»   » ಹದಿನೇಳು ಕೆ.ಜಿ ತೂಕ ಇಳಿಸಿಕೊಂಡ ಅಂಬರೀಶ್

ಹದಿನೇಳು ಕೆ.ಜಿ ತೂಕ ಇಳಿಸಿಕೊಂಡ ಅಂಬರೀಶ್

Posted By:
Subscribe to Filmibeat Kannada

ಕಳೆದ ಐವತ್ತು ದಿನಗಳಕಾಲ ತಾಯ್ನಾಡಿನಿಂದ ದೂರವಾಗಿದ್ದ ರೆಬೆಲ್ ಸ್ಟಾರ್ ಅಂಬಿ ತವರಿಗೆ ವಾಪಾಸಾಗಿರುವುದು ಗೊತ್ತೇ ಇದೆ. ಮತ್ತೆ ರಾಜಕೀಯದ ರಂಗು ಗರಿಗೆದರಿದೆ. ಅದರಲ್ಲೂ ಮಂಡ್ಯದ ಹೆಣ್ಣು ರಮ್ಯಾರಿಗೆ ಆನೆ ಬಲ ಬಂದಂತಾಗಿದೆ. ಅಂಬರೀಶ್ ಒಂಥರಾ ಆನೆ ಇದ್ದ ಹಾಗೆ ಅನ್ನೋದು ಪದೇ ಪದೇ ಪ್ರೂವಾಗಿದೆ. ಸ್ಯಾಂಡಲ್ವುಡ್ನಲ್ಲಿ ಹುಟ್ಟಿಕೊಂಡ ಅದೆಷ್ಟೋ ವಿವಾದಗಳನ್ನ ಅಂಬಿ ಒಂದೇ ಮಾತಲ್ಲಿ ನಿಲ್ಲಿಸಿದ್ದು ಇದಕ್ಕೆ ಸ್ಪಷ್ಟ ಉದಾಹರಣೆ.

ಸ್ಯಾಂಡಲ್ವುಡ್ ಸಿನಿಮಾದಲ್ಲಾಗ್ಲಿ ರಾಜ್ಯ ರಾಜಕೀಯದಲ್ಲಾಗ್ಲಿ ಅಂಬಿ ಹೇಳಿದ್ದೇ ಅಂತಿಮ, ಅಂಬರೀಶ್ ನಡೆದಿದ್ದೇ ಹಾದಿ. ಅಂಬಿ ಮೇಲ್ನೋಟಕ್ಕೆ ಒಂಥರಾ ಒರಟಾದ ವ್ಯಕ್ತಿತ್ವ ಅಂತ ಅನ್ನಿಸಿದ್ರೂ ಹೂವಿನಂತಹಾ ಮನಸ್ಸಿನ ಮನುಷ್ಯ ಅನ್ನೋದು ರಾಜ್ಯಕ್ಕೇ ಗೊತ್ತು. ಅದ್ರೆ ಅಂಬಿ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ, ರಾಜ್ಯ ಕಾಂಗ್ರೆಸ್ ಗೆ ಆನೆ ಬಲವೂ ಬಂದಿದೆ.

ಮಂಡ್ಯ ಎಂ ಪಿ ರಮ್ಯಾ ಫುಲ್ ಖುಷ್ ಆಗಿದ್ದಾರೆ. ಅಂಬಿ ಮಂಡ್ಯದಲ್ಲಿ ಒಂದು ಸುತ್ತು ಹೊಡೆದು ಕಾಂಗ್ರೆಸ್ ಗೆಲ್ಲಿಸುವುದು ತಮ್ಮ ಕರ್ತವ್ಯ ಎಂದಿದ್ದಾರೆ. ಆದರೆ ಬೆಂಗಳೂರಿಗೆ ಬಂದ ಅಂಬಿ 52 ದಿನಗಳ ನಂತರ ಮಾತನಾಡಿದ ಇಂಟರೆಸ್ಟಿಂಗ್ ವಿಷಯಗಳೂ ಇಲ್ಲಿವೆ.

ನಾನು ಕಾಳಜಿ ತಗೊಳ್ದೇ ಇದ್ದದ್ದರಿಂದ ಹೀಗಾಯ್ತು

ನನ್ನ ಆರೋಗ್ಯದ ಬಗ್ಗೆ ನಾನೇ ಕಾಳಜಿಯನ್ನ ತೊಗೋಬೇಕಿತ್ತು. ನಾನೇ ಕೇರ್ ಲೆಸ್ ಮಾಡಿದೆ ಅಂತ ಅಂಬಿ ಒಪ್ಪಿಕೊಂಡಿದ್ದಾರೆ.

ಸಿಗರೇಟು ಸೇದೋದಿಲ್ಲ ಮಂಡ್ಯದ ಗಂಡು

ರೆಬೆಲ್ ಸ್ಟಾರ್ ಅಂಬಿ ಅಭಿಮಾನಿಗಳಿಗೆ ಸಂತಸದ ಸುದ್ದಿ ಅಂದ್ರೆ ಇನ್ನು ಅಂಬಿ ಸಿಗರೇಟು ಸೇದೋದಿಲ್ಲ. ಇಲ್ಲೀವರೆಗೂ ಯಾರು ಹೇಳಿದ್ರೂ ಸಿಗರೇಟು ತ್ಯಜಿಸದಿದ್ದ ಅಂಬಿ ಈಗ ಸಿಗರೇಟಿನಿಂದ ದೂರವಿದ್ದಾರೆ.

ಆರೋಗ್ಯ ಹಾಳಾಗಿದ್ದು ಒಳ್ಳೆಯದಾಯ್ತು

ಅಂಬಿ ನನ್ನ ಆರೋಗ್ಯ ಹಾಳಾಗಿದ್ದು ಒಳ್ಳೆಯದಾಯ್ತು ಅಂದಿದ್ದಾರೆ. ಈ ರೀತಿ ಆದದ್ದರಿಂದಾನೇ ಜನರು ನನ್ನನ್ನ ಎಷ್ಟು ಪ್ರೀತಿಸ್ತಾರೆ ಅಂತ ಗೊತ್ತಾಯ್ತು ಅಂದಿದ್ದಾರೆ ಅಂಬಿ.

ಮಗುವಿನ ಹಾಗೆ ನೋಡಿಕೊಂಡಿದ್ದಾರೆ ಸುಮಲತಾ

ರೆಬೆಲ್ ಸ್ಟಾರ್ ಅಂಬಿ ನಂಗೆ ಮಾತ್ರ ಟ್ರಬಲ್ ಅನ್ನೋ ಪತ್ನಿ ಸುಮಲತಾ ಅಂಬಿಯನ್ನ 52 ದಿನ ಮಗುವಿನ ಹಾಗೆ ನೋಡಿಕೊಂಡಿದ್ರಂತೆ. ಸ್ವತಃ ಅಂಬೀನೇ ಇದನ್ನ ಹೇಳಿದ್ದಾರೆ. ಆರು ವಾರಗಳ ಕಾಲ ಸುಮಲತಾ ಮುಖದಲ್ಲಿದ್ದ ಆತಂಕ ಮಾಯವಾಗಿ ಸಂತಸ ಮೂಡಿದೆ..

ಅಂಬಿಗೆ ವೈದ್ಯರು ಏನು ಹೇಳಿದ್ದಾರೆ

ಲೈಫ್ ಸ್ಟೈಲ್ ಸ್ವಲ್ಪ ಬದಲಾಯಿಸಿಕೊಳ್ಳಬೇಕು ಅಂತ ವೈದ್ಯರು ಹೇಳಿದ್ದಾರೆ. ಅಂಬಿ ಕೂಡ ಬದಲಾಗೋ ಮನಸ್ಸು ಮಾಡಿದ್ದಾರೆ, ಆದ್ರೆ ಮತ್ತೆ ರಾಜಕೀಯ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ವೈದ್ಯರು ಮಾತ್ರ ರೆಸ್ಟ್ ತೆಗೊಂಡ್ರೆ ಒಳ್ಳೇದು ಅಂತಿದ್ದಾರೆ.

ಅಂಬಿ ಇದೊಂದು ಮಾತನ್ನ ಕೇಳಲೇಬೇಕು

ಅಂಬರೀಷ್ ಲೈಫ್ ಸ್ಟೈಲ್ ಚೇಂಜ್ ಮಾಡಿಕೊಳ್ತಿನಿ ಅಂತ ಮಾಧ್ಯಮದ ಮುಂದೆ ಹೇಳಿದ್ರೂ ಕೂಡ ಅಲ್ಲೂ ಒಂದು ತಮಾಷೆ ಇತ್ತು. ನಾನು ಡಾಕ್ಟರ್ ಹೇಳಿದ ಹಾಗೆ ಅಥ್ವವಾ ಸುಮಲತಾ ಹೇಳಿದ ಹಾಗೆ ಕೇಳ್ತೀನಿ ಅಂತ ಒಪ್ಪಿಕೊಳ್ಳೋಕೆ ತಯಾರಿಲ್ಲ. ಆದ್ರೆ ಇವ್ರ ಮಾತನ್ನ ಅಂಬಿ ಕೇಳಲೇಬೇಕು. ಆದ್ರೆ ಅಂಬಿ ಬಂದ ದಿನದಿಂದ್ಲೇ ಬ್ಯುಸಿಯಾಗಿದ್ದಾರೆ.

ರಾಜಕೀಯದ ವಿಷಯದಲ್ಲಿ ಕಂಟ್ರೋಲ್ ಮಾಡಲ್ಲ

ಸುಮಲತಾ ಅಂಬರೀಶ್ ರನ್ನ ಏನೇ ಕಂಟ್ರೋಲ್ ಮಾಡಿದ್ರೂ ರಾಜಕೀಯದಲ್ಲಿ ಕಂಟ್ರೋಲ್ ಮಾಡಲ್ಲ ಅಂತ ಹೇಳಿದ್ದಾರೆ ಸುಮಲತಾ. ಇನ್ನು ಅಂಬಿ ರಾಜಕೀಯದಲ್ಲಿ ಎರ್ರಾಬಿರ್ರಿ ಬಿಜಿಯಾದ್ರೆ ಯಾರ್ ಕಂಟ್ರೋಲ್ ಮಾಡೋದು. ಯಾಕಂದ್ರೆ ಅಂಬಿ ಮೊದ್ಲೇ ಜಾಲಿ ಜಾಲಿ ಮನುಷ್ಯ.

17 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ ಅದನ್ನೇ ಕಾಪಾಡಿಕೊಳ್ಳಲಿ

ಅಂಬಿ 17 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಈಗ ಅಂಬಿ ಸ್ವಲ್ಪ ಫ್ರೀಯಾಗಿ ತಿರುಗಾಡ್ತಾರೆ. ಗಾಲ್ಫ್ ಕೂಡ ಆಡ್ತಾರೆ. ಮುಂದೆ ಕೇರ್ ಲೆಸ್ಸಾಗಿ ತೂಕ ಹೆಚ್ಚಿಸಿಕೊಂಡ್ರೆ ಮತ್ತೆ ಕಷ್ಟ ಪಡ್ಬೇಕಾಗುತ್ತೆ. ಕಲಿಯುಗ ಕರ್ಣ ಮತ್ತೆ ರೆಬೆಲ್ ಆಗಿ ಬೌನ್ಸ್ ಬ್ಯಾಕ್ ಮಾಡಿದ್ದಾರೆ. ಅಂಬಿ ಸದಾ ಖುಷಿ ಖುಷಿಯಾಗಿರ್ಲಿ, ನೂರ್ಕಾಲ ಬಾಳಲಿ.

English summary
Rebel Star and Housing Minister M H Ambareesh had lost 17 kilogram weight after got treatment in singapore. He has reclaimed from his health problem. Now Ambi is busy in election campaigning. Here is interesting facts about Ambareesh after returning from Singapore.
Please Wait while comments are loading...