ಮುರುಘಾಮಠಕ್ಕೆ ದರ್ಶನ್-ರಾಕ್ ಲೈನ್ ಭೇಟಿ ಹಿಂದೆ ಬಲವಾದ ಕಾರಣ.!

ಚಿತ್ರದುರ್ಗದ ಮುರುಘಾಮಠಕ್ಕೆ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದರು. ಮುರುಘಾಮಠದಲ್ಲಿ ನಡೆಯುತ್ತಿರುವ 'ಶರಣ ಸಂಸ್ಕೃತಿ ಉತ್ಸವ'ಕ್ಕೆ ಡಿ ಬಾಸ್ ಚಾಲನೆ ನೀಡಿದ್ರು. ಇದು ಸಹಜವಾಗಿ ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಯಾಕಂದ್ರೆ, 'ಶರಣ ಸಂಸ್ಕೃತಿ ಉತ್ಸವ' ವೇದಿಕೆಯಲ್ಲಿ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಸಾಹಿತಿ, ಬರಹಗಾರ ಬಿಎಲ್ ವೇಣು, ಹಿರಿಯ ನಟ ಶ್ರೀನಿವಾಸ ಮೂರ್ತಿ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದು ಭಾರಿ ಕುತೂಹಲ ಮೂಡಿಸಿದೆ.

ಇದನ್ನ ಗಮನಿಸಿದ್ರೆ ಮೇಲ್ನೋಟಕ್ಕೆ ಇದು ಶರಣ ಸಂಸ್ಕೃತಿ ಉತ್ಸವ ಎನಿಸಿದ್ರೂ ಮದಕರಿ ನಾಯಕ ಚಿತ್ರದ ಕಾರ್ಯಕ್ರಮ ಎನ್ನುವಂತಿತ್ತು. ಅಷ್ಟಕ್ಕೂ, ದರ್ಶನ್ ಮತ್ತು ತಂಡ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದೇಕೆ.? ಈ ಭೇಟಿ ಹಿಂದೆ ಇರುವ ನಿಜವಾದ ಕಾರಣವೇನು.? ಮುಂದೆ ಓದಿ.....

'ಮದಕರಿ' ಚಿತ್ರಕ್ಕೆ ಅಧಿಕೃತ ಚಾಲನೆ

'ಮದಕರಿ' ಚಿತ್ರಕ್ಕೆ ಅಧಿಕೃತ ಚಾಲನೆ

ಮುರುಘಾಮಠದಿಂದ ದರ್ಶನ್ ಮತ್ತು ರಾಕ್ ಲೈನ್ ವೆಂಕಟೇಶ್ ಜೋಡಿಯ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯ್ತಾ ಎಂಬ ಕುತೂಹಲ ಕಾಡುತ್ತಿದೆ. ಯಾಕಂದ್ರೆ, ಈ ಸಿನಿಮಾ ಮಾಡಬೇಕೆಂದುಕೊಂಡಿರುವ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಚಿತ್ರದುರ್ಗದ ಪಾಳೇಗಾರರ ಕುರಿತು ಸಿನಿಮಾ ಇದಾಗಿದ್ದರಿಂದ ಚಿತ್ರದುರ್ಗದಿಂದಲೇ ಆರಂಭಿಸುವ ಉದ್ದೇಶದಿಂದ ಎಲ್ಲರೂ ಒಟ್ಟಿಗೆ ಆಗಮಿಸಿರಬಹುದು.

ಮಠಾಧೀಶಾರ ಓಲೈಕೆ

ಮಠಾಧೀಶಾರ ಓಲೈಕೆ

ಅಂದ್ಹಾಗೆ, ಸುದೀಪ್ ಮದಕರಿ ಸಿನಿಮಾ ಮಾಡಲಿ ಎಂದು ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಬಹಿರಂಗವಾಗಿ ಒತ್ತಾಯ ಮಾಡಿದ್ದರು. ಇದರಿಂದ ದರ್ಶನ್ ಸಿನಿಮಾಗೆ ಒಂದು ವಿರೋಧ ಕೂಡ ವ್ಯಕ್ತವಾಗಿತ್ತು. ಮುಂದಿನ ದಿನಗಳಲ್ಲೂ ಈ ಚಿತ್ರಕ್ಕೆ ವಿವಾದ ಅಂಟಿಕೊಳ್ಳಬಹುದು ಎಂಬ ಮಾತಿದೆ. ಸುದೀಪ್ ಸಿನಿಮಾಗೆ ಒಂದು ಸಮುದಾಯ ಬೆಂಬಲ ನೀಡುತ್ತಿದೆ. ಹೀಗಾಗಿ, ಸ್ವಾಮೀಜಿ ಮತ್ತು ಮಠಾಧೀಶರ ಆಶೀರ್ವಾದ ದರ್ಶನ್ ಸಿನಿಮಾದ ಮೇಲೂ ಇರಲಿ ಎಂಬ ಕಾರಣವಿರಬಹುದು.

ಚಿತ್ರದುರ್ಗದ ಅಭಿಮಾನಿಗಳ ಆಶೀರ್ವಾದ

ಚಿತ್ರದುರ್ಗದ ಅಭಿಮಾನಿಗಳ ಆಶೀರ್ವಾದ

'ಮದಕರಿ ನಾಯಕ' ಸಿನಿಮಾ ಮಾಡುತ್ತಿರುವುದರಿಂದ ಚಿತ್ರದುರ್ಗದ ಜನರ ಆಶೀರ್ವಾದ ಮತ್ತು ಅವರ ಬೆಂಬಲ ಬೇಕೇ ಬೇಕು. ಹಾಗಾಗಿ, ಚಿತ್ರದುರ್ಗಕ್ಕೆ ಭೇಟಿ ನೀಡುವುದರಿಂದ ಅಲ್ಲಿನ ಜನ ಮತ್ತ ದರ್ಶನ್ ಅಭಿಮಾನಿಗಳನ್ನ ಆಕರ್ಷಿಸುವುದು ಒಂದು ಉದ್ದೇಶವಿರಬಹುದು.

ಸುದೀಪ್ 'ಮದಕರಿ'ಗೆ ಪ್ರತಿ ಸವಾಲು

ಸುದೀಪ್ 'ಮದಕರಿ'ಗೆ ಪ್ರತಿ ಸವಾಲು

ಸುದೀಪ್ ಅಭಿನಯಿಸಬೇಕೆಂದುಕೊಂಡಿರುವ ಮದಕರಿ ಚಿತ್ರ ಸದ್ದಿಲ್ಲದೇ ಆರಂಭವಾಗಿದೆ. ಪ್ರಿ-ಪ್ರೊಡಕ್ಷನ್ ಮಾಡ್ತಿರುವುದಾಗಿ ಹೇಳಿಕೊಂಡಿದ್ದ ಸುದೀಪ್ ಫೋಟೋಶೂಟ್ ಮುಗಿಸಿದ್ದಾರೆ ಎನ್ನಲಾಗುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗಾಗಿ, ನಾವು ಕೂಡ ಸಿನಿಮಾ ಆರಂಭಿಸಿದ್ದೇವೆ ಎಂದು ತೋರಿಸಲು ಈ ಭೇಟಿ ಇರಬಹುದು.

More from Filmibeat

English summary
Kannada actor challenging star darsha has visit to murga mata today
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X