»   » ಬಹುಭಾಷಾ ನಟಿಯ ಲೈಂಗಿಕ ದೌರ್ಜನ್ಯಕ್ಕೆ ಕಾರಣವೇನು? ಸತ್ಯ ಹೊರಬಿತ್ತು..

ಬಹುಭಾಷಾ ನಟಿಯ ಲೈಂಗಿಕ ದೌರ್ಜನ್ಯಕ್ಕೆ ಕಾರಣವೇನು? ಸತ್ಯ ಹೊರಬಿತ್ತು..

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ಬಹುಭಾಷಾ ನಟಿಯ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲಿವುಡ್ ನ ಖ್ಯಾತ ನಟ ದಿಲೀಪ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೇಟೆಸ್ಟ್ ಸುದ್ದಿ ಹೊರಬಿದ್ದಿದೆ.

ಬಂಧನ ಹಿನ್ನೆಲೆ ದಿಲೀಪ್‌ ಬಳಿ ಮಗಳು ಸುರಕ್ಷಿತವಲ್ಲ: ಮಂಜು ವಾರಿಯರ್

ನಟಿಯನ್ನು ಕಿಡ್ನಾಪ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಲು ಕಾರಣವೇನು ಎಂಬ ಸತ್ಯ ಕೊನೆಗೂ ಹೊರಬಿದ್ದಿದೆ. ಈ ಬಗ್ಗೆ ಹೆಚ್ಚಿನ ಡೀಟೇಲ್ಸ್ ಈ ಕೆಳಗಿನಂತಿದೆ..

ವೈಯಕ್ತಿಕ ದ್ವೇಷವೇ ಕಾರಣ

ನಟ ದಿಲೀಪ್ ಮತ್ತು ಪಲ್ಸರ್ ಸುನಿ ಜೊತೆಗಿದ್ದ ಫೋಟೋ, ಪಲ್ಸರ್ ಸುನಿ ಬರೆದ ಪತ್ರ, ಸಹ ಖೈದಿಯೊಬ್ಬರು ನಟ ದಿಲೀಪ್ ಈ ಪ್ರಕರಣದ ರೂವಾರಿ ಎಂದು ಹೇಳಿದ ಹಲವು ಸಾಕ್ಷಿಗಳ ಆಧಾರದಲ್ಲಿ ಕೇರಳ ಪೊಲೀಸರು ದಿಲೀಪ್ ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈಗ ಕೊನೆಗೂ ಸತ್ಯ ಹೊರಬಿದ್ದಿದ್ದು, ಪ್ರಸಿದ್ಧ ನಟಿಯನ್ನು ಅಪಹರಿಸಿ ದೌರ್ಜನ್ಯ ಎಸಗಲು ಜನಪ್ರಿಯ ನಟ ದಿಲೀಪ್ ಅವರ ವೈಯಕ್ತಿಕ ದ್ವೇಷವೇ ಕಾರಣ ಎಂದು ಪೊಲೀಸರು ಹೇಳಿರುವುದು ವರದಿಯಾಗಿದೆ.

ನಟಿ ಮೇಲೆ ವೈಯಕ್ತಿಕ ದ್ವೇಷಕ್ಕೆ ಕಾರಣವೇನು?

ನಟಿ ಕಾವ್ಯಾ ಮಾಧವನ್ ಜೊತೆ ದಿಲೀಪ್‌ಗೆ ಸಂಬಂಧವಿದೆ ಎಂಬ ಬಗ್ಗೆ ಪತ್ನಿ ಮಂಜು ವಾರಿಯರ್ ಗೆ ಕಿಡ್ನಾಪ್ ಗೆ ಒಳಗಾದ ನಟಿ ಮಾಹಿತಿ ನೀಡಿದ್ದರಂತೆ. ಈ ಕಾರಣ ನಟ ದಿಲೀಪ್ ಗೆ ಕೋಪವಿತ್ತಂತೆ. ಆ ಸೇಡಿನಿಂದ ದಿಲೀಪ್ 2013ರಲ್ಲಿಯೇ ನಟಿಯನ್ನು ಕಿಡ್ನಾಪ್ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದಿಲೀಪ್ ಕಾವ್ಯಾ ಮಾಧವನ್ ಅವರನ್ನು ಅನಂತರ ಮದುವೆ ಆಗಿದ್ದರು.

ವಿಡಿಯೋ ಚಿತ್ರೀಕರಣಕ್ಕೂ ದಿಲೀಪ್ ಹೇಳಿದ್ದರು

ಪ್ರಕರಣದ ರೂವಾರಿ ದಿಲೀಪ್, 'ನಟಿಯ ಮೇಲೆ ನಡೆಸಿದ ದೌರ್ಜನ್ಯದ ವಿಡಿಯೋ ಎಡಿಟ್ ಮಾಡಿದ್ದು ಅಥವಾ ನಕಲಿ ಎನಿಸಲೇಬಾರದು. ಆ ರೀತಿ ವಿಡಿಯೋ ಶೂಟ್ ಮಾಡಿ' ಎಂದು ಪ್ರಮುಖ ಆರೋಪಿ ಪಲ್ಸರ್ ಸುನಿಗೆ ಹೇಳಿದ್ದರಂತೆ. ಆದರೆ ಇವನನ್ನು ಭೇಟಿಯೇ ಆಗಿಲ್ಲ ಎಂದಿದ್ದ ದಿಲೀಪ್ ವಾದ ಸುಳ್ಳು. ಕಳೆದ ನವೆಂಬರ್ 13 ರಲ್ಲಿ ಸುನಿಯನ್ನು ದಿಲೀಪ್ ಮೀಟ್ ಆಗಿರುವುದಕ್ಕೆ ದಾಖಲೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ನಟ ದಿಲೀಪ್ ಬಂಧನದ ಹಿಂದಿರುವ ಸಾಕ್ಷಿಗಳೇನು?

ತಪ್ಪನ್ನು ಒಪ್ಪಿಕೊಂಡ ಪಲ್ಸರ್ ಸುನಿ

ಪಲ್ಸರ್ ಸುನಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಆಧಾರದಲ್ಲಿ, ಇನ್ನೂ ಹಲವು ದಾಖಲೆಗಳನ್ನು ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಿದ್ದಾರೆ. ನಟಿಯ ಮೇಲಿನ ದೌರ್ಜನ್ಯ ವಿಡಿಯೋ ಚಿತ್ರಿಕರಣದ ಪ್ರತಿಯನ್ನು ನೀಡಲು ಸುನಿ ಮತ್ತು ಆತನ ಸಹಚರ ಕಾವ್ಯಾ ಮಾಧವನ್ ನಡೆಸುತ್ತಿರುವ ಅಂಗಡಿಗೆ ಭೇಟಿ ನೀಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗಿದೆ ಎಂಬುದು ತಿಳಿದಿದೆ.

ದೌರ್ಜನ್ಯಕ್ಕೆ ಒಳಗಾದ ನಟಿಗೆ ಸಂಘಟನೆಗಳ ಬೆಂಬಲ

ನಟ ದಿಲೀಪ್ ಪೊಲೀಸರಿಂದ ಬಂಧನಕ್ಕೆ ಒಳಗಾದ ನಂತರ ಕೇರಳ ಚಲನಚಿತ್ರ ರಂಗದ ಹಲವು ಸಂಘಟನೆಗಳು ಅವರನ್ನು ಸದಸ್ಯತ್ವದಿಂದ ಹೊರಹಾಕಿದ್ದು, ದೌರ್ಜನ್ಯಕ್ಕೆ ಒಳಗಾದ ನಟಿಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.

English summary
Reason behind Malayalam Actress Sexual Harassment has revealed.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada