ವಿಧಾನಸಭೆ ಚುನಾವಣೆಗೆ ಮಂಡ್ಯಗಂಡು ಅಂಬರೀಶ್

By Rajendra

ಮಾಜಿ ಕೇಂದ್ರ ಸಚಿವ ಹಾಗೂ ಕನ್ನಡ ಚಿತ್ರನಟ ರೆಬೆಲ್ ಸ್ಟಾರ್ ಅಂಬರೀಶ್ ಅವರು 2013ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ತಮ್ಮ ಸ್ವಕ್ಷೇತ್ರ ಮಂಡ್ಯ ಜಿಲ್ಲೆಯಿಂದಲೇ ಚುನಾವಣಾ ಕಣಕ್ಕೆ ಇಳಿಯುವುದಾಗಿ ಅಂಬರೀಶ್ ತಿಳಿಸಿದ್ದಾರೆ.

ಆದರೆ ತಾವು ಯಾವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದನ್ನು ಅಂಬರೀಶ್ ಅವರು ಬಹಿರಂಗಪಡಿಸಿಲ್ಲ. ಮಂಡ್ಯದಿಂದ ಸ್ಪರ್ಧಿಸುತ್ತೀರೋ ಅಥವಾ ಕೆ.ಆರ್.ಪೇಟೆಯಿಂದ ಸ್ಪರ್ಧಿಸುತ್ತೀರೋ ಎಂಬ ಮಾಧ್ಯಮ ಮಿತ್ರರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಆರ್ ಪೇಟೆಯಿಂದ ಸ್ಪರ್ಧಿಸಿದರೂ ತಪ್ಪೇನಿಲ್ಲ ಬಿಡಿ ಎಂದರು ಸ್ವಲ್ಪ ಜೋರಾಗಿಗೇ ನಕ್ಕಿದರು.

ಮಂಡ್ಯ ಜಿಲ್ಲೆಯ ಏಳು ವಿಧಾಸಭಾ ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷದ ಕಾರ್ಯಕರ್ತರಿಂದ ಹಾಗೂ ಅಭಿಮಾನಿಗಳಿಂದ ಒತ್ತಡ ಬರುತ್ತಿದೆ. ತಾವು ಇನ್ನೂ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ನಿರ್ಧರಿಸಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಖಂಡಿತ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಅಂಬರೀಶ್ ಭವಿಷ್ಯ ನುಡುದಿದ್ದಾರೆ.

ಆದರೆ ತಾವು ಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷ ತಮಗೆ ಯಾವ ಜವಾಬ್ದಾರಿ ವಹಿಸುತ್ತದೋ ಅದನ್ನು ತಾವು ಶಿರಸಾವಹಿಸುತ್ತೇವೆ ಎಂದಿದ್ದಾರೆ. 12ನೇ ಲೋಕಸಭಾ ಚುನಾವಣೆಯಲ್ಲಿ ಅಂಬರೀಶ್ ಅವರು ಜೆಡಿಎಸ್ ವಿರುದ್ಧ ಜಯಭೇರಿ ಬಾರಿಸಿದ್ದರು.

ಬಳಿಕ ಕಾಂಗ್ರೆಸ್ ಗೆ ಸೇರ್ಪಡೆಯಾದ ಅವರು ಎರಡು ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರು. 14 ಲೋಕಸಭೆ ಚುನಾವಣೆಯಲ್ಲಿ ಗೆದ್ದಾಗ ಅವರು ಮಾಹಿತಿ ಮತ್ತು ವಾರ್ತಾ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಕಾವೇರಿ ಜಲವಿವಾದ ನ್ಯಾಯಾಧಿಕರಣ ತೀರ್ಪಿನಿಂದ ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. (ಆದರೆ ಅವರ ರಾಜೀನಾಮೆ ಔಪಚಾರಿಕವಾಗಿ ಸ್ವೀಕೃತವಾಗಲಿಲ್ಲ).

ಪ್ರಸ್ತುತ ಅವರು ಕೆಪಿಸಿಸಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಬರೀಶ್ ಅವರು ಕಲಾವಿದರಾಗಿ ಜನರ ಮನಸ್ಸು ಗೆದ್ದಿದ್ದಾರೆ. ಆದರೆ ರಾಜಕಾರಣಿಯಾಗಿ ಅಲ್ಲ ಎಂಬ ಮಾತುಗಳೂ ಅವರ ವಿರುದ್ಧ ಕೇಳಿಬರುತ್ತಿವೆ.

ಈ ಹಿಂದೊಮ್ಮೆ ಮಂಡ್ಯ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಎಂ ಕೃಷ್ಣಮೂರ್ತಿ ಅವರು, ಸಿನೆಮಾ ರಂಗದಲ್ಲಿ ನಿರ್ದೇಶಕನ ತಾಳಕ್ಕೆ ತಕ್ಕಂತೆ ನಟನೆ ಮಾಡುವಲ್ಲಿ ಅಂಬರೀಶ್ ಯಶಸ್ವಿಯಾಗಿದ್ದಾರೆ. ರಾಜಕೀಯ ನಟನೆಯಿಂದ ಜನರ ಸೇವೆ ಮಾಡಲು ಸಾಧ್ಯವಿಲ್ಲ. ಇದನ್ನು ಅಂಬರೀಶ್ ಅರಿತುಕೊಂಡು ಸಿನೆಮಾ ರಂಗದಲ್ಲಿಯೇ ಮುಂದುವರಿಯುವುದು ಒಳಿತು ಎಂದಿದ್ದರು. (ಏಜೆನ್ಸೀಸ್)

More from Filmibeat

English summary
Kannada actor and former Union minister Ambarish announced that he would contest the Assembly elections 2013 from Mandya district. Clarifying that he was not an aspirant for the posts of CM or KPCC president.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X