ಕಲಾವಿದರ ಸಂಘದಲ್ಲೇ ಅಂಬರೀಶ್ ಬಿರುದು ತಪ್ಪಾಗಿದೆ
ನಟ ಅಂಬರೀಶ್ ಕನ್ನಡ ಚಿತ್ರರಂಗದ ದಿಗ್ಗಜ ನಟ. ಅವರ ಸಿನಿಮಾ ಸಾಧನೆಯ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಇಂತಹ ಮಹಾನ್ ನಟ ಮಾಡದ ಮಹತ್ತರ ಕೆಲಸಗಳಲ್ಲಿ ಒಂದು ಕಲಾವಿದರ ಸಂಘದ ಕಚೇರಿ ನಿರ್ಮಾಣ ಮಾಡಿಸಿದ್ದು.
ಕನ್ನಡ ಚಿತ್ರರಂಗದ ಕಲಾವಿದರಿಗೆ ಒಂದು ಸೂರು ಬೇಕು ಎಂಬ ಕನಸು ಹೊಂದಿದ್ದು ರಾಜ್ ಕುಮಾರ್. ಅಣ್ಣಾವ್ರ ಆ ಕನಸನ್ನು ನನಸು ಮಾಡಿದ್ದು ಅಂಬರೀಶ್. ಅಂಬರೀಶ್ ಅವರ ಶ್ರಮದ ಫಲವಾಗಿ ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕರ್ನಾಟಕ ಕಲಾವಿದರ ಸಂಘದ ಅದ್ಭುತ ಕಚೇರಿ ನಿರ್ಮಾಣವಾಗಿದೆ.

ಆದರೆ, ವಿಪರ್ಯಾಸ ಎಂದರೆ, ಇದೇ ಕಚೇರಿಯ ಮುಂಭಾಗ ಇರುವ ನಾಮ ಫಲಕದಲ್ಲಿಯೇ ಅಂಬರೀಶ್ ಬಿರುದು ತಪ್ಪಾಗಿದೆ. 'ರೆಬಲ್' ಸ್ಟಾರ್ ಅಂಬರೀಶ್ ಎಂದು ಬರೆಯುವ ಬದಲು 'ರೇಬಲ್' ಸ್ಟಾರ್ ಅಂಬರೀಶ್ ಎಂದು ಬರೆಯಲಾಗಿದೆ.

ಹಾಗಾಗಿ ಆದಷ್ಟು ಬೇಗ ಈ ನಾಮ ಫಲಕದ ಮೇಲಿರುವ ಹೆಸರನ್ನು ಸರಿ ಮಾಡಿ ಎಂದು ಈ ಲೇಖನದ ಮೂಲಕ ಕಲಾವಿದ ಸಂಘದ ಕಛೇರಿಯ ನಿರ್ವಾಹಕರಿಗೆ ಮನವಿ ಮಾಡುತ್ತಿದ್ದೇವೆ.
English summary
Rebel Star Ambareesh name has been miss spelled in name plate of Kalavidara Sangha, Chamrajpet, Bengaluru.


Click it and Unblock the Notifications