ಕನ್ನಡ ಓಕೆ.. ಇಂಗ್ಲಿಷ್ ಭಾಷೆ ಯಾಕೆ? ಯಶ್ 'ಟಾಕ್ಸಿಕ್' ದಂಡಯಾತ್ರೆಯ ಹಿಂದಿನ ಲೆಕ್ಕಾಚಾರವೇನು?

By ಫಿಲ್ಮಿಬೀಟ್ ಡೆಸ್ಕ್

'ಕೆಜಿಎಫ್ 2' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಬ್ಬರಿಸಿದ ಬಳಿಕ ರಾಕಿ ಭಾಯ್ ಮುಂದಿನ ಹೆಜ್ಜೆ ಏನು? ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. 'ಟಾಕ್ಸಿಕ್' ಅನೌನ್ಸ್ ಮಾಡಿದಾಗಲೂ ಯಶ್ ಮುಂದಿನ ಆಲೋಚನೆಗಳ ಬಗ್ಗೆ ಚಿಕ್ಕದೊಂದು ಸುಳಿವು ಕೂಡ ಇರಲಿಲ್ಲ. ಇದೂ ಒಂದು ಪ್ಯಾನ್ ಇಂಡಿಯಾ ಸಿನಿಮಾ ಆಗಬಹುದು ಅಂತ ಸಿನಿಮಾ ಮಂದಿ ನಿರೀಕ್ಷೆ ಮಾಡಿದ್ದರು. ಆದರೆ, ರಾಕಿಂಗ್ ಸ್ಟಾರ್ ನಾವು ಅಂದುಕೊಂಡಿದ್ದಕ್ಕಿಂತ ಒಂದು ಹೆಜ್ಜೆ ಮುಂದೆನೇ ಇಟ್ಟಿರೋದು ಈಗ ಅರಿವಿಗೆ ಬಂದಿದೆ.

'ಟಾಕ್ಸಿಕ್' ಸಿನಿಮಾ ಏಕಕಾಲಕ್ಕೆ ಎರಡು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ. ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಯಲ್ಲೂ ಚಿತ್ರೀಕರಣ ಆಗುತ್ತಿದೆ. ಇತ್ತೀಚೆಗೆ ಈ ಸುದ್ದಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಭಾರತದ ಸಿನಿಮಾವೊಂದು ಇಂಗ್ಲಿಪ್‌ ಹಾಗೂ ಲೋಕಲ್ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣ ಆಗುತ್ತಿರುವ ಮೊದಲ ಸಿನಿಮಾ ಅಂತಲೂ ವರದಿಯಾಗಿದೆ. ಆದರೆ, ಎರಡು ಭಾಷೆಯಲ್ಲಿ ಏಕಕಾಲಕ್ಕೆ ಶೂಟಿಂಗ್ ಯಾಕೆ? ಉಳಿದ ಭಾಷೆಗಳಂತೆ ಡಬ್ ಮಾಡಬಹುದಿತ್ತಲ್ಲ.

Reason behind Yash and KVN Productions filming the Toxic movie in both Kannada and English

ಯಶ್ ಸಿನಿಮಾ 'ಟಾಕ್ಸಿಕ್' ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಏಕಕಾಲಕ್ಕೆ ಶೂಟಿಂಗ್ ಆಗುತ್ತಿದೆ. ಹಾಗೇ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆ ಸೇರಿದಂತೆ ಬೇರೆ ಬೇರೆ ಅಂತರಾಷ್ಟ್ರೀಯ ಭಾಷೆಗಳಿಗೆ ಡಬ್ ಆಗುತ್ತಿದೆ ಅಂತ ವರದಿಗಳಾಗಿವೆ. 'ಟಾಕ್ಸಿಕ್ ಅನ್ನು ಯಶ್ ಗ್ಲೋಬಲ್‌ ಲೆವೆಲ್‌ಗೆ ತೆಗೆದುಕೊಂಡು ಹೋಗಬೇಕು ಅನ್ನೋ ಗುರಿಯೇನೋ ಸರಿ. ಆದರೆ, ಈ ದಿಟ್ಟ ಹೆಜ್ಜೆಯ ಹಿಂದಿನ ಲೆಕ್ಕಾಚಾರವೇನು? ತಿಳಿಯುವುದಕ್ಕೆ ಮುಂದೆ ಓದಿ.

ರಾಕಿಂಗ್ ಸ್ಟಾರ್ ಯಶ್ ಲೋಕಲ್ ಕಂಟೆಂಟ್ ಅನ್ನು ಗ್ಲೋಬಲ್ ಲೆವೆಲ್‌ಗೆ ರೀಚ್ ಮಾಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದರೆ, ಎಲ್ಲಾ ಸಿನಿಮಾಗಳು ಆ ಲೆವೆಲ್‌ಗೆ ತಲುಪುವುದೇ ಅನುಮಾನ. ಆದರೆ, ಇತ್ತೀಚೆಗೆ ರಾಜಮೌಳಿಯ RRR ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗಿ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆದ್ಮೇಲೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಅಮೆರಿಕದ ಹಲವು ಭಾಗಗಳಲ್ಲಿರುವ ಜನರು ಮೆಚ್ಚಿಕೊಂಡಾಡಿದರು. ಇದು ಹೇಗಾಯ್ತು? ಅಂತ ನೋಡುವುಕ್ಕೆ ಹೋದರೆ ಓಟಿಟಿ ಸಾಕ್ಷಿಯಾಗಿ ನಿಲ್ಲುತ್ತೆ.

ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಜನರು ಅಂಟಿಕೊಂಡಿದ್ದಾರೆ. ಸಿನಿಮಾ, ವೆಬ್ ಸೀರಿಸ್, ನ್ಯೂಸ್ ಏನೇ ಇದ್ದರೂ ಓಟಿಟಿಯ ಮೊರೆ ಹೋಗುತ್ತಾರೆ. ನೆಟ್‌ಫ್ಲಿಕ್ಸ್, ಪ್ರೈಮ್ ವೀಡಿಯೋಗೆ ಡಿಪೆಂಡ್ ಆಗಿದ್ದಾರೆ. ಹೀಗಾಗಿ ಬೇರೆ ಭಾಷೆಯ ಸಿನಿಮಾಗಳನ್ನು ಇದೇ ಓಟಿಟಿ ವೇದಿಕೆಗಳಲ್ಲಿ ನೋಡಿ ಖುಷಿ ಪಡುವವರೂ ಇದ್ದಾರೆ. ಈ ವೇದಿಕೆಯನ್ನು ಎಫೆಕ್ಟಿವ್ ಆಗಿ ಬಳಸಿಕೊಳ್ಳಲು ರಾಕಿ ಭಾಯ್ ಮಾಸ್ಟರ್ ಪ್ಲಾನ್ ಮಾಡಿರಬಹುದು ಅಂತ ಸಿನಿಮ ಮಂದಿಯ ಲೆಕ್ಕಾಚಾರ. ಈ ಕಾರಣಕ್ಕಾಗಿಯೇ ಇಂಗ್ಲಿಷ್ ಭಾಷೆಯಲ್ಲಿಯೂ ಸಿನಿಮಾ ನಿರ್ಮಾಣ ಆಗುತ್ತಿದೆ ಅಂತ ಮಾತಾಡಿಕೊಳ್ಳುತ್ತಿದ್ದಾರೆ.

Reason behind Yash and KVN Productions filming the Toxic movie in both Kannada and English

ಮತ್ತೊಂದು ವರ್ಗ ಬೇರೆನೇ ಹೇಳುತ್ತಿದೆ. ಯಶ್ ಕಾನ್ಸೆಪ್ಟ್‌ ಬೇರೆನೇ ಇದೆ. ಲೋಕಲ್ ರೂಟ್‌ಗಳನ್ನು ಗ್ಲೋಬಲ್ ಲೆವೆಲ್‌ಗೆ ತೆಗೆದುಕೊಂಡು ಹೋಗಬೇಕು ಅನ್ನೋದು ಯಶ್ ಆಸೆ. ಅದಕ್ಕೆ ಕೆವಿಎನ್‌ ಸಂಸ್ಥೆಯೊಂದಿಗೆ ಕೈ ಜೋಡಿಸಿ ಎರಡು ಭಾಷೆಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ ಅಂತ ಹೇಳಲಾಗುತ್ತಿದೆ. ಇದು 'ಟಾಕ್ಸಿಕ್' ಸಿನಿಮಾ ಶುರುವಾದ ಮೇಲೆ ಹುಟ್ಟಿಕೊಂಡ ಐಡಿಯಾ ಅಲ್ಲ. ಅದಕ್ಕಾಗಿ ಯಶ್ ಮೊದಲೇ ತಯಾರಿ ನಡೆಸಿದ್ದರು ಅಂತಾನೂ ಹೇಳುತ್ತಿದ್ದಾರೆ.

'ಟಾಕ್ಸಿಕ್' ಸಿನಿಮಾ ಶುರುವಾಗುವುದಕ್ಕೂ ಮುನ್ನ ಯಶ್ ವಿದೇಶಕ್ಕೆ ತೆರಳಿದ್ದರು. ಅಲ್ಲಿನ ಹಾಲಿವುಡ್ ಸಾಹಸ ನಿರ್ದೇಶಕರಿಂದ ತರಬೇತಿಯನ್ನು ಪಡೆದಿದ್ದರು. ಅದರ ಕೆಲವು ಫೋಟೊಗಳು ಹಾಗೂ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲೂ ಹಂಚಿಕೊಂಡಿದ್ದರು. ಸಿನಿಮಾ ಶುರುವಾದ ಬಳಿಕ ಅಲ್ಲಿಂದಲೇ ಸಾಹಸ ನಿರ್ದೇಶಕರನ್ನೂ ಕರೆತಂದಿದ್ದರು. ಇದೆಲ್ಲದರ ಹಿಂದೆ ದೊಡ್ಡ ಲೆಕ್ಕಾಚಾರವೇ ಇದೆ. ಗೋಬಲ್‌ ಬಾಕ್ಸಾಫೀಸ್‌ನಲ್ಲಿ 'ಟಾಕ್ಸಿಕ್' ದಾಖಲೆ ಬರೆಯುತ್ತೆ ಅನ್ನೋದು ಸಿನಿಮಾ ಮಂದಿಯ ನಂಬಿಕೆ. ಇಂಗ್ಲಿಷ್ ಭಾಷೆಯಲ್ಲೂ ಸಿನಿಮಾ ಶೂಟ್ ಮಾಡುತ್ತಿರುವುದರ ಅಸಲಿಗೆ ರಿಲೀಸ್ ವೇಳೆಗೆ ಬಯಲಾಗಬಹುದೇನೋ?

More from Filmibeat

English summary
Reason behind Yash and KVN Productions filming the Toxic movie in both Kannada and English?
Read more about: yash toxic filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X