'ನಾಡಪ್ರಭು' ಗೆಟಪ್ ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್

By ಹರ್ಷಿತಾ ಎನ್

ಮಂಡ್ಯದ ಗಂಡು, ರೆಬೆಲ್ ಸ್ಟಾರ್, ಕರ್ನಾಟಕದ ಕರ್ಣ....ಇವೆಲ್ಲಾ ವಸತಿ ಸಚಿವ ಡಾ.ಅಂಬರೀಶ್ ಗೆ ಸಿಕ್ಕಿರೋ ಹಿರಿಮೆಯ ಗರಿಗಳು. ಇವೆಲ್ಲದರ ಜೊತೆಗೆ ಇನ್ಮುಂದೆ ಸ್ಯಾಂಡಲ್ ವುಡ್ ನ ಕಟ್ಟಾ ಅಭಿಮಾನಿಗಳು ಅಂಬಿಗೆ ನಾಡಪ್ರಭು ಅಂತ ಜೈಕಾರ ಹಾಕಿದ್ರೆ ಅಚ್ಚರಿ ಪಡಬೇಡಿ. ಯಾಕಂದ್ರೆ, ನಾಡಪ್ರಭು ಕೆಂಪೇಗೌಡನ ಪಾತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಖಡಕ್ಕಾಗಿ ಕಾಣಿಸಿಕೊಂಡಿದ್ದಾರೆ.

ಇಲ್ಲಿವರೆಗೂ ಅಂಬರೀಶ ಚಿತ್ರದಲ್ಲಿ ದರ್ಶನ್ ಅವರ ರೆಬೆಲ್ ಅವತಾರವನ್ನ ಮಾತ್ರ ಚಿತ್ರದ ತುಣುಕುಗಳಲ್ಲಿ ನೋಡಿದ್ದ ಅಭಿಮಾನಿಗಳಿಗೆ ಮಂಡ್ಯದ ಚಂದಮಾಮನ ದರ್ಶನ ಆಗಿರಲಿಲ್ಲ. ಅಂಬರೀಶ ಚಿತ್ರದಲ್ಲಿ ನಾಡಪ್ರಭು ಕೆಂಪೇಗೌಡನ ಪಾತ್ರ ನಿರ್ವಹಿಸಿರೋ ಅಂಬರೀಶ್, ಚಿತ್ರದಲ್ಲಿ ಹೇಗೆ ಕಾಣ್ಬಹುದು..? ಅಂತ ಕುತೂಹಲದಿಂದ ಕಾಯ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ''ನಾಡಪ್ರಭು'' ಅಂಬರೀಶನ ದರ್ಶನ.

'ಅಂಬರೀಶ'ನಲ್ಲಿದೆ ರೆಬೆಲ್ ಪವರ್...!

'ಅಂಬರೀಶ'ನಲ್ಲಿದೆ ರೆಬೆಲ್ ಪವರ್...!

ಲ್ಯಾಂಡ್‌ ಮಾಫಿಯಾ ಸುತ್ತ ಹೆಣೆದಿರೋ ಅಂಬರೀಶ ಚಿತ್ರದಲ್ಲಿ ದರ್ಶನ್ ಸಾಮಾನ್ಯ ಕೂಲಿ ಕಾರ್ಮಿಕನಾಗಿ ಕಾಣಿಸಿಕೊಂಡ್ರೆ, ಬೆಂಗಳೂರನ್ನ ಕಟ್ಟಿದ ಕೆಂಪೇಗೌಡ ಪಾತ್ರದಲ್ಲಿ ಅಂಬರೀಶ್ ಮಿಂಚಲಿದ್ದಾರೆ. ಹೀಗಾಗಿ ಅಂಬರೀಶ್ ಮೂಲಕ ಚಿತ್ರದಲ್ಲಿ ಕೆಂಪೇಗೌಡರ ಆಳ್ವಿಕೆಯನ್ನ ನೋಡೋ ಭಾಗ್ಯ ಕನ್ನಡ ಪ್ರೇಕ್ಷಕರಿಗೆ ಸಿಗಲಿದೆ.

'ಕೆಂಪೇಗೌಡ' ಪಾತ್ರಕ್ಕೆ ಅಂಬಿನೇ ಬೆಸ್ಟ್

'ಕೆಂಪೇಗೌಡ' ಪಾತ್ರಕ್ಕೆ ಅಂಬಿನೇ ಬೆಸ್ಟ್

ನಾಡಪ್ರಭು ಕೆಂಪೇಗೌಡ ಪಾತ್ರ ಅಂಬರೀಶ್ ಗೆ ಹೇಳಿಮಾಡಿಸಿದಂತಿದೆ ಅಂತಾರೆ ನಿರ್ದೇಶಕ ಮಹೇಶ್‌ ಸುಖಧರೆ. ಅನಾರೋಗ್ಯದ ಕಾರಣ ಹಲವು ದಿನಗಳ ಕಾಲ ಸಿಂಗಾಪುರದ ಮೌಂಟ್ ಎಲಿಜಿಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ರೂ, ಕೆಂಪೇಗೌಡರ ಪಾತ್ರಕ್ಕೆ ತಕ್ಕಂತ ಅಂಬಿ ಬಿಟ್ಟಿದ್ದ ಮೀಸೆ ಮಾತ್ರ ತೆಗಿಸಿರಲಿಲ್ಲ.

'ಮಗಧೀರ' ಬಿಟ್ರೆ ನೆಕ್ಸ್ಟು 'ಅಂಬರೀಶ'...!

'ಮಗಧೀರ' ಬಿಟ್ರೆ ನೆಕ್ಸ್ಟು 'ಅಂಬರೀಶ'...!

ನಾಡಪ್ರಭು ಕೆಂಪೇಗೌಡರ ಕಾಲದ ಬೆಂಗಳೂರನ್ನ ಸಿನಿಮಾದಲ್ಲಿ ತೋರಿಸೋ ಪ್ರಯತ್ನ ಮಾಡಿರೋ ನಿರ್ದೇಶಕ ಮಹೇಶ್‌ ಸುಖಧರೆ ಅತ್ಯಂತ ಹೆಚ್ಚು ಸಿ.ಜಿ ವರ್ಕ್ ಮಾಡಿಸಿದ್ದಾರೆ. ಮಗಧೀರ ಚಿತ್ರ ಬಿಟ್ರೆ, ದಕ್ಷಿಣ ಭಾರತದಲ್ಲಿ ಅತ್ಯಂತ ಹೆಚ್ಚು ಸಿ.ಜಿ ವರ್ಕ್ ಆಗಿರೋದು ಅಂಬರೀಶ ಚಿತ್ರದಲ್ಲೇ ಅಂತೆ...! ಹೀಗಾಗೇ ಚಿತ್ರ ಬಿಡುಗಡೆ ಸ್ವಲ್ಪ ತಡವಾಗ್ತಿದೆ.

ಸೆನ್ಸಾರ್ ಗೆ 'ಅಂಬರೀಶ'

ಸೆನ್ಸಾರ್ ಗೆ 'ಅಂಬರೀಶ'

ಬಿಡುಗಡೆಗೆ ಸಿದ್ಧವಾಗಿರೋ 'ಅಂಬರೀಶ' ಚಿತ್ರ ಇನ್ನೆರಡು ದಿನಗಳಲ್ಲಿ ಸೆನ್ಸಾರ್ ಆಗಲಿದೆ. ದರ್ಶನ್, ಪ್ರಿಯಾಮಣಿ, ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿರೋ, ಚಿಂತನ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರೋ, ರವಿವರ್ಮ ಸಾಹಸ ಸಂಯೋಜಿಸಿರೋ, ವಿ.ಹರಿಕೃಷ್ಣ ಸಂಗೀತ ನೀಡಿರೋ 'ಅಂಬರೀಶ' ಇನ್ನೆರಡು ವಾರಗಳಲ್ಲಿ ನಿಮ್ಮ ಮುಂದೆ ಬರಲಿದೆ.

ಮರೆಯಂಗಿಲ್ಲ ಪ್ರಿಯಾಮಣಿ ಜೊತೆ ಸ್ಟೆಪ್

ಮರೆಯಂಗಿಲ್ಲ ಪ್ರಿಯಾಮಣಿ ಜೊತೆ ಸ್ಟೆಪ್

ಈ ವರ್ಷದ ಅದ್ದೂರಿ ಚಿತ್ರವೆಂದೇ ಬಿಂಬಿತವಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ 'ಅಂಬರೀಶ' ಈಗ ಅಂತಿಮ ಹಂತ ತಲುಪಿದೆ. ಇತ್ತೀಚೆಗೆ ಈ ಚಿತ್ರಕ್ಕಾಗಿ ಒಂದು ಚೇತೋಹಾರಿ ರೊಮ್ಯಾಂಟಿಕ್ ಗೀತೆಯನ್ನು ಚಿತ್ರೀಕರಿಸಿಕೊಳ್ಳಲಾಯಿತು. ಇದನ್ನೂ ಓದಿ.

More from Filmibeat

English summary
Rebel star Ambarish playing the role of Naadaprabhu Kempegowda in upcoming Kannada movie Ambareesha, in which Challenging Star Darshan, Rachitha Ram and Priyamani lead. Kempegowda look of Ambarish is revealed and Dr.Ambarish looks daring. The movie will be censored shortly.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X