ಆಂಧ್ರದಲ್ಲಿ ಉಪೇಂದ್ರ XYZ ಪೋಸ್ಟರ್ ಬಿಡುಗಡೆ
ರಿಯಲ್ ಸ್ಟಾರ್ ಉಪೇಂದ್ರ ಏನೇ ಮಾಡಿದರು ವಿಭಿನ್ನವಾಗಿರುತ್ತದೆ. ಈಗವರು ಕನ್ನಡದಲ್ಲಿ ಉಪ್ಪಿ 2, ಬ್ರಹ್ಮ ಹಾಗೂ ಬಸವಣ್ಣ (ಶೀರ್ಷಿಕೆ ಇನ್ನೂ ಪಕ್ಕಾ ಆಗಿಲ್ಲ) ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಏತನ್ಮಧ್ಯೆ ಅವರ 'XYZ' ಚಿತ್ರ ಆಂಧ್ರದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಲೇಟೆಸ್ಟ್ ಪೋಸ್ಟರ್ಸ್ ಬಿಡುಗಡೆ ಮಾಡಲಾಗಿದೆ.
ಇದೇ ಚಿತ್ರ ಕನ್ನಡದಲ್ಲಿ 'ಶ್ರೀಮತಿ'ಯಾಗಿ ಈಗಾಗಲೆ ತೆರೆಕಂಡಿದೆ. ಆದರೆ ಚಿತ್ರಕ್ಕೆ ಇಲ್ಲಿ ಕೊಟ್ಟ ಪ್ರಚಾರಕ್ಕೂ ಈಗ ಅದೇ ಚಿತ್ರಕ್ಕೆ ತೆಲುಗಿನಲ್ಲಿ ಕೊಡುತ್ತಿರುವ ಪ್ರಚಾರಕ್ಕೂ ಅಜಗಜಾಂತರ ವ್ಯತ್ಯಾಸವಿರುವುದು ಎದ್ದು ಕಾಣುತ್ತಿದೆ. ಇಲ್ಲಿವೆ ನೋಡಿ ಉಪ್ಪಿ XYZ ಚಿತ್ರದ ಕೆಲವು ಹಾಟ್ ಪೋಸ್ಟರ್ಸ್.

ಕನ್ನಡದ 'ಶ್ರೀಮತಿ' ಚಿತ್ರದ ಡಬ್ಬಿಂಗ್ ಆವೃತ್ತಿ
ಇದು ಕನ್ನಡದ 'ಶ್ರೀಮತಿ' ಚಿತ್ರದ ಡಬ್ಬಿಂಗ್ ಆವೃತ್ತಿ. ತೆಲುಗಿನಲ್ಲಿ 'XYZ' ಎಂದು ಹೆಸರಿಡಲಾಗಿದೆ. ಸೆಲೀನಾ ಜೇಟ್ಲಿ, ಪ್ರಿಯಾಂಕಾ ಉಪೇಂದ್ರ ಚಿತ್ರದ ತಾರಾಬಳಗದಲ್ಲಿದ್ದಾರೆ. ಶೀಘ್ರದಲ್ಲೇ ಈ ಚಿತ್ರ ಆಂಧ್ರಪ್ರದೇಶದಲ್ಲಿ ಬಿಡುಗಡೆಯಾಗುತ್ತಿದೆ.

ಪ್ರಚಾರ ಹೇಗೆಲ್ಲ ಮಾಡಬಹುದು ನೋಡಿ
ಒಂದು ಚಿತ್ರವನ್ನು ಹೇಗೆಲ್ಲಾ ಪ್ರಚಾರ ಮಾಡಬಹುದು ಎಂಬುದನ್ನು ಪರರಾಜ್ಯದ ಚಿತ್ರೋದ್ಯಮವನ್ನು ಗಮನಿಸಬೇಕು. ಅವರು ಆಡಿಯೋ ಬಿಡುಗಡೆ ಸಮಾರಂಭವಿರಲಿ, ಚಿತ್ರ ಬಿಡುಗಡೆ ಕಾರ್ಯಕ್ರಮವಿರಲಿ ಕೊಡುವ ಮಹತ್ವ ನಮ್ಮಲ್ಲಿ ಯಾಕೆ ಇಲ್ಲಿಲ್ಲ ಎಂಬ ಕೊರಗು ಕಾಡುತ್ತದೆ.

'ಬ್ರಹ್ಮ' ಚಿತ್ರವೂ ತೆಲುಗು ಭಾಷೆಯಲ್ಲಿ ತೆರೆಗೆ
ಈ ಹಿಂದೆ ಉಪೇಂದ್ರ ಅಭಿನಯದ ಸಾಕಷ್ಟು ಚಿತ್ರಗಳು ತೆಲುಗಿನಲ್ಲಿ ತೆರೆಕಂಡಿವೆ. ಕನ್ಯಾದಾನಂ, ಒಕೇಮಾಟ, ರಾ, ನೀತೋನೆ ಉಂಟಾನು, ಟಾಸ್ ಮುಂತಾದ ಚಿತ್ರಗಳ ಮೂಲಕ ತೆಲುಗು ಚಿತ್ರರಂಗದಲ್ಲೂ ಉಪ್ಪಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಈಗ ಚಿತ್ರೀಕರಣ ಭರದಿಂದ ಸಾಗುತ್ತಿರುವ 'ಬ್ರಹ್ಮ' ಚಿತ್ರವೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಸುನಾಮಿಯಂತೆ ಗರ್ಲ್ ಫ್ರೆಂಡ್ ಎಂಟ್ರಿ
XYZ ಚಿತ್ರದಲ್ಲಿ ಉಪೇಂದ್ರ ಅವರದು ಬಿಜಿನೆಸ್ ಮ್ಯಾನ್ ಪಾತ್ರ. ತನ್ನ ಪತ್ನಿಯೊಂದಿಗೆ ಹ್ಯಾಪಿಯಾಗಿರುತ್ತಾನೆ. ಎಲ್ಲವೂ ಚೆನ್ನಾಗಿರಬೇಕಾದರೆ ಆತನ ಬಾಳಿನಲ್ಲಿ ಸುನಾಮಿಯಂತೆ ಗರ್ಲ್ ಫ್ರೆಂಡ್ ಎಂಟ್ರಿ ಕೊಡುತ್ತಾಳೆ. ಆಮೇಲೆ ಏನಾಗುತ್ತದೆ?

ಅತ್ಯಾಚಾರ ಆರೋಪದಲ್ಲಿ ಉಪೇಂದ್ರ
ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸುತ್ತಾಳೆ. ಕಡೆಗೆ ವಕೀಲೆಯಾದ ಆತನ ಪತ್ನಿ ತನ್ನ ಗಂಡ ಅಮಾಯಕ ಎಂಬುದನ್ನು ಸಾಬೀತು ಮಾಡುತ್ತಾಳೆ.

ಬಾಲಿವುಡ್ ಚಿತ್ರ 'ಐತ್ ರಾಜ್' ರೀಮೇಕ್ 'ಶ್ರೀಮತಿ'
ಅಕ್ಷಯ್ ಕುಮಾರ್ ಅಭಿನಯದ ಬಾಲಿವುಡ್ ಚಿತ್ರ 'ಐತ್ ರಾಜ್' ರೀಮೇಕ್ 'ಶ್ರೀಮತಿ'. ಈಗ ಇದೇ 'ಶ್ರೀಮತಿ' ಚಿತ್ರದ ಡಬ್ಬಿಂಗ್ ಆವೃತ್ತಿ ತೆಲುಗಿನಲ್ಲಿ 'XYZ' ಆಗಿ ತೆರೆಕಾಣುತ್ತಿದೆ.

ತೆಲುಗು ಬಾಕ್ಸ್ ಆಫೀಸ್ ಮೇಲೆ ಕಣ್ಣಿಟ್ಟಿರುವ ಚಿತ್ರ
ಜಿಎಂಆರ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಗಾಜುಲ ಮಾಣಿಕ್ಯ ರಾವ್ ಚಿತ್ರದ ಡಬ್ಬಿಂಗ್ ರೈಟ್ಸ್ ಪಡೆದಿದ್ದಾರೆ. ಕನ್ನಡದಲ್ಲಿ ಅಷ್ಟೇನು ಸದ್ದು ಮಾಡದ ಈ ಚಿತ್ರ ತೆಲುಗು ಬಾಕ್ಸ್ ಆಫೀಸ್ ಮೇಲೆ ಕಣ್ಣಿಟ್ಟಿದೆ.

ಪ್ರಿಯಾಂಕಾ, ಉಪೇಂದ್ರ ಅವರು ಅದ್ಭುತ ಅಭಿನಯ
ಜಾನಿಲಾಲ್ ಛಾಯಾಗ್ರಹಣ, ಚಿನ್ನಿಪ್ರಕಾಶ್ ನೃತ್ಯನಿರ್ದೇಶನ, ರಾಜೇಶ್ ರಾಮನಾಥ್ ಸಂಗೀತ ಚಿತ್ರಕ್ಕಿದೆ. ಎಂ ರವಿ ಆಕ್ಷನ್ ಕಟ್ ಹೇಳಿರುವ ಚಿತ್ರ. ಚಿತ್ರದಲ್ಲಿ ಪ್ರಿಯಾಂಕಾ ಹಾಗೂ ಉಪೇಂದ್ರ ಅವರು ಅದ್ಭುತವಾಗಿ ಅಭಿನಯಿಸಿದ್ದಾರೆ.


Click it and Unblock the Notifications











