ಐಟಿ ದಾಳಿ ಬಗ್ಗೆ ಯಶ್-ವಿಜಯ್ ಕಿರಗಂದೂರ್ ಇಬ್ಬರಿಗೂ ಒಂದೇ ಅನುಮಾನ.!
ಸ್ಯಾಂಡಲ್ ವುಡ್ ನಟ ಮತ್ತು ನಿರ್ಮಾಪಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಲು ಮುಖ್ಯ ಕಾರಣವೇನು ಎಂಬುದರ ಬಗ್ಗೆ ಯಾರು ಸ್ಪಷ್ಟನೆ ನೀಡಿಲ್ಲ.
ಸತತ ಎರಡೂವರೆ ದಿನ ಐಟಿ ಅಧಿಕಾರಿಗಳು ಯಶ್ ಮತ್ತು ವಿಜಯ್ ಕಿರಗಂದೂರ್ ಮನೆ ಸೇರಿದಂತೆ ಇತರೆ ಸ್ಟಾರ್ ನಟ ಮತ್ತು ನಿರ್ಮಾಪಕರ ಮನೆ ಮೇಲೆ ರೇಡ್ ಮಾಡಿದ್ದರು. ಬಹುತೇಕ ಎಲ್ಲರ ಮನೆ ಮೇಲೆ ಅಗಿದ್ದ ಐಟಿ ದಾಳಿ ಅಂತ್ಯವಾಗಿದೆ.
ಇದೀಗ, ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್ ಮನೆ ಮೇಲೆ ದಾಳಿ ಮಾಡಲು ಕೆಜಿಎಫ್ ಚಿತ್ರವೇ ಪ್ರಮುಖ ಕಾರಣವಿರಬಹುದು ಎಂಬ ಅನುಮಾನ ಮೂಡಿದೆ. ಯಾಕಂದ್ರೆ, ಸ್ವತಃ ಯಶ್ ಮತ್ತು ವಿಜಯ್ ಕಿರಗಂದೂರ್ ಕೂಡ ಒಂದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.. ಹಾಗಿದ್ರೆ, ಇವರಿಬ್ಬರು ಹೇಳಿದ್ದೇನು?

ವಿಜಯ್ ಕಿರಗಂದೂರ್ ವಿಚಾರವಾಗಿ ರೇಡ್ ಆಗಿದೆ
ಐಟಿ ದಾಳಿ ಬಳಿಕ ಮಾತನಾಡಿದ ಯಶ್ '' ವಿಜಯ್ ಕಿರಗಂದೂರ್ ಮತ್ತು ತಿಮ್ಮೆಗೌಡ ಅವರ ವಿಚಾರವಾಗಿ ರೇಡ್ ಆಗಿದೆ. ಅವರ ಜೊತೆ ನಾನು ಕೆಲಸ ಮಾಡಿದ್ದೀನಿ. ಹಾಗಾಗಿ, ನಮ್ಮ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ'' ಎಂದು ಯಶ್ ಹೇಳಿದ್ದಾರೆ. ಅಲ್ಲಿಗೆ ಯಶ್ ಮನೆ ಮೇಲೆ ದಾಳಿ ಆಗಲು ಕೆಜಿಎಫ್ ಚಿತ್ರವೇ ಕಾರಣ ಎನ್ನುವುದು ಪಕ್ಕಾ ಆಗಿದೆ.

ಕೆಜಿಎಫ್ ಬಗ್ಗೆ ಹೆಚ್ಚು ಕೇಳಿದ್ರು
ಇನ್ನು ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಮಾತನಾಡಿ ''ಮುಖ್ಯವಾಗಿ ಕೆಜಿಎಫ್ ಚಿತ್ರದ ಬಗ್ಗೆ ವಿಚಾರಣೆ ಮಾಡಿದ್ರು'' ಎಂದು ತಿಳಿಸಿದ್ದಾರೆ. ಅಲ್ಲಿಗೆ ಈ ಸಿನಿಮಾದ ಕಾರಣದಿಂದಲೇ ನಿರ್ಮಾಪಕ ಮತ್ತು ನಟನ ಮೇಲೆ ರೇಡ್ ಆಗಿದೆ ಎನ್ನಬಹುದು.

ಕೆಜಿಎಫ್ ದೊಡ್ಡ ಬಜೆಟ್ ಸಿನಿಮಾ
ಸದ್ಯದ ಮಟ್ಟಿಗೆ ಕೆಜಿಎಫ್ ಸಿನಿಮಾ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗಿದೆ. ಆದ್ರೆ, ನಿಖರವಾಗಿ ಈ ಚಿತ್ರದ ಬಜೆಟ್ ಎಷ್ಟು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಯಾಕಂದ್ರೆ, ಇದನ್ನ ನಿರ್ಮಾಪಕರು ಕೂಡ ಹೇಳಿಕೊಂಡಿಲ್ಲ. ಗಾಂಧಿನಗರದಲ್ಲಿ ಚರ್ಚೆಯಾಗಿದ್ದರ ಪ್ರಕಾರ, ಸುಮಾರು 70-80 ಕೋಟಿ ಎನ್ನಲಾಗಿತ್ತು. ಕನ್ನಡದಲ್ಲಿ ಇಷ್ಟು ದೊಡ್ಡ ಬಜೆಟ್ ಸುದ್ದಿ ಕೇಳಿ ಐಟಿ ಅಧಿಕಾರಿಗಳು ರೇಡ್ ಮಾಡಿರಬಹುದು.

ಕಲೆಕ್ಷನ್ ಕೂಡ ಹೆಚ್ಚಾಗಿದೆ
ಇನ್ನು ಕೆಜಿಎಫ್ ಸಿನಿಮಾದ ಕಲೆಕ್ಷನ್ ವಿಚಾರಕ್ಕೆ ಬಂದ್ರೆ, ಅತಿ ದೊಡ್ಡ ಗಳಿಕೆ ಕಂಡಿದೆ ಎಂಬ ಮಾಹಿತಿ ಇದೆ. ಈ ಗಳಿಕೆಯೂ ಎಲ್ಲೋ ಒಂದು ಕಡೆ ಐಟಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಯಿತಾ ಎಂಬ ಅನುಮಾನ ಕಾಡದೇ ಇರಲ್ಲ. ಬಟ್, ಈ ರೇಡ್ ಗೆ ಬಹಳ ದಿನಗಳಿಂದ ತಯಾರಿ ನಡೆಸಿದ್ದೇ ಆದ್ರೆ, ಈ ಗಳಿಕೆ ವಿಷ್ಯ ಕಾರಣವಾಗಿರಲ್ಲ. ಬಟ್, ಬಜೆಟ್ ಕಾರಣವಾಗಿರಬಹುದು.

ನಿರ್ಮಾಪಕರಿಂದ ನಟರ ಮೇಲೆ ರೇಡ್
ಹಾಗ್ನೋಡಿದ್ರೆ, ಕೋಟಿ ಕೋಟಿ ಬಂಡವಾಳ ಹಾಕಿದ ನಿರ್ಮಾಪಕರೇ ಐಟಿ ಅಧಿಕಾರಿಗಳ ಟಾರ್ಗೆಟ್ ಆಗಿದಂತಿದೆ. ಅವರಿಂದ ನಟರ ಮೇಲೂ ದಾಳಿ ಆಗಿರಬಹುದು. 'ದಿ ವಿಲನ್' ಸಿನಿಮಾ ನಿರ್ಮಾಣ ಮಾಡಿದ್ದ ಸಿಆರ್ ಮನೋಹರ್ ಮನೆ ಮೇಲೆ ರೇಡ್ ಆಗಿದೆ. ಈ ಚಿತ್ರದಲ್ಲಿ ನಟಿಸಿದ್ದ ಶಿವಣ್ಣ ಮತ್ತು ಸುದೀಪ್ ಮನೆ ಮೇಲೂ ದಾಳಿ ಆಗಿದೆ. 'ನಟಸಾರ್ವಭೌಮ' ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮೇಲೆ ದಾಳಿ ಆಗಿದೆ. ಆ ಚಿತ್ರದ ನಟ ಪುನೀತ್ ಮನೆ ಮೇಲೂ ರೇಡ್ ಆಗಿದೆ. ಹಾಗೆ, 'ಕೆಜಿಎಫ್' ನಿರ್ಮಾಪಕ ವಿಜಯ್ ಕಿರಗಂದೂರ್ ಮನೆ ಮೇಲೆ ರೇಡ್ ಆಗಿದ್ದಕ್ಕೆ ನಟ ಯಶ್ ಮನೆಯೂ ಟಾರ್ಗೆಟ್ ಆಗಿರಬಹುದು. ಬಟ್, ಇದಕ್ಕೆಲ್ಲಾ ಐಟಿ ಅಧಿಕಾರಿಗಳೇ ಸ್ಪಷ್ಟನೆ ನೀಡಬೇಕಿದೆ.


Click it and Unblock the Notifications











