»   » ಟೈಟ್ಲು ಬೇಕ ಚಿತ್ರದ ಟೈಟಲ್ ಹಿಂಗ್ಯಾಕೆ ಗೊತ್ತಾ?

ಟೈಟ್ಲು ಬೇಕ ಚಿತ್ರದ ಟೈಟಲ್ ಹಿಂಗ್ಯಾಕೆ ಗೊತ್ತಾ?

Posted By:
Subscribe to Filmibeat Kannada

ಇತ್ತೀಚಿನ ದಿನಗಳಲ್ಲಿ ಟೈಟಲ್ ಗಾಗಿ ಕಿತ್ತಾಟ-ಹೋರಾಟಗಳು ನಡೆಯುತ್ತಿರುವಾಗ ಇಲ್ಲೊಂದು ಡಿಫರೆಂಟ್ ಚಿತ್ರ 'ಟೈಟ್ಲು ಬೇಕ' ಅಂತ ಹೆಸರಿಟ್ಟುಕೊಂಡು ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಅಂದಹಾಗೆ ಈ ಚಿತ್ರದ ಟೈಟಲ್ಲೇ 'ಟೈಟ್ಲು ಬೇಕ' ಅಂತ ಯಾಕಿದೆ ಗೊತ್ತಾ. ನಿಮ್ಮ ಫಿಲ್ಮಿಬೀಟ್ ಕನ್ನಡ ನಿರ್ದೇಶಕ ಆನಂದ್ ಜಿ.ಕೆ ಅವರನ್ನು ವಿಚಾರಿಸಿದಾಗ ಅಸಲಿಗೆ ಈ ವಿಷಯ ಬಾಯಿಬಿಟ್ಟರು.

Reason behind Title of kannada movie 'Titlu beka'

ಈ ಚಿತ್ರಕ್ಕೆ ಟೈಟ್ಲು ಬೇಕ ಅಂತ ನಿರ್ದೇಶಕರಿಗೆ ಡೌಟ್ ಬಂದ ಕಾರಣ ಹಾಗೆ ಟೈಟಲ್ ಇಟ್ಟಿದ್ದಾರೆ ಅಲ್ಲದೇ ಸಿನಿಮಾ ನೋಡಿದ ಪ್ರೇಕ್ಷಕರು ಈ ಸಿನಿಮಾಗೆ ಟೈಟಲ್ ಕೊಟ್ಟರೆ ಚಂದ ಅನ್ನೋದು ಅವರ ಅಭಿಪ್ರಾಯ.[ಈ ವಾರ ತೆರೆಗೆ ಬರುತ್ತಿದೆ 'ಟೈಟ್ಲು ಬೇಕ']

ಹಾಗೆ ನೋಡಿದ್ರೆ ಇಡಿ ಸಿನಿಮಾ ನಿರ್ದೇಶಕನ ದೃಷ್ಟಿಯಿಂದ ಸಾಗುತ್ತದೆ. ಸಿನಿಮಾದಲ್ಲಿ ಓರ್ವ ಸಹಾಯಕ ನಿರ್ದೇಶಕ ಕನ್ನಡ ಚಿತ್ರರಂಗದಲ್ಲಿ ಪಡುವ ಕಷ್ಟವನ್ನು ಹಾಗೆ ತೆರೆ ಮೇಲೆ ತಂದಿದ್ದಾರೆ.

ಜೊತೆಗೆ ಸಿನಿಮಾದಲ್ಲಿ ಒಂದು ಲವ್ ಸ್ಟೋರಿ ಇದೆ, ಸೆಂಟಿಮೆಂಟ್ ಇದೆ, ಸಮಾಜಕ್ಕೆ ಉತ್ತಮ ಸಂದೇಶ ಕೂಡ ಇದೆ. ವಿಶೇಷ ಅಂದ್ರೆ ಈ ಇಡೀ ಸಿನಿಮಾದಲ್ಲಿ ಒಂದೇ ಒಂದು ಫೈಟ್ ಸೀನ್ ಕೂಡ ಇಲ್ಲ. ಕಂಪ್ಲೀಟ್ ಸಿನಿಮಾ ರಾ ಸ್ಟೈಲ್ ನಲ್ಲಿದೆ.

ಇಷ್ಟೆಲ್ಲಾ ಇರುವ ಟೈಟ್ಲು ಬೇಕ ಸಿನಿಮಾಕ್ಕೆ ಟೈಟಲ್ ಏನು ಕೋಡೋದು ಅಂತ ನೀವೇ ನಿರ್ಧರಿಸಿ. ಹಾ ಹೇಳೋದೇ ಮರೆತಿದ್ವಿ, ಈ ಚಿತ್ರದಲ್ಲಿ ನಾಯಕ ನಟನಾಗಿ ಆಯುಷ್ ಎನ್ನುವ ಯುವ ನಟ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ನಾಯಕಿಯಾಗಿ ನೇಹಾ ಪಾಟೀಲ್ ನಟಿಸಿದ್ದು, ಚೊಚ್ಚಲ ನಿರ್ದೇಶಕ ಆನಂದ್ ಜಿ.ಕೆ ಆಕ್ಷನ್-ಕಟ್ ಹೇಳಿದ್ದಾರೆ. ಪಕ್ಕಾ ಹೊಸಬರ ಚಿತ್ರ ಈ ವಾರ ತೆರೆ ಕಾಣುತ್ತಿದ್ದು, ನೋಡಿ ನೀವು ಶುಭ ಹಾರೈಸಿ.

English summary
Kannada Director Anand G.K explained behind the reason of Title of the Kannada movie 'Titlu beka'. The movie is releasing on this week, Kannada Actor Aayush, Actress Neha Patil in the lead role.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X