»   » ಇದು ರಿಯಲ್ ಸ್ಟಾರ್ ಉಪ್ಪಿ ತಾಕತ್ತು ಹಾಗೂ ಸ್ಟೈಲ್

ಇದು ರಿಯಲ್ ಸ್ಟಾರ್ ಉಪ್ಪಿ ತಾಕತ್ತು ಹಾಗೂ ಸ್ಟೈಲ್

By: ಜೀವನರಸಿಕ
Subscribe to Filmibeat Kannada

ಕನ್ನಡದಲ್ಲಿ ಟ್ರೆಂಡ್ ಸೆಟ್ಟರ್ ಡೈರೆಕ್ಟರ್ ಆಗಿರೋ ರಿಯಲ್ ಸ್ಟಾರ್ ಉಪೇಂದ್ರ ಡಿಫರೆಂಟ್ ಅಂದರೆ ಏನು ಅಂತ ಕನ್ನಡ ಚಿತ್ರರಂಗಕ್ಕೇ ತೋರಿಸಿಕೊಟ್ಟವರು. ಉಪೇಂದ್ರ ಸೂಪರ್ ಸಿನಿಮಾ ವಿಷಯದಲ್ಲೂ ಮಾಧ್ಯಮದ ಮುಂದೆ ತೊಡೆತಟ್ಟಿ ಹೇಳಿದ್ರು ಸಿನಿಮಾ ಡಿಫರೆಂಟಾಗಿರುತ್ತೆ ಅಂಥ.

ಅದನ್ನು ಪ್ರೂವ್ ಕೂಡ ಮಾಡಿದ್ರು ರಿಯಲ್ ಸ್ಟಾರ್. ಸೂಪರ್ ಸ್ಟಾರ್ ರಜನಿಕಾಂತ್ ಅವರು 'ಸೂಪರ್' ಸಿನಿಮಾ ನೋಡಿ ಉಪೇಂದ್ರ ಭಾರತದಲ್ಲೇ ನಾನು ನೋಡಿರೋ ಭಿನ್ನ ಚಿಂತನೆಯ ನಿರ್ದೇಶಕ ಅಂದಾಗ ಉಪ್ಪಿ ಮಾತ್ರ ಅಲ್ಲ ಕರ್ನಾಟಕದ ಜನರೇ ಉಪ್ಪಿಯನ್ನ ನೋಡಿ ಥ್ರಿಲ್ಲಾಗಿದ್ರು. [ಬ್ರಹ್ಮ ಚಿತ್ರವಿಮರ್ಶೆ]


ಉಪ್ಪಿ ಸಿನಿಮಾಗಳು ಯಾವಾಗಲೂ ಭಿನ್ನ ಅನ್ನಿಸಿಕೊಳ್ತವೆ. ಟೈಟಲ್ ಗಳ ವಿಷಯದಲ್ಲಿ ಹೊಸ ಪ್ರಯೋಗ ಮಾಡಿದ್ದೂ ಕೂಡ ಇದೆ ಸೂಪರ್ ಸ್ಟಾರ್ ಉಪ್ಪಿ. ಮೊದಲಬಾರಿಗೆ ಟೈಟಲ್ ಒಂದನ್ನ ಚಿನ್ಹೆಯಾಗಿ ಬಳಸಿ ಸೂಪರ್ ಸಿನಿಮಾವನ್ನ ಕೈ ಸನ್ನೆಯನ್ನೇ ಟೈಟಲ್ ಮಾಡಿದ್ರು.

ಈಗ 'ಬಸವಣ್ಣ' ಸಿನಿಮಾದ ಶೂಟಿಂಗ್ ಮುಗೀತಿದೆ. ಆದರೆ ಟೈಟಲ್ ವಿಷಯದಲ್ಲಿ ಮಾತ್ರ ಯಾವುದೇ ಸುದ್ದಿಯಿಲ್ಲ. 'ದಂಡುಪಾಳ್ಯ' ನಿರ್ದೇಶಕ ಶ್ರೀನಿವಾಸರಾಜು ಆಕ್ಷನ್ ಕಟ್ ಹೇಳಿರುವ ಸಿನಿಮಾ ಬಸವಣ್ಣ ವಿವಾದಗಳಾಗಿದೆ.

ನಂತರ 'ಬ್ರಾಹ್ಮಣ' ಆಗೋಕೆ ಹೊರಟು ಅದೂ ಕೂಡ ವಿವಾದವಾಗಿ ಈಗ ಟೈಟಲ್ ಇಲ್ದೇ ರಿಲೀಸ್ ಆಗೋಕೆ ತಯಾರಾಗ್ತಿದೆ. ಆದ್ರೂ ಆಗ್ಬಹುದು ಯಾಕಂದ್ರೆ ಅದು ಉಪ್ಪಿ ತಾಕತ್ತು ಹಾಗೂ ಉಪ್ಪಿಯ ಹೊಸ ಸ್ಟೈಲ್.

English summary
Real Star Upendra many times proves his lavish film making style and strength in Sandalwood. This time his most controversial movie 'Basavanna', after getting a lot of brickbats for the title to release without any title.
Please Wait while comments are loading...