twitter
    For Quick Alerts
    ALLOW NOTIFICATIONS  
    For Daily Alerts

    ಫೇಸ್‌ಬುಕ್‌ ಲೈವ್ ಬಂದು ಪ್ರಪಂಚದ ದೊಡ್ಡ ಪ್ರಾಬ್ಲಂ ಬಗ್ಗೆ ಹೇಳಿದ ಉಪೇಂದ್ರ!

    |

    ರಿಯಲ್ ಸ್ಟಾರ್ ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಪ್ರಜಾಕೀಯದ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ. 2017, ಆಗಸ್ಟ್ 12ರಂದು ಶುರುವಾದ 'ಪ್ರಜಾಕೀಯ'ಕ್ಕೆ ಈಗ 5 ವರ್ಷಗಳ ಸಂಭ್ರಮ. ಈಗ ಇರುವ ರಾಜಕೀಯ ವ್ಯವಸ್ಥೆಯನ್ನು ಬಿಟ್ಟು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಉಪೇಂದ್ರ ಬದಲಿ ವ್ಯವಸ್ಥೆ ಬೇಕು ಎಂದು ಉಪೇಂದ್ರ ಹೇಳುತ್ತಾ ಬರುತ್ತಿದ್ದಾರೆ.

    ಹಣ ಇಲ್ಲದೇ ಚುನಾವಣೆ ಪ್ರಚಾರ, ನಾಯಕನಿಲ್ಲದ ವ್ಯವಸ್ಥೆ, ಜನರೇ ಜನರನ್ನು ಚುನಾಯಿಸುವುದು, ಜನರೇ ತಮ್ಮ ಸುತ್ತಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು, ಚುನಾಯಿತ ಅಭ್ಯರ್ಥಿ ಕಾರ್ಮಿಕನಂತೆ ಕೆಲಸ ಮಾಡುವುದು, ಒಂದು ವೇಳೆ ಚುನಾವಣೆಯಲ್ಲಿ ಗೆದ್ದವನು ಸರಿಯಾಗಿ ಕೆಲಸ ಮಾಡದೇ ಇದ್ದರೆ ಆತನನ್ನು ಅನರ್ಹಗೊಳಿಸುವುದು. ಒಟ್ಟಾರೆ ಪ್ರಜೆಗಳ ಕೈಗೆ ಅಧಿಕಾರ ನೀಡುವುದು ಪ್ರಜಾಕೀಯದ ಉದ್ದೇಶ. ಇಂತಹ ವ್ಯವಸ್ಥೆಯನ್ನು ತರುವುದಕ್ಕೆ ಉಪೇಂದ್ರ ಪ್ರಜಾಕೀಯ ಪಕ್ಷ ಹುಟ್ಟು ಹಾಕಿದ್ದಾರೆ.

    ರಿಯಲ್‌ಸ್ಟಾರ್‌ಗೆ ಸರ್ಪ್ರೈಸ್ ಕೊಟ್ಟ ಶಿವಣ್ಣ, ಗೀತಕ್ಕ!ರಿಯಲ್‌ಸ್ಟಾರ್‌ಗೆ ಸರ್ಪ್ರೈಸ್ ಕೊಟ್ಟ ಶಿವಣ್ಣ, ಗೀತಕ್ಕ!

    5 ವರ್ಷಗಳ ಹಿಂದೆ ಉಪೇಂದ್ರ ಹೊಸ ಪಕ್ಷ ಸ್ಥಾಪಿಸುತ್ತಾರೆ ಎಂದಾಗ ಎಲ್ಲರೂ ಹುಬ್ಬೇರಿಸಿದ್ದರು. ಉಪೇಂದ್ರ ರಾತ್ರೋರಾತ್ರಿ ಕಾಂತ್ರಿಕಾರಿ ಬದಲಾವಣೆ ತರುತ್ತಾರೆ. ಸಿಎಂ ಆಗಿಬಿಡುತ್ತಾರೆ ಎಂದು ಕೆಲವರು ಭಾವಿಸಿದ್ದರು. ಆದರೆ ಉಪೇಂದ್ರ ರಾಜಕೀಯದ ಸಹವಾಸವೇ ಬೇಡ ಎಂದು ಪ್ರಜಾಕೀಯ ವ್ಯವಸ್ಥೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಗುಪ್ತಗಾಮಿನಿಯಂತೆ ಪ್ರಜಾಕೀಯವನ್ನು ಕಟ್ಟಿ ಬೆಳೆಸುವ ಕೆಲಸವನ್ನು ಮುಂದುವರೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಚಾರ ಧಾರೆಗಳನ್ನು ಜನರಿಗೆ ತಲುಪಿಸುತ್ತಲೇ ಇದ್ದಾರೆ. ಸಾಕಷ್ಟು ಜನರು ಪ್ರಜಾಕೀಯಕ್ಕೆ ಬೆಂಬಲವಾಗಿ ನಿಂತಿದ್ದಾರೆ.

     'ಪ್ರಜಾಕೀಯ'ಕ್ಕೆ 5 ವರ್ಷ

    'ಪ್ರಜಾಕೀಯ'ಕ್ಕೆ 5 ವರ್ಷ

    2017, ಆಗಸ್ಟ್ 12ರಂದು ಶುರುವಾದ ಉಪೇಂದ್ರ ಪ್ರಜಾಕೀಯ 5 ವರ್ಷ ಪೂರೈಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಖಾತೆ ತೆರೆದಿತ್ತು. ಇನ್ನು ಪ್ರಜಾಕೀಯ ವೆಬ್‌ಸೈಟ್‌ ಹಾಗೂ ಸೋಶಿಯಲ್ ಮೀಡಿಯಾ ಮೂಲ ನಿರಂತರವಾಗಿ ಸಿದ್ಧಾಂತಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಕೆಲಸ ನಡೆಯುತ್ತಲೇ ಇದೆ.

     ಲೈವ್‌ನಲ್ಲಿ ಉಪೇಂದ್ರ ಮಾತು

    ಲೈವ್‌ನಲ್ಲಿ ಉಪೇಂದ್ರ ಮಾತು

    ಪ್ರಜಾಕೀಯ 5 ವರ್ಷ ಸಂದರ್ಭದಲ್ಲಿ ಉಪೇಂದ್ರ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಲೈವ್ ಬಂತು ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಈ ಹೋರಾಟ ನಿಲ್ಲುವುದಿಲ್ಲ ಎಂದಿದ್ದಾರೆ. ಇನ್ನು ಅಭಿಮಾನಿಗಳು ಹಾಗೂ ಪ್ರಜಾಕೀಯ ಬೆಂಬಲಿಗರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇಷ್ಟ ಇರುವವರು ನಮ್ಮ ಜೊತೆ ಮುಂದುವರೆಯಬಹುದು. ಪ್ರಜಾಕೀಯ ಸಹವಾಸ ಬೇಡ ಅನ್ನುವವರಿಗೆ ನಿಮ್ಮ ಇಷ್ಟ. ಇದು ರಾತ್ರೋರಾತ್ರಿ ಬದಲಾವಣೆ ಆಗುವುದಲ್ಲ. ನೀವೆಲ್ಲಾ ಸೇರಿ ಬದಲಾಯಿಸಬೇಕು ಎಂದಿದ್ದಾರೆ.

     ಪ್ರಪಂಚದ ದೊಡ್ಡ ಪ್ರಾಬ್ಲಂ ಏನು?

    ಪ್ರಪಂಚದ ದೊಡ್ಡ ಪ್ರಾಬ್ಲಂ ಏನು?

    ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಉಪೇಂದ್ರ, "ಹಣ ಇಲ್ಲದೇ ಪ್ರಜಾಕೀಯ ಮಾರ್ಗದಲ್ಲಿ ನಡೆಯೋಣ. ನಮ್ಮ ವಿಚಾರಗಳನ್ನು ನಾವು ತಲುಪಿಸೋಣ. ಬೇಕು ಅಂದಾಗ ಜನ ತಗೋತ್ತಾರೆ. ಅವರು ಬೇಡ ಅಂದಾಗ ಬಲವಂತ ಮಾಡುವುದು ಬೇಡ. ಬೇರೆ ದಾರಿಯಲ್ಲಿ ಮನ ಒಲಿಸುವುದು ತಪ್ಪು. ಸಮಯ ಬಂದಾಗ ಇದು ಪ್ರತಿಯೊಬ್ಬರಿಗೂ ಇದು ಬೇಕು. ಇದು ಪ್ರಪಂಚದ ಪ್ರಾಬ್ಲಂ ಆಗಿದೆ. ನಮ್ಮ ದೇಶ ಮತ್ತೊಂದು ದೇಶ ಎಂದು ಹೇಳುತ್ತಿಲ್ಲ. ಪ್ರಪಂಚದ ಅತಿದೊಡ್ಡ ಪ್ರಾಬ್ಲಂ ಆಗಿದೆ. ಜನ ನಾಯಕತ್ವವನ್ನು ರಿಜೆಕ್ಟ್ ಮಾಡುತ್ತಿದ್ದಾರೆ. ಬೇರೆ ವ್ಯವಸ್ಥೆ ಬರಬೇಕು ಎಂದು ಬೇರೆ ದೇಶಗಳಲ್ಲಿ ಹೋರಾಟಗಳು ನಡೀತಿದೆ. ಖಂಡಿತ ಒಂದು ದಿನ ಬದಲಾವಣೆ ಆಗೇ ಆಗುತ್ತೆ". ಎಂದಿದ್ದಾರೆ.

     ಭರದಿಂದ ಸಾಗಿದೆ 'UI' ಚಿತ್ರೀಕರಣ

    ಭರದಿಂದ ಸಾಗಿದೆ 'UI' ಚಿತ್ರೀಕರಣ

    ಬಹಳ ವರ್ಷಗಳ ನಂತರ ಉಪೇಂದ್ರ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. 'UI' ಅನ್ನುವ ಸಿನಿಮಾ ನಿರ್ಮಿಸಿ ನಟಿಸುತ್ತಿದ್ದಾರೆ. ಕೆ. ಪಿ ಶ್ರೀಕಾಂತ್ ಹಾಗೂ ಜಿ. ಮನೋಹರನ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಥೀಮ್ ಪೋಸ್ಟರ್‌ನಿಂದಲೇ ಈ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದ ತಾರಾಗಣದಲ್ಲಿ ಯಾರಿದ್ದಾರೆ? ಸಿನಿಮಾ ಕಥೆಯೇನು? 'UI' ಚಿತ್ರಕ್ಕೂ ಪ್ರಜಾಕೀಯಕ್ಕೂ ಏನಾದರೂ ಲಿಂಕ್ ಇದ್ಯಾ? ಈ ಎಲ್ಲಾ ಪ್ರಶ್ನೆಗಳಿಗೂ ಶೀಘ್ರದಲ್ಲೇ ಉತ್ತರ ಸಿಗಲಿದೆ.

    English summary
    Real Star Upendra Talks About World's Biggest Problem in Social Media Live. Know More.
    Saturday, August 13, 2022, 9:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X