Don't Miss!
- News Namma Metro Service Extension: ಲೋಕಸಭಾ ಚುನಾವಣೆಗಾಗಿ ಮೆಟ್ರೋ ಸೇವೆ ವಿಸ್ತರಣೆ, ಗಮನಿಸಿ
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಮರ್' ಸಿನಿಮಾದ ಒಂದು ಟಿಕೆಟ್ ಗೆ ಒಂದು ಲಕ್ಷ ಕೊಟ್ಟ ಅಂಬಿ ಅಭಿಮಾನಿ
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ 'ಅಮರ್' ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಅಭಿಷೇಕ್ ಅದ್ಧೂರಿ ಸ್ವಾಗತಕ್ಕೆ ಸ್ಯಾಂಡಲ್ ವುಡ್ ಸಜ್ಜಾಗಿದೆ. ಇದೇ ತಿಂಗಳ ಕೊನೆಯಲ್ಲಿ ಮೇ 31ಕ್ಕೆ 'ಅಮರ್' ಸಿನಿಮಾ ರಾಜ್ಯದಾದ್ಯಂತ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ.
ಈಗಾಗಲೆ 'ಅಮರ್' ಚಿತ್ರದ ಮೇಲಿನ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಅಂಬಿ ಪುತ್ರನ ಚೊಚ್ಚಲ ಚಿತ್ರ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸಮಯದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅಪ್ಪಟ ಅಭಿಮಾನಿಯೊಬ್ಬರು 'ಅಮರ್' ಸಿನಿಮಾದ ಒಂದು ಟಿಕೆಟ್ ಗೆ ಒಂದು ಲಕ್ಷ ಕೊಟ್ಟು ಕೊಂಡುಕೊಂಡಿದ್ದಾರೆ.
ದಾವಣಗೆರೆ ಮೂಲದವರಾದ ಮಂಜುನಾಥ್, ಅಂಬರೀಶ್ ಅವರ ದೊಡ್ಡ ಅಭಿಮಾನಿ. ಹಾಗಾಗಿ 'ಅಮರ್' ಸಿನಿಮಾ ಫಸ್ಟ್ ಡೇ ಶೋ ನೋಡಲು ಬರೋಬ್ಬರಿ ಒಂದು ಲಕ್ಷ ನೀಡಿ ಟಿಕೆಟ್ ಕೊಂಡುಕೊಂಡಿದ್ದಾರೆ. ಒಂದು ಲಕ್ಷದ ಚೆಕ್ ಅನ್ನು ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಗೆ ನೀಡಿದ್ದಾರೆ.
ಅಮರ್ ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಚಿತ್ರದಲ್ಲಿ ಅಭಿಷೇಕ್ ಗೆ ನಾಯಕಿಯಾಗಿ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ 'ಅಮರ್' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಮತ್ತು ನಟ ನಿರೂಪ್ ಭಂಡಾರಿ ಒಂದು ಹಾಡಿನಲ್ಲಿ ಮಿಂಚಿದ್ದಾರೆ.