'ಯುಐ' ಬಿಡುಗಡೆಗೆ ಕಾಯ್ತಿದ್ದವರಿಗೆ 'ಎ'Oತ ನ್ಯೂಸ್ ಕೊಟ್ರು ನೋಡಿ ಉಪೇಂದ್ರ; ನಿಜಕ್ಕೂ ಸಖತ್ ಕ್ರೇಜಿ

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಟೀಸರ್, ಸಾಂಗ್ಸ್‌ನಿಂದ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ. ಆದರೆ ಗ್ರಾಫಿಕ್ಸ್ ಕೆಲಸಗಳು ಜಾಸ್ತಿ ಇರುವ ಕಾರಣ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ತಡವಾಗುತ್ತಿದೆ.

ಎಲೆಕ್ಷನ್, ಐಪಿಎಲ್ ಬಿಸಿ ಕೂಡ 'ಯುಐ' ಚಿತ್ರಕ್ಕೆ ತಟ್ಟಿದೆ. ಹಾಗಾಗಿ ಇನ್ನು ಎರಡು ತಿಂಗಳು ಸಿನಿಮಾ ಬಿಡುಗಡೆ ಆಗುವುದು ಅನುಮಾನ. ಬಹಳ ಅದ್ಧೂರಿಯಾಗಿ 'ಯುಐ' ಸಿನಿಮಾ ನಿರ್ಮಾಣವಾಗುತ್ತಿದೆ. ಮನೋಹರ್ ಜೊತೆ ಸೇರಿ ಕೆ. ಪಿ ಶ್ರೀಕಾಂತ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ರೀಷ್ಮಾ ನಾಣಯ್ಯ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.

Real star Upendra s Super hit film to have a Digital Release

ಈಗಾಗಲೇ 'ಟ್ರೋಲ್' ಸೂಪರ್ ಹಿಟ್ ಆಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಪ್ರಪಂಚದ ಆಗುಹೋಗುಗಳನ್ನೆಲ್ಲಾ ಸೇರಿಸಿ ಉಪ್ಪಿ ತಮ್ಮದೇ ಸ್ಟೈಲ್‌ನಲ್ಲಿ 'ಯುಐ' ಕಥೆ ಎಣೆದಿದ್ದಾರೆ. ಆದರೆ ಸದ್ಯಕ್ಕೆ ಈ ಸಿನಿಮಾ ಬಿಡುಗಡೆ ಲಕ್ಷಣಗಳು ಕಾಣುತ್ತಿಲ್ಲ. ಆದರೆ 'ಯುಐ' ಸಿನಿಮಾ ತಡವಾದರೆ ಏನು? ಉಪ್ಪಿ ಆಲ್‌ಟೈಮ್ ಫೇವರಿಟ್ ಸಿನಿಮಾವೊಂದು ಹೊಸ ರೂಪದಲ್ಲಿ ರಿಲೀಸ್‌ಗೆ ರೆಡಿಯಾಗಿದೆ. ಟ್ರೈಲರ್ ಸಮೇತ ರಿಯಲ್ ಸ್ಟಾರ್ ಇದನ್ನು ಖಚಿತಪಡಿಸಿದ್ದಾರೆ.

ಉಪೇಂದ್ರ ನಿರ್ದೇಶಿಸಿ ಹೀರೊ ಆಗಿ ನಟಿಸಿದ ಚೊಚ್ಚಲ ಸಿನಿಮಾ 'ಎ'. 25 ವರ್ಷಗಳ ಹಿಂದೆ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ಈ ಚಿತ್ರವನ್ನು ಡಿಜಿಟಲ್ ರೂಪದಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಈಗಾಗಲೇ ತಾಂತ್ರಿಕವಾಗಿ ಚಿತ್ರವನ್ನು ಇವತ್ತಿನ ಕಾಲಕ್ಕೆ ತಕ್ಕಂತೆ ಸಿದ್ಧಪಡಿಸುವ ಕೆಲಸಗಳು ನಡೀತಿದೆ. ಮುಂದಿನ ವಾರವೇ ಸಿನಿಮಾ ತೆರೆಗಪ್ಪಳಿಸಲಿದೆ.

Real star Upendra s Super hit film to have a Digital Release

ಬಿ. ಜಗನ್ನಾಥ್ ಹಾಗೂ ಬಿ. ಜಿ ಮಂಜುನಾಥ್ ನಿರ್ಮಾಣದ 'ಎ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಉಪ್ಪಿ ತಮ್ಮ ವಿಭಿನ್ನ ಆಲೋಚನೆಗಳನ್ನು ತೆರೆಗೆ ತಂದು ಗೆದ್ದಿದ್ದರು. ಸಿನಿಮಾದೊಳಗೆ ಒಂದು ಸಿನಿಮಾ ಮಾಡುವ ಕಥೆಯನ್ನು ಹೇಳಿದ್ದರು. ಗುರುಕಿರಣ್ ಸಂಗೀತ ಚಿತ್ರಕ್ಕೆ ಜೀವಾಳವಾಗಿತ್ತು. ಅಂದಾಜು 1.25 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಅವತ್ತಿನ ಕಾಲಕ್ಕೆ 20 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು.

ನಟ ಉಪೇಂದ್ರಗೆ ಹೀರೊ ಆಗಿ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ಇದು. ಟೈಟಲ್‌ನಿಂದಲೇ ಸಿನಿಮಾ ಬಹಳ ಕುತೂಹಲ ಮೂಡಿಸಿತ್ತು. ಆಲ್ಬಮ್ ಹಿಟ್ ಆಗಿ ನಿರೀಕ್ಷೆ ಹೆಚ್ಚಾಗುತ್ತು. ಸಾಮಾನ್ಯವಾಗಿ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ಕೊಡುತ್ತದೆ. ಏ, ಯು, ಯು/ಎ ಸರ್ಟಿಫಿಕೇಟ್ ಕೊಡುತ್ತಾರೆ. ಕೆಲವರು ಎ ಸಿಕ್ಕರೆ ಅದನ್ನು ಪೋಸ್ಟರ್ ಮೇಲೆ ಹಾಕಲು ಹಿಂದುಮುಂದು ನೋಡುತ್ತಾರೆ. ಆದರೆ 'ಎ' ಎನ್ನುವ ಟೈಟಲ್‌ನಲ್ಲೇ ರಿಯಲ್ ಸ್ಟಾರ್ ಸಿನಿಮಾ ಮಾಡಿ ಗೆದ್ದಿದ್ದರು.

'ಎ' ಚಿತ್ರದಲ್ಲಿ ಚಾಂದಿನಿ, ಅರ್ಚನಾ ನಾಯಕಿಯರಾಗಿ ನಟಿಸಿದ್ದರು. 'ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ' ಎನ್ನುವ ಕ್ಯಾಪ್ಷನ್ ಕೊಟ್ಟು 'ಎ' ಚಿತ್ರವನ್ನು ಪ್ರಚಾರ ಮಾಡಲಾಗಿತ್ತು. ಸಿನಿಮಾ ತೆಲುಗಿಗೂ ಡಬ್ ಆಗಿ ಹಿಟ್ ಆಗಿತ್ತು. ಇನ್ನು ಚಿತ್ರದ ಆರಂಭದಲ್ಲೇ ಗಣೇಶನ ವಿಗ್ರಹಕ್ಕೆ ಗನ್ ಇಟ್ಟು ಉಪೇಂದ್ರ ಹೇಳಿದ್ದ ಡೈಲಾಗ್‌ಗಳು ವೈರಲ್ ಆಗಿತ್ತು. ತಮ್ಮದೇ ಶೈಲಿಯಲ್ಲಿ ಬಹಳ ವಿಚಿತ್ರವಾಗಿ ಫಿಲಾಸಫಿ ಹೇಳಿದ್ದರು. ಎಲ್ಲಾ ಸೇರಿ ಸಿನಿಮಾ ಹಿಟ್ ಆಗಿತ್ತು.

ಡಿಜಿಟಲ್ ರೂಪದಲ್ಲಿ ಇದೀಗ 'ಎ' ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಮುಂದಿನ ವಾರವೇ ಸಿನಿಮಾ ಮತ್ತೆ ಬೆಳ್ಳಿ ಪರದೆ ಅಲಂಕರಿಸುತ್ತಿದ್ದು ಈಗಾಗಲೇ ಕೆಲವೆಡೆ ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದೆ.

More from Filmibeat

English summary
Upendra Starrer super hit film returns in remastered digital avatar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X