ-ರೆಕಾರ್ಡಿಂಗ್ ಮಾಡಲಾಗಿದೆ. ಗ್ರಾಫಿಕ್ಸ್ ಹೆಚ್ಚು ಇದೆ. ಹಾಗಾಗಿ ತೆರೆಮೇಲೆ ಹೊಸ ಪ್ರಪಂಚವೇ ತೆರೆದುಕೊಳ್ಳುತ್ತದೆ ಎನ್ನಬಹುದು.

ಟಾಲಿವುಡ್‌ನಲ್ಲಿ ಕೂಡ 'ಯುಐ' ಕ್ರೇಜ್ ಜೋರಾಗಿದೆ. ಕಾರಣ ಉಪ್ಪಿ ನಿರ್ದೇಶನದ ಸಿನಿಮಾಗಳಿಗೆ ಅಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಇನ್ನುಳಿದಂತೆ ಪರಭಾಷೆಗಳಲ್ಲಿ ಸಿನಿಮಾ ಯಾವ ರೀತಿ ಸದ್ದು ಮಾಡುತ್ತದೆ? ಎನ್ನುವ ನಿರೀಕ್ಷೆ ಇದೆ. ಚಿತ್ರದ ರನ್‌ ಟೈಮ್ 2 ಗಂಟೆ 10 ನಿಮಿಷ ಎನ್ನಲಾಗ್ತಿದೆ. ಸಿನಿಮಾ ಬಹಳ ಎಂಗೇಜಿಂಗ್ ಆಗಿ ಇರುವ ಸಾಧ್ಯತೆಯಿದೆ. ಎಲ್ಲಾ ಪ್ರಶ್ನೆಗಳಿಗೆ ಶೀಘ್ರದಲ್ಲೇ ತೆರೆಮೇಲೆ ಉತ್ತರ ಸಿಗಲಿದೆ.

More from Filmibeat

English summary
Upendra's UI film censored with U/A; runtime and other details inside, is Troll song removed?;
Read more about: upendra ui sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X