For Quick Alerts
  ALLOW NOTIFICATIONS  
  For Daily Alerts

  ಚುನಾವಣೆಗೆ ಗುಡ್ ಬೈ ಹೇಳಿದ ಅಂಬಿಯ ಹೊಸ ಲೈಫ್ ಸ್ಟೈಲ್ ನೋಡಿ

  By Bharath Kumar
  |
  ಅಂಬಿ ಪಾಲಿಟಿಕ್ಸ್ ಗೆ ಬೈ ಹೊಸ ಲೈಫ್ ಸ್ಟೈಲ್ ಗೆ ಹಾಯ್ | Filmibeat Kannada

  ಕರ್ನಾಟಕ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಆದ್ರೆ, ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ಮಾತ್ರ ಈ ಬಾರಿಯ ಅಖಾಡದಿಂದ ಹಿಂದೆ ಸರಿದಿದ್ದಾರೆ. ಅನಾರೋಗ್ಯ ಕಾರಣ ನೀಡಿರುವ ನಟ ಅಂಬರೀಶ್ ಎಲೆಕ್ಷನ್ ಕೆಲಸಗಳಿಂದ ದೂರ ಉಳಿದಿದ್ದಾರೆ.

  ಹಾಗಂತ 'ಮಂಡ್ಯದ ಗಂಡು' ಸುಮ್ಮನೆ ಮನೆಯಲ್ಲಿ ಕೂತು ರಾಜ್ಯದಲ್ಲಿ ಏನಾಗುತ್ತಿದೆ ಎಂದು ಟಿವಿ ನೋಡುತ್ತಾ ಕೂತಿಲ್ಲ. ಎಲೆಕ್ಷನ್ ಅಖಾಡದಿಂದ ರಿಲೀಫ್ ಪಡೆದುಕೊಂಡು ಲೈಫ್ ಎಂಜಾಯ್ ಮಾಡ್ತಿದ್ದಾರೆ.

  ಹೌದು, ದಿನಕ್ಕೊಂದು ಕಾರ್ಯಕ್ರಮ ಎನ್ನುತ್ತಾ, ಇವತ್ತು ಇಲ್ಲಿ, ನಾಳೆ ಇನ್ನೊಂದು ಕಡೆ ಇರ್ತಾರೆ. ಯಾರ್ ಯಾರಿಗೆ ಬೇಕಾದ್ರೂ ವೋಟ್ ಹಾಕಲಿ ಅಂತ ತಮ್ಮದೇ ಸ್ಟೈಲ್ ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಹಾಗಿದ್ರೆ, ಅಂಬಿ ಈಗ ಏನ್ ಮಾಡ್ತಿದ್ದಾರೆ.? ಅಂಬರೀಶ್ ಅವರ ಲೇಟೆಸ್ಟ್ ಲೈಫ್ ಹೇಗಿದೆ.? ಮುಂದೆ ಓದಿ....

  ವಿಷ್ಣುವರ್ಧನ್ ಮನೆಗೆ ಭೇಟಿ

  ವಿಷ್ಣುವರ್ಧನ್ ಮನೆಗೆ ಭೇಟಿ

  ಅಂಬರೀಶ್ ಅವರ ಬಹುಕಾಲದ ಗೆಳೆಯ ವಿಷ್ಣುವರ್ಧನ್ ಅವರ ಮನೆಗೆ ಇತ್ತೀಚಿಗಷ್ಟೆ ಅಂಬಿ ಹೋಗಿದ್ದರು. ಜಯನಗರದಲ್ಲೇ ಹೊಸ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಬಿಡುವು ಮಾಡಿಕೊಂಡು ವಿಷ್ಣು ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಭಾರತಿ ವಿಷ್ಣುವರ್ಧನ್ ಅವರ ಯೋಗಕ್ಷೇಮ ವಿಚಾರಿಸಿದರು. ವಿಷ್ಣುವರ್ಧನ್ ಅವರ ಮನೆಗೆ ಅಂಬಿ ಹೋಗಿ ತುಂಬ ದಿನಗಳು ಆಗಿತ್ತು ಎನ್ನಲಾಗಿದೆ.

  ಪತ್ನಿ ಜೊತೆ ಶೂಟಿಂಗ್ ಗೆ ಹಾಜರ್

  ಪತ್ನಿ ಜೊತೆ ಶೂಟಿಂಗ್ ಗೆ ಹಾಜರ್

  ಇನ್ನು ಸುಮಲತಾ ಅಂಬರೀಶ್ ಅಭಿನಯದ 'ತಾಯಿಗೆ ತಕ್ಕ ಮಗ' ಚಿತ್ರದ ಸೆಟ್ ಗೆ ಅಂಬರೀಶ್ ಭೇಟಿ ನೀಡಿದ್ದಾರೆ. ಅಜಯ್ ರಾವ್ ನಾಯಕರಾಗಿರುವ ಈ ಚಿತ್ರದಲ್ಲಿ ಸುಮಲತಾ ತಾಯಿ ಪಾತ್ರ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಪತ್ನಿಯ ಜೊತೆ ಅಂಬಿ ಶೂಟಿಂಗ್ ಸೆಟ್ ಗೆ ಹೋಗಿ ಎಂಜಾಯ್ ಮಾಡಿದ್ದಾರೆ.

  ಸುಮಲತಾ ಶೂಟಿಂಗ್ ನೋಡಿಕೊಂಡು ಬಂದ ಅಂಬರೀಶ್ಸುಮಲತಾ ಶೂಟಿಂಗ್ ನೋಡಿಕೊಂಡು ಬಂದ ಅಂಬರೀಶ್

  ಉದಯ ಟಿವಿ ಕಾರ್ಯಕ್ರಮದಲ್ಲಿ ಅಂಬಿ

  ಉದಯ ಟಿವಿ ಕಾರ್ಯಕ್ರಮದಲ್ಲಿ ಅಂಬಿ

  ಉದಯ ಮ್ಯೂಸಿಕ್ ವಾಹಿನಿಯ ಖಾಸಗಿ ಕಾರ್ಯಕ್ರಮದಲ್ಲೂ ರೆಬಲ್ ಸ್ಟಾರ್ ಭಾಗಿಯಾಗಿದ್ದಾರೆ. ಈ ವೇಳೆ ನಟಿ ಮಾಲಾಶ್ರೀ, ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ಹಾಗೂ ಗಾಯಕ ವಿಜಯ್ ಪ್ರಕಾಶ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

  ಪ್ರಿಯಾ ವಾರಿಯರ್ ಸ್ಟೈಲ್ ನಲ್ಲಿ ಅಂಬಿ

  ಪ್ರಿಯಾ ವಾರಿಯರ್ ಸ್ಟೈಲ್ ನಲ್ಲಿ ಅಂಬಿ

  ಇನ್ನು ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರಂತೆ ಅಂಬರೀಶ್ ಕೂಡ ಕಣ್ಸನ್ನೆ ಮಾಡಿ ಶೂಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಅಂಬಿ ನಿಂಗ್ ವಯಸ್ಸಾಯ್ತೋ

  ಅಂಬಿ ನಿಂಗ್ ವಯಸ್ಸಾಯ್ತೋ

  ಸದ್ಯ, ಚುನಾವಣೆಯಿಂದ ಹಿಂದೆ ಸರಿದಿರುವ ಅಂಬರೀಶ್ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಮತ್ತು ಶ್ರುತಿ ಹರಿಹರನ್ ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

  'ಅಂಬಿ ನಿಂಗ್ ವಯಸ್ಸಾಯ್ತೋ' ಫಸ್ಟ್ ಲುಕ್ ಔಟ್: ವಯಸ್ಸಾದ ಅಂಬಿ ಹೇಗ್ ಕಾಣ್ತಾರೆ?'ಅಂಬಿ ನಿಂಗ್ ವಯಸ್ಸಾಯ್ತೋ' ಫಸ್ಟ್ ಲುಕ್ ಔಟ್: ವಯಸ್ಸಾದ ಅಂಬಿ ಹೇಗ್ ಕಾಣ್ತಾರೆ?

  English summary
  Rebel star Ambareesh visited Dr Vishnuvardhan house and met Smt Bharathi Vishnuvardhan. This was a casual visit since 'Ambi ninge vayassaytho' shooting was near 9th Block Jayanagara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X