twitter
    For Quick Alerts
    ALLOW NOTIFICATIONS  
    For Daily Alerts

    ಅಂಬರೀಷ್ ಹುಟ್ಟುಹಬ್ಬಕ್ಕೆ ಭಟ್ಟರ ಸ್ಪೆಷಲ್ ಹಾಡು

    |

    Ambarish Yograj Bhat
    ಕನ್ನಡದ ಚಿತ್ರರಂಗದ ಅತ್ಯಂತ ದುಬಾರಿ ಹಾಗೂ ಬೇಡಿಕೆಯ ಗೀತರಚನೆಕಾರರಾಗಿರುವ ನಿರ್ದೇಶಕ ಯೋಗರಾಜ್ ಭಟ್, ಸದ್ಯದಲ್ಲೇ ನಡೆಯಲಿರುವ ಅಂಬರೀಷ್ 60ನೇ ಹುಟ್ಟುಹಬ್ಬದ ಸಂಭ್ರಮಕ್ಕೂ ಹಾಡು ಬರೆದಿದ್ದಾರೆ.

    ಇದೇ 29 (ಮೇ 29, 2012) ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ವಿಶೇಷ ಸಂದರ್ಭಕ್ಕಾಗಿ ಯೋಗರಾಜ್ ಭಟ್, ಕನ್ನಡ ಚಿತ್ರರಂಗದಲ್ಲಿ ಅಂಬರೀಷ್ ಸಾಧನೆ ಹಾಗೂ ಅವರ ಮೇಲೆ ಉದ್ಯಮ ಹಾಗೂ ಜನರಿಗಿರುವ ಪ್ರೀತಿ-ವಿಶ್ವಾಸಗಳ ಕುರಿತು ಒಂದು ಹಾಡನ್ನು ರಚಿಸಿಕೊಟ್ಟಿದ್ದಾರೆ.

    ಅಂಬರೀಷ್ ಸಾಧನೆಯನ್ನು ಸಂಕ್ಷಿಪ್ತವಾಗಿ ಹೇಳುವ ಈ ಹಾಡಿನ ಪ್ರಾರಂಭದ ಸಾಲುಗಳು ಹೀಗಿವೆ:
    ನಮ್ಮ ನಾಡಿನ ಕೀರ್ತಿ ಪುರುಷ...
    ಬಾಳಬೇಕಯ್ಯ ನೂರು ವರುಷ...
    ಮಂಡ್ಯದ ಚಂದಮಾಮ ಅಂಬರೀಷ್ ಅಣ್ಣಯ್ಯ...
    ಕರುನಾಡ ಮಾಸ್ಟರ್ ಪೀಸ್ ಬೇರೆ ಇಲ್ಲಯ್ಯ...

    ಹೀಗೆ ಸಾಗುವ ಈ ಹಾಡು, ಅಂಬಿಗೆ ಕನ್ನಡ ಚಿತ್ರರಂಗ, ಪ್ರೇಕ್ಷಕರು ಹಾಗೂ ಅವರ ಅಭಿಮಾನಿಗಳು ಹೀಗೆ ಎಲ್ಲರಿಂದ ಬಂದ ಬಿರುದು, ಪ್ರೀತಿಗಳನ್ನು ಸಾರುವಂತಿದೆ. ಈ ಹಾಡನ್ನು ಅಂದು ವೇದಿಕೆಯ ಮೇಲೆ ಕೇಳುವ ಸೌಭಾಗ್ಯ ಅಲ್ಲಿ ನೆರೆಯಲಿರುವ ಸಮಸ್ತ ಜನರಿಗೂ ಲಭಿಸಲಿದೆ.

    ಅಂಬರೀಷ್ ಹುಟ್ಟುಹಬ್ಬದ ಆಚರಣೆಯ ಪ್ರಯುಕ್ತ ಅಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಇಡೀ ಚಿತ್ರರಂಗ ಒಟ್ಟಾಗಲಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಸೋಜಿಗವೇ ಸರಿ. ಅಂಬಿಯ ಹುಟ್ಟುಹಬ್ಬಕ್ಕಾಗಿ ಮೂರು ದಿನ ಸಂಪೂರ್ಣವಾಗಿ ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ.

    ಅಷ್ಟೇ ಅಲ್ಲ, ಎಲ್ಲಾ ನಟ-ನಟಿಯರೂ ಒಂದಲ್ಲ ಒಂದು ಕಾರ್ಯಕ್ರಮ ನೀಡುವ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಅಂಬಿ 'ಅಜಾತಶತ್ರು' ಎಂಬ ಮಾತಿಗೆ ಈ ಕಾರ್ಯಕ್ರಮ ವಿಶೇಷ ಇಂಬು ನೀಡಲಿದೆ ಎಂಬುದಂತೂ ಸತ್ಯ.

    ಒಟ್ಟಿನಲ್ಲಿ ಅಂಬರೀಷ್ ಹುಟ್ಟುಹಬ್ಬಕ್ಕೂ ಭಟ್ಟರ ಹಾಡು ಬಳಕೆಯಾಗುತ್ತಿರುವುದು ಯೋಗರಾಜ್ ಭಟ್ಟರ ಅಭಿಮಾನಿಗಳಿಗಂತೂ ತುಂಬಾ ಸಂತೋಷದ ಸಂಗತಿ. ಸ್ವತಃ ಭಟ್ಟರು ಈ ಅವಕಾಶದಿಂದ ಧ್ರಿಲ್ ಆಗಿದ್ದಾರೆ ಹಾಗೂ ಇದಕ್ಕಾಗಿ ವಿಶೇಷವಾದ ಹಾಡು ಬರೆದುಕೊಟ್ಟಿದ್ದಾರೆ ಎಂದು ಭಟ್ಟರ ಆಪ್ತರು ಹೇಳಿದ್ದಾರೆ. (ಒನ್ ಇಂಡಿಯಾ ಕನ್ನಡ)

    English summary
    Director Yograj Bhat wrote a Song for Rebel Star Ambarish's 60th Birthday Celebration. It is held in Palace Ground, Bangalore on 29 May 2012. 
 
    Sunday, May 27, 2012, 10:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X