For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಕಾಂತಾರ ವೀಕ್ಷಿಸಿದ ಪ್ರಭಾಸ್; ಚಿತ್ರದ ಈ ಭಾಗ ಸಖತ್ ಎಂದ ಬಾಹುಬಲಿ!

  |

  ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ನಿನ್ನೆಯಷ್ಟೇ ( ಸೆಪ್ಟೆಂಬರ್ 30 ) ವಿಶ್ವದಾದ್ಯಂತ ಬಿಡುಗಡೆಯಾಗಿ ಅಬ್ಬರಿಸುತ್ತಿದೆ. ಚಿತ್ರದಲ್ಲಿ ಮಾನವ ಮತ್ತು ಪರಿಸರದ ನಡುವಿನ ಹೋರಾಟವಿದ್ದು, ಕರಾವಳಿಯ ಆಚರಣೆ ಮತ್ತು ಸಂಸ್ಕೃತಿಯನ್ನು ತುಂಬಾ ಅಚ್ಚುಕಟ್ಟಾಗಿ ತೆರೆಯ ಮೇಲೆ ತರಲಾಗಿದೆ. ಕರಾವಳಿ ಆಚರಣೆ ಕುರಿತು ತಿಳಿದುಕೊಂಡಿರುವವರು ಹಾಗೂ ಇದರ ಅರಿವೇ ಇಲ್ಲದವರು ಇಬ್ಬರೂ ಸಹ ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. ಅದರಲ್ಲಿಯೂ ಚಿತ್ರದ ಕೊನೆಯ ಇಪ್ಪತ್ತು ನಿಮಿಷಗಳಲ್ಲಿ ರಿಷಬ್ ಶೆಟ್ಟಿ ಅವರ ಅಭಿನಯಕ್ಕೆ ಸಿನಿರಸಿಕರು ಮಾರುಹೋಗಿದ್ದಾರೆ.

  ಹೀಗೆ ನಿರ್ದೇಶನ ಮಾತ್ರವಲ್ಲದೆ ನಟನೆಯಲ್ಲಿ ಕೂಡ ಅಬ್ಬರಿಸಿ ಬೊಬ್ಬಿರಿದಿರುವ ರಿಷಬ್ ಶೆಟ್ಟಿ ಸದ್ಯ ಭಾರತ ಚಿತ್ರರಂಗದಲ್ಲಿ ಕಾಂತಾರ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ವಿಜಯ್ ಕಿರಗಂದೂರು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಸಾಲು ಸಾಲು ದೊಡ್ಡ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಿತ್ರದ ಮೂಲಕವೂ ಸಹ ಮತ್ತೊಂದು ಹಿಟ್ ಚಿತ್ರವನ್ನು ಸಿನಿರಸಿಕರಿಗೆ ನೀಡಿದೆ.

  ಇನ್ನು ಕಾಂತಾರ ಚಿತ್ರವನ್ನು ಕೇವಲ ಸಿನಿರಸಿಕರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಸಹ ನೋಡಿ ಮೆಚ್ಚಿಕೊಂಡಿದ್ದು, ಈ ಸಾಲಿಗೆ ಇದೀಗ ತೆಲುಗಿನ ದೊಡ್ಡ ನಟ ಪ್ರಭಾಸ್ ಕೂಡ ಸೇರಿಕೊಂಡಿದ್ದಾರೆ. ಹೌದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಲಾರ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಪ್ರಭಾಸ್ ಇದೇ ಸಂಸ್ಥೆ ನಿರ್ಮಿಸಿರುವ ಕಾಂತಾರ ಚಿತ್ರವನ್ನು ವೀಕ್ಷಿಸಿದ್ದಾರೆ. ವೀಕ್ಷಿಸಿದ ನಂತರ ಚಿತ್ರ ಹೇಗಿದೆ ಎಂಬುದನ್ನು ತಮ್ಮ ಇನ್ ಸ್ಟಾಗ್ರಾಂ ಹಾಗೂ ಫೇಸ್ ಬುಕ್ ಖಾತೆಗಳ ಸ್ಟೋರಿ ಮೂಲಕ ಹಂಚಿಕೊಂಡಿದ್ದಾರೆ.

  ಕಾಂತಾರ ವೀಕ್ಷಿಸಿದ ಪ್ರಭಾಸ್ ವಿಶೇಷವಾಗಿ ಇಷ್ಟಪಟ್ಟಿದ್ದು ಆ ಭಾಗವನ್ನು

  ಕಾಂತಾರ ವೀಕ್ಷಿಸಿದ ಪ್ರಭಾಸ್ ವಿಶೇಷವಾಗಿ ಇಷ್ಟಪಟ್ಟಿದ್ದು ಆ ಭಾಗವನ್ನು

  ಕಾಂತಾರ ಚಿತ್ರವನ್ನು ವೀಕ್ಷಿಸಿದ್ದಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಕಾಂತಾರ ಚಿತ್ರದ ಪೋಸ್ಟರ್ ಹಂಚಿಕೊಳ್ಳುವುದರ ಮೂಲಕ ವಿಮರ್ಶೆಯನ್ನು ಬರೆದುಕೊಂಡಿದ್ದಾರೆ ನಟ ಪ್ರಭಾಸ್. ಕಾಂತಾರ ಚಿತ್ರವನ್ನು ನೋಡಿ ಎಂಜಾಯ್ ಮಾಡಿದೆ, ಅದರಲ್ಲಿಯೂ ಕ್ಲೈಮ್ಯಾಕ್ಸ್ ಬಹಳ ಇಷ್ಟವಾಯಿತು ಎಂದು ಪ್ರಭಾಸ್ ಬರೆದುಕೊಂಡಿದ್ದಾರೆ. ಹಾಗೂ ಕಾಂತಾರ ಚಿತ್ರದ ನಟ, ನಟಿ, ನಿರ್ಮಾಪಕರು ಹಾಗೂ ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಎಲ್ಲರಂತೆ ಪ್ರಭಾಸ್ ಅವರಿಗೂ ಕೂಡ ಚಿತ್ರದ ಕ್ಲೈಮ್ಯಾಕ್ಸ್ ಇಷ್ಟವಾದ ಭಾಗವಾಗಿದೆ.

  ದೊಡ್ಮನೆಯಿಂದಲೂ ಕಾಂತಾರಕ್ಕೆ ಫುಲ್ ಮಾರ್ಕ್ಸ್

  ದೊಡ್ಮನೆಯಿಂದಲೂ ಕಾಂತಾರಕ್ಕೆ ಫುಲ್ ಮಾರ್ಕ್ಸ್

  ಇನ್ನು ಕಾಂತಾರ ಚಿತ್ರದ ಪ್ರೀಮಿಯರ್‌ ಶೋ ವೀಕ್ಷಿಸಿದ್ದ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜ್ ಕುಮಾರ್ ಮತ್ತು ಕಿರಿಯ ಪುತ್ರ ಯುವ ರಾಜ್ ಕುಮಾರ್ ಚಿತ್ರವನ್ನು ಕೊಂಡಾಡಿದ್ದರು.

  ರಿಷಬ್ ಶೆಟ್ಟಿಯನ್ನು ಚಿತ್ರಮಂದಿರದಲ್ಲೇ ಅಪ್ಪಿ ಸಂಭ್ರಮಿಸಿದ್ದ ರಕ್ಷಿತ್

  ರಿಷಬ್ ಶೆಟ್ಟಿಯನ್ನು ಚಿತ್ರಮಂದಿರದಲ್ಲೇ ಅಪ್ಪಿ ಸಂಭ್ರಮಿಸಿದ್ದ ರಕ್ಷಿತ್

  ಇನ್ನು ಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಲು ಬಂದಿದ್ದ ರಕ್ಷಿತ್ ಶೆಟ್ಟಿ ಚಿತ್ರ ಮುಗಿದ ಕೂಡಲೇ ಸೀಟಿನಿಂದ ಎದ್ದು ಚಪ್ಪಾಳೆ ತಟ್ಟಿ ಓಡಿಬಂದು ರಿಷಬ್ ಶೆಟ್ಟಿಯನ್ನು ತಬ್ಬಿ ಸಂಭ್ರಮಿಸಿದ್ದರು. ಕೊನೆಯ ಮೂವತ್ತು ನಿಮಿಷಗಳಂತೂ ಬ್ರಿಲಿಯಂಟ್ ಎಂದಿದ್ದ ರಕ್ಷಿತ್ ಶೆಟ್ಟಿ ಎಲ್ಲರೂ ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ವೀಕ್ಷಿಸಿ ಇದು ಪ್ರೇಕ್ಷಕರಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಹೀಗೆ ಕಾಂತಾರ ಸಿನಿಮಾ ವೀಕ್ಷಿಸಿದ ಸೆಲೆಬ್ರಿಟಿಗಳೆಲ್ಲ ಚಿತ್ರವನ್ನು ಹೊಗಳುತ್ತಿದ್ದಾರೆ.

  English summary
  Rebel Star Prabhas watched and praised Rishab Shetty starrer Kantara movie. Read on
  Saturday, October 1, 2022, 14:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X