National Film Awards: ಕಳೆದ ವರ್ಷ ಕನ್ನಡದ ಯಾವ ಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದವು?
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಪಟ್ಟಿ ಘೋಷಣೆಯಾಗಿದೆ. ಎಂದಿನಂತೆ ಪ್ರಶಸ್ತಿಗಾಗಿ ಈ ಬಾರಿಯೂ ದಕ್ಷಿಣದ ಮತ್ತು ಹಿಂದಿ ಭಾಷೆಯ ಸಿನಿಮಾಗಳ ನಡುವೆ ಪೈಪೋಟಿ ನಡೆದಿತ್ತು. ಅತ್ಯುತ್ತಮ ನಟನೆಗಾಗಿ ತೆಲುಗು ಚಿತ್ರೋದ್ಯಮದ ಇಬ್ಬರು ಸ್ಟಾರ್ ನಟರ ನಡುವೆ ಪೈಪೋಟಿಯಲ್ಲಿ ಅಲ್ಲು ಅರ್ಜುನ್ ಗೆದ್ದಿದ್ದಾರೆ.
ಕಳೆದ ಬಾರಿಯ ಅಂದರೆ 68ನೇ (2022) ರಾಷ್ಟ್ರೀಯ ಪ್ರಶಸ್ತಿ ಯಾರಿಗೆ ಲಭಿಸಿತ್ತು, ಕನ್ನಡದ ಯಾವ ಚಿತ್ರಕ್ಕೆ ಪ್ರಶಸ್ತಿ ಲಭಿಸಿತ್ತು. ಯಾವ ಕಲಾವಿದರು ಈ ಪ್ರಶಸ್ತಿಗೆ ಭಾಜನರಾಗಿದ್ದರು ಎನ್ನುವ ಕ್ವಿಕ್ ಲುಕ್, ನಮ್ಮ ಓದುಗರಿಗಾಗಿ:

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಜುಲೈ 22, 2022 ರಂದು ನವದೆಹಲಿಯಲ್ಲಿ ಘೋಷಿಸಲಾಗಿತ್ತು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು 1954 ರಲ್ಲಿ ಸ್ಥಾಪಿಸಲಾಗಿತ್ತು. ಕೋವಿಡ್ ಕಾರಣದಿಂದಾಗಿ ವಿಳಂಬವಾದ 2020ರ ಚಲನಚಿತ್ರಗಳ ವಿಜೇತರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಗಿತ್ತು. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹೀಗಿದೆ:
ಅತ್ಯುತ್ತಮ ಚಲನಚಿತ್ರ: ಸೂರರೈ ಪೊಟ್ರು
ಅತ್ಯುತ್ತಮ ನಿರ್ದೇಶಕ: ಸಚ್ಚಿದಾನಂದನ್ ಕೆ.ಆರ್, ಅಯ್ಯಪ್ಪನುಮ್ ಕೋಶಿಯುಮ್
ಮನರಂಜನೆಯನ್ನು ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ: ತಾನ್ಹಾಜಿ
ಅತ್ಯುತ್ತಮ ನಟ: ಸೂರರೈ ಪೊಟ್ರು ಚಿತ್ರಕ್ಕಾಗಿ ಸೂರ್ಯ ಮತ್ತು ತಾನ್ಹಾಜಿಗಾಗಿ ಅಜಯ್ ದೇವಗನ್
ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ, ಸೂರರೈ ಪೊಟ್ರು
ಅತ್ಯುತ್ತಮ ಪೋಷಕ ನಟ: ಬಿಜು ಮೆನನ್, ಅಯ್ಯಪ್ಪನುಮ್ ಕೋಶಿಯಂ
ನಾನ್ ಫೀಚರ್ ಫಿಲ್ಮ್ಸ್ ವಿಭಾಗದಲ್ಲಿ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ 'ನಾದದ ನವನೀತ' ಚಿತ್ರ 'ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಿತ್ರ' ಪ್ರಶಸ್ತಿಯನ್ನು ಪಡೆದುಕೊಂಡಿತ್ತು.
ಭಾಷಾವಾರು ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಕನ್ನಡದ 'ಡೊಳ್ಳು' ಸಿನಿಮಾ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ತುಳು ಭಾಷೆಯ 'ಜೀತಿಗೆ' ಚಿತ್ರ ಆ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.
ಸಾಗರ್ ಪುರಾಣಿಕ್ ನಿರ್ದೇಶದನ ಡೊಳ್ಳು ಸಿನಿಮಾ, ಪವನ್ ಒಡೆಯರ್ ಒಡೆತನದ ಒಡೆಯರ್ ಮೂವೀಸ್ ಬ್ಯಾನರ್ ನಲ್ಲಿ ಹೊರಬಂದ ಚಿತ್ರವಾಗಿತ್ತು. ಡೊಳ್ಳು ಕುಣಿತದ ಕಲಾವಿದ ಭದ್ರ (ಚಿತ್ರದ ಹೀರೋ), ಅನಾದಿ ಕಾಲದ ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ಏನೆಲ್ಲಾ ಶ್ರಮ ಪಡುತ್ತಾನೆ ಎನ್ನುವ ಕಥಾಹಂದರವನ್ನು ಹೊಂದಿದ ಚಿತ್ರ ಇದಾಗಿತ್ತು.


Click it and Unblock the Notifications











