ಮಾರುತಿ ಗೌಡ ಮೇಲೆ ದುನಿಯಾ ವಿಜಯ್ ಹಲ್ಲೆಗೆ ಅಸಲಿ ಕಾರಣ ಏನು.?
Recommended Video

ನಡೆಯ ಬಾರದ ಘಟನೆಯೊಂದು ಮೊನ್ನೆ ನಡೆದು ಹೋಗಿದೆ. ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವರ ಮೇಲೆ ದುನಿಯಾ ವಿಜಯ್ ಮತ್ತು ತಂಡ ಮಾರಣಾಂತಿಕ ಹಲ್ಲೆ ನಡೆಸಿ ಜೈಲು ಪಾಲಾಗಿದ್ದಾರೆ.
ವಸಂತನಗರದಲ್ಲಿ ಇರುವ ಅಂಬೇಡ್ಕರ್ ಭವನದಲ್ಲಿ ಮಾರುತಿ ಗೌಡ ಹಾಗೂ ದುನಿಯಾ ವಿಜಯ್ ನಡುವೆ ಮಾತಿನ ಚಕಮಕಿ ನಡೆದಿದೆ. ಅದಾದ ಬಳಿಕ ಮಾರುತಿ ಗೌಡ ರನ್ನ ಕಾರಿನಲ್ಲಿ ಕರೆದುಕೊಂಡು ಹೋದ ದುನಿಯಾ ವಿಜಯ್ ಒಂದುವರೆ ಗಂಟೆ ಕಾಲ ಸುತ್ತಾಡಿಸಿ, ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಷ್ಟಕ್ಕೂ, ಮಾರುತಿ ಗೌಡ ಮೇಲೆ ದುನಿಯಾ ವಿಜಯ್ ಗೆ ಯಾಕೆ ಅಷ್ಟೊಂದು ಸಿಟ್ಟು.? ಪಾನಿಪೂರಿ ಕಿಟ್ಟಿ ಹಾಗೂ ದುನಿಯಾ ವಿಜಯ್ ಮಧ್ಯೆ ಇರುವ ವೈಮನಸ್ಯ ಎಂಥದ್ದು.? ರಾತ್ರೋರಾತ್ರಿ ಗಲಾಟೆ ನಡೆದದ್ದು ಯಾಕೆ.? ಎಲ್ಲದರ ಸಂಪೂರ್ಣ ವಿವರ ಇಲ್ಲಿದೆ, ಓದಿರಿ...

ದುನಿಯಾ ವಿಜಯ್-ಪಾನಿಪೂರಿ ಕಿಟ್ಟಿ ಮಧ್ಯೆ ಅಷ್ಟಕಷ್ಟೆ
ಒಂದ್ಕಾಲದಲ್ಲಿ ಆತ್ಮೀಯ ಗೆಳೆಯರಾಗಿದ್ದ ದುನಿಯಾ ವಿಜಯ್ ಹಾಗೂ ಪಾನಿಪೂರಿ ಕಿಟ್ಟಿ ಮಧ್ಯೆ ಕೆಲ ದಿನಗಳಿಂದ ಎಲ್ಲವೂ ಸರಿ ಇರಲಿಲ್ಲ. ಇಬ್ಬರ ನಡುವೆ ಮಾತು ಕಥೆ ಇರಲಿಲ್ಲ. ಬೂದಿ ಮುಚ್ಚಿದ ಕೆಂಡದಂತೆ ಇದ್ದ ಈ ಸಿಟ್ಟು ಮಾರುತಿ ಗೌಡ ಹಲ್ಲೆ ಮೂಲಕ ಭುಗಿಲೆದ್ದಿದೆ.

ಬೇರೆ ಜಿಮ್ ಟ್ರೈನರ್ ಮೊರೆ ಹೋಗಿದ್ದ ದುನಿಯಾ ವಿಜಯ್
ಪಾನಿಪೂರಿ ಕಿಟ್ಟಿ ಗರಡಿಯಲ್ಲೇ ದುನಿಯಾ ವಿಜಯ್ ಪಳಗಿದವರು. ಇಂತಿಪ್ಪ ದುನಿಯಾ ವಿಜಯ್ ಇದೀಗ ಬೇರೆ ಜಿಮ್ ಟ್ರೈನರ್ ಮೊರೆ ಹೋಗಿದ್ದಾರೆ. ಇದರಿಂದ ಇಬ್ಬರ ಮಧ್ಯೆ ದೊಡ್ಡ ಕಂದಕ ಸೃಷ್ಟಿ ಆಯ್ತು ಎನ್ನಲಾಗಿದೆ.

ಪಾನಿಪೂರಿ ಕಿಟ್ಟಿ-ಪ್ರಸಾದ್ ನಡುವಿನ ದ್ವೇಷ
ಸದ್ಯ ದುನಿಯಾ ವಿಜಯ್ ಗೆ ಜಿಮ್ ಟ್ರೈನಿಂಗ್ ಮಾಡ್ತಿರೋದು ಪ್ರಸಾದ್ ಎಂಬುವರು. ಪ್ರಸಾದ್ ಹಾಗೂ ಪಾನಿಪೂರಿ ಕಿಟ್ಟಿ ನಡುವೆ ಹಳೇ ದ್ವೇಷ ಇದೆ. ತಮ್ಮ ಬಗ್ಗೆ ದುನಿಯಾ ವಿಜಯ್ ಕಿವಿಗೆ ಪುಂಗಿ ಊದಿ ಹೀಗೆಲ್ಲ ಪ್ರಸಾದ್ ಗಲಾಟೆ ಮಾಡಿಸುತ್ತಿದ್ದಾನೆ ಅನ್ನೋದು ಪಾನಿಪೂರಿ ಕಿಟ್ಟಿ ಆರೋಪ.

ಮಾರುತಿಯಿಂದ ಸಾಮ್ರಾಟ್ ಗೆ ನಿಂದನೆ
ಅಂಬೇಡ್ಕರ್ ಭವನದಲ್ಲಿ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಗೆ ಮಾರುತಿ ಗೌಡ ನಿಂದಿಸಿದರು. ಅದಕ್ಕೆ ದುನಿಯಾ ವಿಜಯ್ ಗೆ ಕೋಪ ಬಂತು ಅಂತ ಹೇಳುವವರೂ ಇದ್ದಾರೆ.

ಅಂದು ನಡೆದಿದ್ದೇನು.?
ವಸಂತನಗರದಲ್ಲಿ ಇರುವ ಅಂಬೇಡ್ಕರ್ ಭವನದಲ್ಲಿ ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ನಡೆಯುತ್ತಿತ್ತು. ಸ್ಪರ್ಧೆಯಲ್ಲಿ ಮಾರುತಿ ಗೌಡ ಜಿಮ್ ನವರೂ ಭಾಗವಹಿಸಿದ್ದರಿಂದ, ಅಲ್ಲಿಗೆ ಮಾರುತಿ ಗೌಡ ಬಂದಿದ್ದರು. ಇದೇ ಸ್ಪರ್ಧೆಗೆ ವಿಶೇಷ ಅತಿಥಿಯಾಗಿ ದುನಿಯಾ ವಿಜಯ್ ಎಂಟ್ರಿಕೊಟ್ಟರು. ಸ್ಪರ್ಧೆ ಮುಗಿದ ಮೇಲೆ ದುನಿಯಾ ವಿಜಯ್ ಹಾಗೂ ಮಾರುತಿ ಗೌಡ ನಡುವಿನ ಮಾತಿನ ಚಕಮಕಿ ನಡೆದಿದೆ. ಬಳಿಕ ಮಾರುತಿ ಗೌಡರನ್ನ ಕಾರಿನಲ್ಲಿ ದುನಿಯಾ ವಿಜಯ್ ಕರೆದುಕೊಂಡು ಹೋಗಿದ್ದಾರೆ.

ದೂರು ನೀಡಿದ ಪಾನಿಪೂರಿ ಕಿಟ್ಟಿ
ಘಟನೆ ಗೊತ್ತಾಗುತ್ತಿದ್ದಂತೆಯೇ, ದುನಿಯಾ ವಿಜಯ್ ವಿರುದ್ಧ ಕಿಡ್ನ್ಯಾಪ್ ಹಾಗೂ ಹಲ್ಲೆ ಪ್ರಕರಣವನ್ನ ಪಾನಿಪೂರಿ ಕಿಟ್ಟಿ ದಾಖಲಿಸಿದ್ದಾರೆ. ಪೊಲೀಸ್ ಸ್ಟೇಷನ್ ಗೆ ಮಾರುತಿ ಗೌಡರನ್ನ ಕರೆತಂದು ದುನಿಯಾ ವಿಜಯ್ ತಪ್ಪೊಪ್ಪಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ದುನಿಯಾ ವಿಜಯ್, ಟ್ರೈನರ್ ಪ್ರಸಾದ್, ಡ್ರೈವರ್ ಪ್ರಸಾದ್ ಮತ್ತು ಮಣಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.


Click it and Unblock the Notifications











