»   » ಉಪೇಂದ್ರ ರಾಜಕೀಯ ಎಂಟ್ರಿ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್.!

ಉಪೇಂದ್ರ ರಾಜಕೀಯ ಎಂಟ್ರಿ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್.!

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಬರುವ ಸುದ್ದಿ ಕೆಲ ವರ್ಷಗಳಿಂದ ಕೇಳಿ ಬರುತ್ತಿದೆ. ಆದ್ರೆ, ಉಪೇಂದ್ರ ಮಾತ್ರ ಇದ್ಯಾವುದರ ಬಗ್ಗೆನೂ ಸಣ್ಣ ಸುಳಿವು ಕೂಡ ಬಿಟ್ಟುಕೊಟ್ಟಿರಲಿಲ್ಲ. ಹೀಗಿರುವಾಗ, ಉಪ್ಪಿ ರಾಜಕೀಯದ ಎಂಟ್ರಿ ಬಗ್ಗೆ ಬ್ರೇಕಿಂಗ್ ನ್ಯೂಸ್ ಒಂದು ಬಂದಿದೆ.

ಡಿಕೆಶಿ ಮನೆ ಮೇಲೆ ಐಟಿ ದಾಳಿ: ಉಪೇಂದ್ರ ಮಾಡಿರುವ ಟ್ವೀಟ್ ನೋಡಿ

'ನೀವು ರಾಜಕೀಯ ರಂಗಕ್ಕೆ ಬರುತ್ತೀರಾ..?' ಅಂತ ಉಪೇಂದ್ರ ಅವರಿಗೆ ಮಾಧ್ಯಮದವರು ಹಲವು ಬಾರಿ ಕೇಳಿದ್ದಾರೆ. ಆದರೆ ಉಪ್ಪಿ ಮಾತ್ರ 'ನಾನು ರಾಜಕೀಯಕ್ಕೆ ಬರುತ್ತೇನೆ. ಆದರೆ ಯಾವಾಗ ಎನ್ನುವುದು ನನಗೂ ಗೊತ್ತಿಲ್ಲ. ಅದಕ್ಕೆಲ್ಲ ಟೈಂ ಬರಬೇಕು' ಎಂದು ಉತ್ತರಿಸುತ್ತಿದ್ದರು.

GST ಬಗ್ಗೆ ರಿಯಲ್ ಸ್ಟಾರ್ ಉಪ್ಪಿ ಹೇಳಿದ್ದೇನು?

ಆದ್ರೀಗ, ಉಪೇಂದ್ರ ರಾಜಕೀಯಕ್ಕೆ ಬರುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರಂತೆ. ತಮ್ಮ ಆಪ್ತರ ಜೊತೆ ಉಪೇಂದ್ರ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಏನದು? ಮುಂದೆ ಓದಿ...

ರಾಜಕೀಯದ ಬಗ್ಗೆ ಚಿಂತನೆ

ನಟ ಉಪೇಂದ್ರ ಅವರಿಗೆ ರಾಜಕೀಯ ರಂಗದ ಬಗ್ಗೆ ಒಲವು ಇರುವುದು ಎಲ್ಲರಿಗೆ ಗೊತ್ತಿರುವ ವಿಷಯ. ಈ ಹಿಂದೆಯೇ ಉಪ್ಪಿ ರಾಜಕೀಯಕ್ಕೆ ಧುಮುಕುತ್ತಾರೆ ಎಂಬ ಸುದ್ದಿ ಇತ್ತು. ಇದಕ್ಕಾಗಿ ತಯಾರಿ ನಡೆಸುತ್ತಿರುವ ಉಪೇಂದ್ರ ತಮ್ಮ ಆಪ್ತರ ಬಳಿ ರಾಜಕೀಯದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದಾರಂತೆ.

ಈ ಚುನಾವಣೆಯಲ್ಲಿ ಸ್ಫರ್ಧೆ

ಉಪೇಂದ್ರ ಈ ಬಾರಿಯ ಚುನಾವಣೆಯ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುವ ಯೋಚನೆ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಜೊತೆಗೆ ಇನ್ನೂ ಎರಡು ತಿಂಗಳಿನಲ್ಲಿ ಉಪ್ಪಿ ತಮ್ಮ ರಾಜಕೀಯದ ಎಂಟ್ರಿಯ ವಿಷಯವನ್ನು ಬಹಿರಂಗ ಪಡಿಸಲಿದ್ದಾರಂತೆ.

ಟ್ವಿಟ್ಟರ್ ನಲ್ಲಿ ಉಪ್ಪಿ ಚರ್ಚೆ

ಇತ್ತೀಚಿಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ನಟ ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಐಟಿ ರೈಡ್, ಜಿ.ಎಸ್.ಟಿ, ನೋಟ್ ಬ್ಯಾನ್ ವಿಷಯಕ್ಕೆ ಉಪೇಂದ್ರ ಟ್ವೀಟ್ ಮಾಡಿದ್ದು ರಾಜಕೀಯ ಎಂಟ್ರಿಯ ಮುನ್ನುಡಿ ಇರಬಹುದಾ ಎಂಬ ಪ್ರಶ್ನೆ ಮೂಡಿದೆ.

ಹೋರಾಟಗಳಲ್ಲಿ ಭಾಗಿ

ಅಣ್ಣಾ ಹಜಾರೆ ನೇತೃತ್ವದಲ್ಲಿ ಲೋಕ್ ಪಾಲ್ ಮಸೂದೆ ಜಾರಿಗೆ ದೇಶಾದ್ಯಂತ ನಡೆದ ಹೋರಾಟದಲ್ಲಿ ನಟ ಉಪೇಂದ್ರ ಭಾಗಿಯಾಗಿದ್ದರು. ಅಲ್ಲದೆ ಕಳೆದ ವರ್ಷ ನಡೆದ ಕಾವೇರಿ ಹೋರಾಟದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಉಪ್ಪಿ CM ಆಗಬೇಕು ಅಂತ ಅನೇಕರು ಮಾತನಾಡಿದ್ದರು.

ಸಿನಿಮಾಗಳಲ್ಲಿ ರಾಜಕೀಯ

ಉಪೇಂದ್ರ ಅವರ ಪ್ರತಿ ಸಿನಿಮಾದಲ್ಲಿಯೂ ರಾಜಕೀಯದ ಒಂದು ಡೈಲಾಗ್ ಇದ್ದೇ ಇರುತ್ತದೆ. ಅಲ್ಲದೆ 'ಸೂಪರ್' ಸಿನಿಮಾದಲ್ಲಿ CM ಆಗಿದ್ದ ಉಪೇಂದ್ರ ನವ ಭಾರತದ ಕಲ್ಪನೆಯನ್ನು ಅದ್ಭುತವಾಗಿ ತೋರಿಸಿದ್ದರು.

ಯಾವ ಪಕ್ಷ ಸೇರುತ್ತಾರೆ.?

ಸದ್ಯಕ್ಕೆ ಉಪೇಂದ್ರ ರಾಜಕೀಯಕ್ಕೆ ಬರುವ ಚಿಂತನೆ ನಡೆಸಿದ್ದಾರೆ. ಆದರೆ ಉಪ್ಪಿ ಯಾವ ಪಕ್ಷದ ಮೂಲಕ ಉಪೇಂದ್ರ ತಮ್ಮ ರಾಜಕೀಯ ಪ್ರವೇಶ ಮಾಡುತ್ತಾರೆ ಖಚಿತವಾಗಿಲ್ಲ. ಅಲ್ಲದೆ ಉಪೇಂದ್ರ ತಮ್ಮ ಸ್ವತಂತ್ರ ಪಕ್ಷವನ್ನು ಏನಾದರೂ ಶುರು ಮಾಡುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

English summary
According to the source, Real Star Upendra is preparing for his politics Entry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada