For Quick Alerts
  ALLOW NOTIFICATIONS  
  For Daily Alerts

  ರಾಣಾ ಜೊತೆ ರಕುಲ್ ಡೇಟಿಂಗ್? ಸುದ್ದಿ ಕೇಳಿ ನಟಿ ಹೇಳಿದ್ದೇನು?

  |

  ಸೌತ್ ಇಂಡಸ್ಟ್ರಿಯಲ್ಲಿ ಭಾರಿ ಬೇಡಿಕೆ ಹೊಂದಿರುವ ನಟಿ ರಕುಲ್ ಪ್ರೀತ್ ಸಿಂಗ್ ತೆಲುಗು ಸ್ಟಾರ್ ನಟ ರಾಣಾ ದಗ್ಗುಬಾಟಿ ಜೊತೆ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ.

  ಇಬ್ಬರು ಸ್ನೇಹಿತರಾಗಿರುವ ಕಾರಣ, ಹಲವು ಕಡೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆತ್ಮೀಯವಾಗಿ ಫೋಟೋಗಳನ್ನ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಇದೆಲ್ಲವನ್ನು ಗಮನಿಸಿದ ನೆಟ್ಟಿಗರು, ರಾಣಾ ಮತ್ತು ರಕುಲ್ ಡೇಟ್ ಮಾಡ್ತಿರಬಹುದು, ಆದರೆ ಸಂಬಂಧವನ್ನ ಗೌಪ್ಯವಾಗಿಟ್ಟುಕೊಂಡಿದ್ದಾರೆ ಎಂದು ಹೇಳಲು ಆರಂಭಿಸಿದ್ದರು.

  ರಕುಲ್ ಪ್ರೀತ್ ವರ್ಕೌಟ್ ಫೋಟೋ ನೋಡಿ ಪಡ್ಡೆ ಹೈಕ್ಳ ಮನಸ್ಸು ವಿಲವಿಲ!ರಕುಲ್ ಪ್ರೀತ್ ವರ್ಕೌಟ್ ಫೋಟೋ ನೋಡಿ ಪಡ್ಡೆ ಹೈಕ್ಳ ಮನಸ್ಸು ವಿಲವಿಲ!

  ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ, ಸ್ವತಃ ರಕುಲ್ ಪ್ರೀತ್ ಈ ಕುರಿತು ಮಾತನಾಡಿದ್ದಾರೆ. ''ರಾಣಾ ನನ್ನ ಬೆಸ್ಟ್ ಫ್ರೆಂಡ್. ನಾವು ನೆರೆಹೊರೆಯವರು. ಲಕ್ಷ್ಮಿ ಮಂಚು, ನಾನು ಮತ್ತು ರಾಣಾ ಉತ್ತಮ ಸ್ನೇಹಿತರು. ನಾನು ಸಿನಿಮಾ ಜರ್ನಿ ಆರಂಭಿಸಿದ ವೇಳೆಯಿಂದಲೂ ರಾಣಾ ನನ್ನ ಜೊತೆಯಲ್ಲಿದ್ದಾರೆ'' ಎಂದು ಕೇಳಿಬಂದಿದ್ದ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

  ಪ್ಯಾಂಟ್ ಜಿಪ್ ಹಾಕದೆ ಪೋಸ್ ನೀಡಿ ಟ್ರೋಲ್ ಆದ ನಟಿ ರಾಕುಲ್ಪ್ಯಾಂಟ್ ಜಿಪ್ ಹಾಕದೆ ಪೋಸ್ ನೀಡಿ ಟ್ರೋಲ್ ಆದ ನಟಿ ರಾಕುಲ್

  ಹಿಂದಿಯ ಮಾರ್ಜವಾನ್ ಸಿನಿಮಾದಲ್ಲಿ ರಕುಲ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇದೇ ವಾರ ತೆರೆಗೆ ಬರ್ತಿದೆ. ಈ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದಾಗ ರಾಣಾ ಬಗ್ಗೆ ಕೇಳಲಾಗಿದೆ.

  ಇನ್ನುಳಿದಂತೆ ತಮಿಳಿನಲ್ಲಿ ಶಿಕಾರ್ತಿಕೇಯನ್ ಜೊತೆ ರಕುಲ್ ಒಂದು ಸಿನಿಮಾ ಮಾಡ್ತಿದ್ದಾರೆ. ಕಮಲ್ ಹಾಸನ್ ನಟನೆಯ ಇಂಡಿಯನ್ 2 ಚಿತ್ರದಲ್ಲಿಯೂ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  English summary
  Actress Rakul Preet Singh dating Rana Daggubati? what she said about this topic?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X