twitter
    For Quick Alerts
    ALLOW NOTIFICATIONS  
    For Daily Alerts

    ಹತ್ತೇ ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ರೆಬಲ್ ಸ್ಟಾರ್

    By Rajendra
    |

    ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಾಗಿ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಾಲಾಗಿ ಚಿಕಿತ್ಸೆ ಪಡೆಯುತ್ತಿರುವ ನಟ, ವಸತಿ ಸಚಿವ ಅಂಬರೀಶ್ ಅವರ ಆರೋಗ್ಯ ಗಣನೀಯ ಪ್ರಮಾಣದಲ್ಲಿ ಸುಧಾರಿಸಿದೆ. ಇನ್ನು ಹತ್ತೇ ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳುವ ಸಾಧ್ಯತೆಗಳಿವೆ.

    ಈಗಾಗಲೆ ಅವರಿಗೆ ಹಾಕಲಾಗಿದ್ದ ವೆಂಟಿಲೇಟರನ್ನು ತೆಗೆಯಲಾಗಿದ್ದು ವಿಶೇಷ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ. ಮೌಂಟ್ ಎಲಿಜತ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಇದುವರೆಗೂ ದ್ರವಾಹಾರ ಸೇವಿಸುತ್ತಿದ್ದ ಅವರು ಈಗ ಲಘು ಉಪಹಾರ ಸೇವಿಸುವಂತಾಗಿದೆ. [ಅಂಬರೀಶ್ ಆರೋಗ್ಯದ ಬಗ್ಗೆ ಮುಚ್ಚಿಟ್ಟ ಸತ್ಯಗಳು]

    ಶ್ವಾಸಕೋಶದ ಸೋಂಕು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು ಕೆಲವು ಉಸಿರಾಟದ ವ್ಯಾಯಾಮಗಳನ್ನು ಮಾಡಿಸಲಾಗುತ್ತಿದೆ. ದಿನೇ ದಿನೇ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬರುತ್ತಿದ್ದು ಇನ್ನು ಹತ್ತು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ವಿಕ್ರಂ ಆಸ್ಪತ್ರೆ ಅಧಿಕಾರಿ ಅಬ್ದುಲ್ ಹಫೀಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. [ಸಿಂಗಪುರದಲ್ಲೂ ಸಿಗುತ್ತದೆ ಎಂಟಿಆರ್]

    ಅವರ ಬರುವಿಕೆಗಾಗಿ ಅಪಾರ ಅಭಿಮಾನಿ ಬಳಗ ಕಾತುರದಿಂದ ನಿರೀಕ್ಷಿಸುತ್ತಿದೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಅವರ ಅಭಿಮಾನಿಗಳು ಹೋಮ ಹವನ ವಿಶೇಷ ಪೂಜೆಗಳನ್ನು ಮಾಡಿ ತಮ್ಮ ನೆಚ್ಚಿನ ನಾಯಕ ಬೇಗ ಗುಣಮುಖರಾಗಲಿ ಎಂದು ಬಯಸಿದ್ದರು. (ಏಜೆನ್ಸೀಸ್)

    English summary
    Rebel Star Ambareesh is now stable and doing well in Mount Elizabeth Hospital in Singapore. Doctors says that, Within 10 days Ambareesh will be discharged from hospital, at present he is taking light food.
    Tuesday, March 11, 2014, 16:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X