twitter
    For Quick Alerts
    ALLOW NOTIFICATIONS  
    For Daily Alerts

    ಲಾಕ್‌ಡೌನ್: ಧಾರಾವಾಹಿ, ರಿಯಾಲಿಟಿ ಶೋ ಪ್ರಿಯರಿಗೆ ಶಾಕ್

    |

    ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಕರ್ಫ್ಯೂ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮೇ 10 ರಿಂದ 24ನೇ ತಾರೀಖಿನವರೆಗೂ ಮತ್ತಷ್ಟು ದಿನ ಕರ್ಫ್ಯೂ ಮುಂದುವರಿಸುವ ಸರ್ಕಾರದ ತೀರ್ಮಾನಕ್ಕೆ ಈಗ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕೈ ಜೋಡಿಸಿದೆ.

    ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಮೇ 10 ರಿಂದ 24ನೇ ತಾರೀಖಿನವರೆಗೂ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣ ರದ್ದುಗೊಳಿಸಲು ಸೂಚಿಸಲಾಗಿತ್ತು. ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಹ ಈ ಕುರಿತು ಅಧಿಕೃತ ಪ್ರಕಟಣೆ ಮಾಡಿದೆ.

    ಕರ್ನಾಟಕ ಲಾಕ್‌ಡೌನ್: ಚಿತ್ರಮಂದಿರ, ಚಿತ್ರೀಕರಣದ ಮೇಲಿನ ನಿರ್ಬಂಧ ಮುಂದುವರಿಕೆಕರ್ನಾಟಕ ಲಾಕ್‌ಡೌನ್: ಚಿತ್ರಮಂದಿರ, ಚಿತ್ರೀಕರಣದ ಮೇಲಿನ ನಿರ್ಬಂಧ ಮುಂದುವರಿಕೆ

    ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಇಂದು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಮೇ 10 ರಿಂದ 24ರವರೆಗೂ ಕರ್ನಾಟಕದಲ್ಲಿ ಯಾವುದೇ ಧಾರಾವಾಹಿ, ರಿಯಾಲಿಟಿ ಶೋ ಚಿತ್ರೀಕರಣ ಮಾಡದಂತೆ ಆದೇಶಿಸಿದ್ದಾರೆ.

    Reality Shows and Kannada Serial Shooting will stop till May 24th; Shivakumar

    ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಕೈ ಜೋಡಿಸಬೇಕಾದ ಅನಿರ್ವಾತೆಯಿದ್ದು, ಮೇ 10 ರಿಂದ 24ರವರೆಗೂ ಕರ್ನಾಟಕದ ಯಾವುದೇ ಮೂಲೆಯಲ್ಲೂ (ರೆಸಾರ್ಟ್, ಪ್ರವಾಸಿ ತಾಣ, ಬೆಂಗಳೂರು ಹೊರವಲಯಗಳಲ್ಲಿ) ಧಾರಾವಾಹಿ ಚಿತ್ರೀಕರಣ ಮಾಡದಂತೆ ತೀರ್ಮಾನಿಸಲಾಗಿದೆ.

    ಯಾರಾದರೂ ಕದ್ದು ಮುಚ್ಚಿ ಚಿತ್ರೀಕರಣ ಮುಂದುವರಿಸಿದರೆ ಧಾರಾವಾಹಿ ತಂಡಗಳು ಹಾಗೂ ವಾಹಿನಿ ವಿರುದ್ಧ ಕೋವಿಡ್ ನಿಯಮಗಳ ಅಡಿ ಶಿಕ್ಷೆಗೆ ಗುರಿ ಮಾಡಲಾಗುತ್ತದೆ ಎಂದು ಎಚ್ಚರಿಸಿದೆ.

    ಮೇ 24ರ ನಂತರ ಧಾರಾವಾಹಿ, ರಿಯಾಲಿಟಿ ಶೋ ಚಿತ್ರೀಕರಣ ಪುನರಾರಂಭದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Reality Shows and Kannada Serial Shooting will stop till May 24th; Shivakumar

    Recommended Video

    ಶಂಖನಾದ ಅರವಿಂದ್ ಸಾವಿಗೆ ಭಾವುಕರಾದ ಪುನೀತ್ ರಾಜಕುಮಾರ್ | Filmibeat Kannada

    ಈ ಹಿಂದೆ ಏಪ್ರಿಲ್ 27ರಿಂದ ಎರಡು ವಾರಗಳ ಕಠಿಣ ಕರ್ಫ್ಯೂ ಹೇರಲಾಗಿತ್ತು. ಆ ಅವಧಿಯಲ್ಲಿ ಕೆಲವು ರಿಯಾಲಿಟಿ ಶೋಗಳ ಚಿತ್ರೀಕರಣ ನಡೆದಿತ್ತು. ಇದೀಗ, ಹೊಸದಾಗಿ ಹೊರಡಿಸಲಾಗಿರುವ ಮಾರ್ಗಸೂಚಿಯಲ್ಲಿ ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋ ಶೂಟಿಂಗ್ ಸಂಪೂರ್ಣ ರದ್ದುಗೊಳಿಸಲಾಗಿದೆ. ಚಿತ್ರಪ್ರದರ್ಶನದ ಮೇಲಿನ ನಿರ್ಬಂಧ ಮುಂದುವರಿದಿದೆ.

    English summary
    Lockdown: Reality Shows and Kannada Serial Shooting will stop till May 24th; Shivakumar.
    Saturday, May 8, 2021, 15:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X