'ರೆಬೆಲ್' ಶಾಕ್: ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ವಂತೆ 'ಮಂಡ್ಯ'ದ ಗಂಡು
ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಸಿದೋದೆ ಕಷ್ಟ ಎನ್ನಲಾಗಿತ್ತು. ಟಿಕೆಟ್ ಗಾಗಿ ಅರ್ಜಿ ಕೂಡ ಸಲ್ಲಿಸಿರಲಿಲ್ಲ. ಹೀಗಿದ್ದರೂ ಕಾಂಗ್ರೆಸ್ ಹೈ ಕಮೆಂಡ್ ಮಂಡ್ಯದ ವಾಸ್ತವತೆಯನ್ನ ಅರಿತು ಅಂಬಿಗೆ ಮಣೆ ಹಾಕಿತ್ತು. ಮಂಡ್ಯದಿಂದ ಅಂಬರೀಶ್ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿತ್ತು.
ಆದ್ರೆ, ಟಿಕೆಟ್ ಘೋಷಿಸಿದರು ಇದುವರೆಗೂ ಬಿ ಫಾರಂ ಪಡೆಯದ ಅಂಬರೀಶ್ ಕೊನೆಗೂ ಶಾಕ್ ಕೊಟ್ಟಿದ್ದಾರೆ. ನಾಮಪತ್ರ ಸಲ್ಲಿಗೆ ಕೊನೆಯ ಎರಡು ದಿನ ಬಾಕಿಯಿರುವಾಗಲೇ ಚುನಾವಣೆಯ ಕಣದಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮಂಡ್ಯ ವಿಧಾನಸಭೆ ಕ್ಷೇತ್ರದಿಂದ ಅಂಬರೀಶ್ ಹಿಂದಕ್ಕೆ ಸರಿದಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಯಾಗಿದೆ. ಅಷ್ಟಕ್ಕೂ, ಅಂಬಿ ಟಿಕೆಟ್ ಬೇಡವೆನ್ನಲು ಬಲವಾದ ಕಾರಣವೇನು.? ಸ್ಪರ್ಧೆ ಮಾಡಿ ಅಂತ ಕೇಳಿಕೊಂಡರು ಒಲ್ಲೆ ಎನ್ನುತ್ತಿರುವುದು ಏಕೆ.? ಎಂಬ ಪ್ರಶ್ನೆಗಳು ಕಾಡುತ್ತಿದೆ. ಇದಕ್ಕೆ ಉತ್ತರ ಕೂಡ ಸ್ವತಃ ಅಂಬಿಯೇ ನೀಡಿದ್ದಾರೆ. ಅಂಬಿ ಮಂಡ್ಯ ಕ್ಷೇತ್ರದಿಂದ ಹಿಂದೆ ಸರಿ
ಯಲು ಕಾರಣ ಮುಂದೆ ಓದಿ.....

ಮಂಡ್ಯದಿಂದ ಹಿಂದೆ ಸರಿದ್ರಾ ಅಂಬಿ.!
ಏಪ್ರಿಲ್ 24 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಎಂದು ಚುನಾವಣ ಅಯೋಗ ತಿಳಿಸಿದೆ. ಹೀಗಿರುವಾಗ, ರೆಬೆಲ್ ಸ್ಟಾರ್, ಮಾಜಿ ಸಚಿವ ಅಂಬರೀಶ್ ಚುನಾವಣೆಯಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸಚಿವ ಸ್ಥಾನದಿಂದ ಕೈಬಿಟ್ಟಿದಕ್ಕೆ ಬೇಸರ
ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಅಂಬರೀಶ್ ಅವರು ವಸತಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದ್ರೆ, ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಂಬಿ ಅವರನ್ನ ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು. ಇದರಿಂದ ಸಿದ್ದರಾಮಯ್ಯ ಹಾಗೂ ಕೆಲ ನಾಯಕರ ವಿರುದ್ಧ ಅಂಬಿ ಮುನಿಸಿಕೊಂಡಿದ್ದರು.

ಆಗ ಬೇಡ, ಈಗ ಯಾಕೆ ಬೇಕು.?
ಹೀಗಾಗಿ, ಸಚಿವ ಸ್ಥಾನದಿಂದ ಕೈಬಿಟ್ಟಿದ್ದ ಕಾಂಗ್ರೆಸ್ ಗೆ ಅಂಬರೀಶ್ ಆವಾಗ ಬೇಕಾಗಿರಲಿಲ್ಲ. ಆದ್ರೆ, ಈಗೇಕೆ ಬೇಕು ಎಂದು ಅಂಬಿ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಅಂಬಿ ಹಿಂದೆ ಸರಿದ್ರೆ.?
ಒಂದು ವೇಳೆ ಅಂಬರೀಶ್ ಅವರು ಮಂಡ್ಯದಿಂದ ಹಿಂದಕ್ಕೆ ಸರಿದ್ರೆ, ಆ ಜಾಗಕ್ಕೆ ಯಾರು ಎಂಬ ಪ್ರಶ್ನೆಗೆ ಮೂರ್ನಾಲ್ಕು ಉತ್ತರ ಸಿಕ್ಕಿದೆ. ಅಂಬಿ ಸ್ಪರ್ಧಿಸಲ್ಲ ಅಂದ್ರೆ, ಅಮರಾವತಿ ಚಂದ್ರಶೇಖರ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಮತ್ತೊಂದೆಡೆ ರವಿಗಣಿಗ ಟಿಕೆಟ್ ಆಕಾಂಕ್ಷಿಯಾಗಿದ್ದು, ರಮ್ಯಾ ಅವರ ಹೆಸರು ಕೂಡ ಕೇಳಿ ಬರುತ್ತಿದೆ.


Click it and Unblock the Notifications











