For Quick Alerts
  ALLOW NOTIFICATIONS  
  For Daily Alerts

  ರಿಯಲ್ ಸ್ಟಾರ್ ಉಪೇಂದ್ರ ಟಾಪ್ 6 ಡೈಲಾಗ್ಸ್

  By Rajendra
  |

  ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಪ್ರಭುದೇವ ತರಹ ಡಾನ್ಸ್ ಬರಲ್ಲ ನಿಜ. ಆದರೆ ಪದಗಳಲ್ಲಿಯೇ ಅವರು ಆಡುವ ಆಟ ಇದೆಯಲ್ಲಾ ಅದು ಮಾತ್ರ ಪ್ರಭುದೇವ ಡಾನ್ಸ್ ನ್ನೂ ಮೀರಿಸುತ್ತದೆ. ಉಪೇಂದ್ರ ಅವರು ತಮ್ಮ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದೇ ತಮ್ಮ ವಿಭಿನ್ನ ಡೈಲಾಗ್ ಗಳ ಮೂಲಕ.

  ಅವರ ಡೈಲಾಗ್ ಗಳನ್ನು ಕೇಳುತ್ತಿದ್ದರೆ ಇನ್ನೂ ಕೇಳಬೇಕು ಅನ್ನಿಸುತ್ತದೆ. ಎ, ಉಪೇಂದ್ರ, ರಕ್ತ ಕಣ್ಣೀರು, ಶ್ ಚಿತ್ರದ ಡೈಲಾಗ್ ಗಳು ಇಂದಿಗೂ ಜನಪ್ರಿಯ. ಈ ಬಾರಿಯ ಗೌರಿ ಗಣೇಶ ಹಬ್ಬದ (ಸೆ.18, 2012) ದಿನ ಉಪೇಂದ್ರ 44ನೇ ವಸಂತಕ್ಕೆ ಅಡಿಯಿಡುತ್ತಿದ್ದಾರೆ.

  ರಕ್ತ ಕಣ್ಣೀರು ಚಿತ್ರದ ಜನಪ್ರಿಯ ಡೈಲಾಗ್

  ರಕ್ತ ಕಣ್ಣೀರು ಚಿತ್ರದ ಜನಪ್ರಿಯ ಡೈಲಾಗ್

  ಪ್ಯೂಚರ್ ಇಲ್ದಿರೋ ದೇಶ, ನೇಚರ್ ಇಲ್ದಿರೋ ನಾಡು, ಟೀಚರ್ಸ್ ಇಲ್ದಿರೋ ಸ್ಕೂಲ್ಸು, ಲೀಡರ್ಸ್ ಇಲ್ದಿರೋ ಪಾರ್ಟೀಸ್, ಪ್ಲಾನಿಂಗ್ ಇಲ್ದಿರೋ ಫ್ಯಾಮಿಲೀಸು, ಒಬ್ಬೊಬ್ಬನಿಗೆ ಡಜನ್ ಡಜನ್ ಮಕ್ಳು, ಅದ್ರಲ್ಲಿ ಅರ್ಧ ಪುಕ್ಲು, ಇನ್ನರ್ಧ ತಿಕ್ಲು ತಿಕ್ಲು....

  ಪ್ರೇಮಾ ಜೊತೆ ಉಪೇಂದ್ರ ಚಿತ್ರ ಡೈಲಾಗ್

  ಪ್ರೇಮಾ ಜೊತೆ ಉಪೇಂದ್ರ ಚಿತ್ರ ಡೈಲಾಗ್

  ನೀನೇನು ಆ ಟೈಟಾನಿಕ್ ಹೀರೋಯಿನ್ ಅಂದ್ಕೋಂಡು ಬಿಟ್ಟಿದ್ದೀಯಾ... ಐದೇ ಐದು ನಿಮಿಷ...ಎಷ್ಟು ನಿನ್ನ ರೇಟು ಹೇಳು....(ಪ್ರೇಮಾ _ ಹದಿನೈದು ಸಾವಿರಕ್ಕೆ ಒಂದೇ ಒಂದು ಪೈಸೆನೂ ಕಮ್ಮಿ ಇಲ್ಲ...

  ಡೋಂಟ್ ಟಾಕ್ ಸಿಂಗಲ್ ವರ್ಡ್ ಎಬೌಟ್ ಮೈ ಕಂಟ್ರಿ

  ಡೋಂಟ್ ಟಾಕ್ ಸಿಂಗಲ್ ವರ್ಡ್ ಎಬೌಟ್ ಮೈ ಕಂಟ್ರಿ

  ಡೋಂಟ್ ಟಚ್ ಮಿ...ನನ್ನ ಈ ದೇಹ ಮುಟ್ಟೋ ಅರ್ಹತೆ ಇರೋದು ಆ ಚಾಂದಿನಿ ಒಬ್ಬಳಿಗೆ...ಷಟಪ್ ಯು ಡರ್ಟಿ ಫಾರಿನ್ ಗರ್ಲ್, ಡೋಂಟ್ ಟಾಕ್ ಸಿಂಗಲ್ ವರ್ಡ್ ಎಬೌಟ್ ಮೈ ಕಂಟ್ರಿ..ವಾಟ್ ಯು ನೋ ಎಬೌಟ್ ಮೈ ಲವ್ ಟುವರ್ಡ್ಸ್ ಚಾಂದಿನಿ ಐ ಸೇ...ಫಸ್ಟ್ ಆಫ್ ಆಲ್ ಯು ನೋ ವಾಟ್ ಲವ್ ಈಸ್...ಚಾಂದಿನಿ ವಾಸ್ ಏಂಜಲ್ ಊ ಟಾಟ್ ಮೀ ವಾಟ್ ಲವ್ ಈಸ್...ಯು ಥಿಂಕ್ ಐ ಲವ್ ಚಾಂದಿನಿ ಬಿಕಾಸ್ ಆಫ್ ಎಕ್ಟ್ರನಲ್ ಬ್ಯೂಟಿ...

  ಎ ಚಿತ್ರದಲ್ಲಿ ವಿಘ್ನೇಶ್ವರನಿಗೆ ಹೊಡೆಗೆ ಡೈಲಾಗ್

  ಎ ಚಿತ್ರದಲ್ಲಿ ವಿಘ್ನೇಶ್ವರನಿಗೆ ಹೊಡೆಗೆ ಡೈಲಾಗ್

  ಏನ್ ತಮಾಷೆ ಮಾಡ್ತಾ ಇದ್ದೀರಾ...ಆಟಾ ಆಡ್ತಾ ಇದ್ದೀಯಾ... ದೇಶ ಬೆಂಕಿ ಹೊತ್ತಿ ಉರೀತಾ ಇದೆ...ಬಡವರು ಒಳ್ಳೆಯವರ ಹೊಟ್ಟೆ ಉರಿತಾ ಇದೆ..ಕೆಟ್ಟವರ ಹೊಟ್ಟೆ ಊದುತ್ತಾ ಇದೆ...ನೀನ್ ಮಜಾ ತಗೋತಾ ಇದ್ದೀಯಾ ಇಲ್ಲಿ...ಯಾಕ್ ಗಣೇಶ ನೀನು ಸರ್ವಶಕ್ತ ತಾನೆ...ಆಂ...ಯಾಕ್ ಈ ರೀತಿ ಜನಗಳ ಕೈಲಿ ಒಳ್ಳೇದು ಕೆಟ್ಟದು ಮಾಡ್ಸಿ ಪಾಪಿ ಪುಣ್ಯವಂತ ಅಂಥ ಹಿಂಗ್ ಮಾಡ್ತೀಯಾ...ಯಾಕ್ ಈ ರೀತಿ ತೊಂದರೆ ಕೊಡ್ತೀಯಾ ಕೆಟ್ಟವರನ್ನೆಲ್ಲಾ ಸಾಯಿಸಿ ಬಿಡು..ಒಳ್ಳೆಯವರನ್ನೆಲ್ಲ್ಲ ಚೆನ್ನಾಗಿಡು..ತಗೋ ತಗೋ ತಾಕತ್ ಇದ್ರೆ ಹೋಗಿ ಸಾಯಿಸಿ ಬಿಡೋಗು...ಆಗಲ್ಲ ನಿನ್ನ ಕೈಯಲ್ಲಿ ಆಗಲ್ಲ...

  ಶ್!! ಚಿತ್ರದಲ್ಲಿ ಕಾಶಿನಾಥ್ ಗೆ ಟಾಂಗ್ ಕೊಟ್ಟಾಗ

  ಶ್!! ಚಿತ್ರದಲ್ಲಿ ಕಾಶಿನಾಥ್ ಗೆ ಟಾಂಗ್ ಕೊಟ್ಟಾಗ

  ಹೂ ಈಸ್ ದಿ ಆಫೀಸರ್ ಇನ್ ಚಾರ್ಚ್ ಹಿಯರ್...ಸೋ ಯು ಆರ್ ದಿ ಏರಿಯಾ ಎಸ್ ಐ...ವಾಟ್ ಈಸ್ ಯುವರ್ ನೇಮ್...ಕಾಳಯ್ಯ ಸಾರ್...ಕಾಳಯ್ಯಾ ವೇರ್ ಈಸ್ ಮಿಸ್ಟರ್ ಕಾಶಿನಾಥ್....ಫಾಲೋಮಿ...ಕಾಶಿನಾಥ್ ಕಾಶಿನಾಥ್...ಎಸ್ ನಾನೇ ಕಾಶಿನಾಥ್...ಹಾಗೆ ಹೇಳಿಕೊಂಡು ಬಂದಿರೋ ಡೂಪ್ಲಿಕೇಟ್ ಕಾಶಿನಾಥ್ ನೀವು...ನಿಮ್ಮ ನಾಟಕ ಎಲ್ಲಾ ಈ ಹೊತ್ತಿಗೆ ಕೊನೆಯಾಯ್ತು...ಯು ಆರ್ ಅಂಡರ್ ಅರೆಸ್ಟ್...ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದ್ರೆ ಗೊತ್ತಾಗಲ್ಲ ಅಂದು ಕೊಂಡಿದ್ದೀರಾ...ಸಾರಿ ಸರ್...ಆ ಇಂಗ್ಲಿಷ್ ನವರು ನಮ್ ದೇಶ ಬಿಟ್ಟು ಹೋಗಬೇಕಾದರೆ ಎಲ್ಲವನ್ನೂ ದೋಚಿಕೊಂಡು ಹೋಗಿ ಈ ಕಿತ್ತೋಗಿರೋ ಇಂಗ್ಲಿಷ್ ಪದನ್ನು ಬಿಟ್ಟುಹೋದ್ರು...

  ರಕ್ತ ಕಣ್ಣೀರು ಚಿತ್ರದಲ್ಲಿ ಇಂಗ್ಲಿಷ್ ಮಹತ್ವ ಹೇಳಿದ ಉಪ್ಪಿ

  ರಕ್ತ ಕಣ್ಣೀರು ಚಿತ್ರದಲ್ಲಿ ಇಂಗ್ಲಿಷ್ ಮಹತ್ವ ಹೇಳಿದ ಉಪ್ಪಿ

  ಯು ಸೀ ಮ್ಯಾನ್ ಈ ದೇಶದಲ್ಲಿ ಏನ್ ಕಲಿದೇ ಇದ್ರು ಇಂಗ್ಲಿಷ್ ಮಾತ್ರ ಕಲೀಲೇ ಬೇಕು ಮ್ಯಾನ್...ಈ ದೇಶದ ವೀಕ್ ನೆಸ್ಸೇ ಇಂಗ್ಲಿಷು...ಇಂಗ್ಲಿಷ್ ಒಂದು ಗೊತ್ತಿದ್ರೆ ಈರಭದ್ರನಿಗೂ ಸಾಲ ಕೊಡ್ತಾರೆ...ಕೋಡಂಗಿಗೆ ಹೆಣ್ ಕೊಡ್ತಾರೆ ಮಂಕು ದಿಣ್ಣೆಗಳಿಗೆ ಸ್ಕೂಲಲ್ಲಿ ಸೀಟ್ ಕೊಡ್ತಾರೆ...ಕಮಂಗಿಗೆ ಸಿನಿಮಾದಲ್ಲಿ ಪಾರ್ಟ್ ಕೊಡ್ತಾರೆ...ಕೋತಿಗಳಿಗೆ ಹೆಣ್ ಮಕ್ಕಳು ಹಾರ್ಟ್ ಕೊಡ್ತಾರೆ..ಜಸ್ಟ್ ಬಿಕಾಸ್ ಆಫ್ ಇಂಗ್ಲಿಷ್ ಮ್ಯಾನ್...


  ಈ ಹಿನ್ನೆಯಲ್ಲಿ ಅವರ ಚಿತ್ರಗಳಲ್ಲಿನ ಕೆಲವು ಡೈಲಾಗ್ ಗಳು ನಮ್ಮ ಒನ್ಇಂಡಿಯಾ ಕನ್ನಡ ಓದುಗರಿಗಾಗಿ ಇಲ್ಲಿ ನೀಡಲಾಗಿದೆ. ಈ ಬಾರಿಯ ಹುಟ್ಟುಹಬ್ಬಕ್ಕೆ ಅವರ ಮಡದಿ ದುಬಾರಿ ಜಾಗ್ವಾರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

  ಅವರ ಹುಟ್ಟುಹಬ್ಪದ ದಿನವೇ 'ಉಪೇಂದ್ರ ಪ್ರೊಡಕ್ಷನ್' ಆರಂಭಗೊಳ್ಳಲಿದೆ. ಅಂದು ಸಾಂಪ್ರದಾಯಿಕವಾಗಿ ಚೆಕ್‌ಬುಕ್, ಸ್ಕ್ರಿಪ್ಟ್ ಪೂಜೆ ನಡೆಯಲಿದೆ. ಉಪೇಂದ್ರ ಅವರು ಅಭಿನಯಿಸುತ್ತಿರುವ ಕಲ್ಪನ ಹಾಗೂ ಟೋಪಿವಾಲ ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ.

  ಸೋಮವಾರ (ಸೆ.17) ಮಧ್ಯರಾತ್ರಿ ಮೀರುತ್ತಿದ್ದಂತೆ ಉಪೇಂದ್ರ ಅಭಿಮಾನಿಗಳು ಉಪೇಂದ್ರ ಮನೆಯ ಮುಂದೆ ಜಮಾಯಿಸಿ ಪಟಾಕಿ ಸಿಡಿಸಿ ಅವರ ಹುಟ್ಟುಹಬ್ಬಕ್ಕೆ ಸ್ವಾಗತಕೋರಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳಿಗೆಂದೇ ಕೆಲವು ಡೈಲಾಗ್ ಗಳು ಇಲ್ಲಿವೆ. ಉಪೇಂದ್ರ ವಿಶೇಷ ಏನೆಂದರೆ ಅವರ ಡೈಲಾಗ್ ಗಳಲ್ಲಿ ಸಾಕಷ್ಟು ಇಂಗ್ಲಿಷ್ ಇದ್ದರೂ ಕೇಳಲು ಮಜವಾಗಿರುತ್ತದೆ. ಒಮ್ಮೆ ಓದಿ ನೋಡಿ.

  English summary
  Kannada actor Real Star Upendra celebrates his 44th birthday on 18th Sept 2012. Enjoy reading bombat dialogues from A, Upendra, Raktha Kanneru and Shh!! Upendra top 6 Kannada dialogues.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X