twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್' ನಿರ್ಮಿಸಿರುವ ಈ 8 ದಾಖಲೆ ಬ್ರೇಕ್ ಮಾಡೋದು ಯಾರು?

    |

    ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದ ಕೆಜಿಎಫ್ ಚಾಪ್ಟರ್ 1 ಕನ್ನಡ ಚಿತ್ರರಂಗದ ಇತಿಹಾಸ ಬದಲಿಸಿದ ಸಿನಿಮಾ. ಸ್ಯಾಂಡಲ್ವುಡ್ ಟ್ರೆಂಡ್ ಹುಟ್ಟುಹಾಕಿದ ಸೂಪರ್ ಹಿಟ್ ಚಿತ್ರ. ಕನ್ನಡದ ಬೇಡಿಕೆ ಹೆಚ್ಚಿಸಿದ್ದ ಚಿತ್ರ. ಮೇಕಿಂಗ್, ಗಳಿಕೆಯಲ್ಲಿ ಸಖತ್ ಸದ್ದು ಮಾಡಿದ್ದ ಕೆಜಿಎಫ್ ಹಲವು ದಾಖಲೆಗಳನ್ನ ಮಾಡಿತ್ತು.

    ಇದುವರೆಗೂ ಯಾವ ಕನ್ನಡ ಸಿನಿಮಾನೂ ಮಾಡದ ಹಲವು ದಾಖಲೆಗಳು ಕೆಜಿಎಫ್ ಹೆಸರಿನಲ್ಲಿದೆ. ಡಿಸೆಂಬರ್ 20, 2018ರಲ್ಲಿ ತೆರೆಕಂಡಿದ್ದ ಕೆಜಿಎಫ್ ಚಿತ್ರಕ್ಕೆ ಈಗ ಒಂದು ವರ್ಷದ ಸಂಭ್ರಮ. ಒಂದು ವರ್ಷ ಪೂರೈಸಿದ ವಿಶೇಷವಾಗಿ ಕೆಜಿಎಫ್ ಚಿತ್ರದ ಖಾತೆಯಲ್ಲಿರುವ ದಾಖಲೆಗಳ ಪಟ್ಟಿ ಮಾಡಲಾಗಿದೆ.

    'ಕೆಜಿಎಫ್' ಬಂದು ಹೋದ 1 ವರ್ಷದಲ್ಲಿ ಇಂಡಸ್ಟ್ರಿಯಲ್ಲಾದ 5 ಬಹುಮುಖ್ಯ ಬದಲಾವಣೆ'ಕೆಜಿಎಫ್' ಬಂದು ಹೋದ 1 ವರ್ಷದಲ್ಲಿ ಇಂಡಸ್ಟ್ರಿಯಲ್ಲಾದ 5 ಬಹುಮುಖ್ಯ ಬದಲಾವಣೆ

    ಚಂದನವನದಲ್ಲಿ ಚರಿತ್ರೆ ಸೃಷ್ಟಿಸಿದ ಕೆಜಿಎಫ್ ಹೆಸರಿನಲ್ಲಿ ಯಾವೆಲ್ಲಾ ದಾಖಲೆಗಳಿವೆ ನೋಡೋಣ ಬನ್ನಿ. ಮುಂದೆ ಓದಿ....

    250 ಕೋಟಿ ಮುಟ್ಟಿದ ಮೊದಲ ಕನ್ನಡ ಸಿನಿಮಾ

    250 ಕೋಟಿ ಮುಟ್ಟಿದ ಮೊದಲ ಕನ್ನಡ ಸಿನಿಮಾ

    ಕನ್ನಡ, ತೆಲುಗು, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ತೆರೆಕಂಡಿದ್ದ ಕೆಜಿಎಫ್ ಸಿನಿಮಾ ಒಟ್ಟಾರೆ 250 ಕೋಟಿ ಗಳಿಸಿರುವ ದಾಖಲೆ ಇದೆ. ಕನ್ನಡ ವರ್ಷನ್ ಮಾತ್ರ 100 ಆಗಿದೆ ಎಂಬ ವರದಿಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ನೂರು ಕೋಟಿ ಗಡಿ ದಾಟಿದ ಚಿತ್ರ ಕೆಜಿಎಫ್ ಎಂಬ ದಾಖಲೆ ನಿರ್ಮಿಸಿದೆ. 100 ದಾಟಿ 200 ಕೋಟಿ ಗಳಿಸಿರುವ ಕನ್ನಡ ಚಿತ್ರವೂ ಕೆಜಿಎಫ್.

    10 ವರ್ಷದ ಬಾಲಿವುಡ್ ನಲ್ಲಿ ವಿಶೇಷ ಸ್ಥಾನ ಪಡೆದ 'ಕೆಜಿಎಫ್' ಮತ್ತು 'ಬಾಹುಬಲಿ'10 ವರ್ಷದ ಬಾಲಿವುಡ್ ನಲ್ಲಿ ವಿಶೇಷ ಸ್ಥಾನ ಪಡೆದ 'ಕೆಜಿಎಫ್' ಮತ್ತು 'ಬಾಹುಬಲಿ'

    ಮೊದಲ ದಿನದ ದಾಖಲೆ

    ಮೊದಲ ದಿನದ ದಾಖಲೆ

    ಕೆಜಿಎಫ್ ಸಿನಿಮಾ ಮೊದಲ ದಿನ 24 ಕೋಟಿ ಗಳಿಸಿತ್ತು. ಇದುವರೆಗೂ ಯಾವ ಕನ್ನಡ ಸಿನಿಮಾ ಕೂಡ ಮೊದಲ ದಿನ 24 ಕೋಟಿ ಗಳಿಸಿಲ್ಲ. ಹೀಗಾಗಿ, ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡಿರುವ ಕನ್ನಡ ಚಿತ್ರ ಕೆಜಿಎಫ್ ಆಗಿದೆ. ಬೆಂಗಳೂರಿನಲ್ಲಿ ಮಾತ್ರ ಮೊದಲ ದಿನ 5 ಕೋಟಿವರೆಗೂ ಗಳಿಸಿತ್ತು ಎನ್ನಲಾಗಿದೆ.

    ಹಿಂದಿಯಲ್ಲಿ ದಾಖಲೆ ಬರೆದ ಕನ್ನಡ ಚಿತ್ರ

    ಹಿಂದಿಯಲ್ಲಿ ದಾಖಲೆ ಬರೆದ ಕನ್ನಡ ಚಿತ್ರ

    ಹಿಂದಿ ಅವತರಣಿಕೆಯಲ್ಲಿ ಕೆಜಿಎಫ್ ಸಿನಿಮಾ 50 ಕೋಟಿಗೂ ಅಧಿಕ ಹಣ ಗಳಿಕೆ ಕಂಡಿದೆ. ಕನ್ನಡ ಸಿನಿಮಾವೊಂದು ಹಿಂದಿಗೆ ಡಬ್ ಆಗಿ ಅತಿ ಹೆಚ್ಚು ಗಳಿಕೆ ಕಂಡಿರುವ ಚಿತ್ರಗಳ ಪಟ್ಟಿಯಲ್ಲಿ ಕೆಜಿಎಫ್ ಮೊದಲ ಸ್ಥಾನದಲ್ಲಿದೆ.

    ಕರ್ನಾಟಕದಲ್ಲಿ 'ಬಾಹುಬಲಿ' ದಾಖಲೆ ಉಡೀಸ್ ಮಾಡಿದ 'ಕೆಜಿಎಫ್'.!ಕರ್ನಾಟಕದಲ್ಲಿ 'ಬಾಹುಬಲಿ' ದಾಖಲೆ ಉಡೀಸ್ ಮಾಡಿದ 'ಕೆಜಿಎಫ್'.!

    ಬಾಲಿವುಡ್ನಲ್ಲಿ ನಾಲ್ಕನೇ ಸಿನಿಮಾ

    ಬಾಲಿವುಡ್ನಲ್ಲಿ ನಾಲ್ಕನೇ ಸಿನಿಮಾ

    ಹಿಂದಿಯಲ್ಲಿ ಡಬ್ ಆದ ಬೇರೆ ಭಾಷೆಯ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಕಂಡಿರುವ ಸಿನಿಮಾ ಪಟ್ಟಿಯಲ್ಲಿ ಕೆಜಿಎಫ್ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಎರಡು ದಿನದಲ್ಲಿ ಬಾಹುಬಲಿ ಸರಣಿ ಇದ್ದು, ಮೂರನೇ ಸ್ಥಾನದಲ್ಲಿ 2.0 ಸಿನಿಮಾ ಇದೆ. ನಾಲ್ಕನೇ ಸ್ಥಾನದಲ್ಲಿ ಕೆಜಿಎಫ್ ಇದೆ. ಹಿಂದಿಯಲ್ಲಿ ಕೆಜಿಎಫ್ 52 ಕೋಟಿ ಗಳಿಸಿದೆ.

    ಕಬಾಲಿ, ರೋಬೋ ದಾಖಲೆ ಅಳಿಸಿ ಹೊಸ ದಾಖಲೆ ಬರೆದ ಕೆಜಿಎಫ್ಕಬಾಲಿ, ರೋಬೋ ದಾಖಲೆ ಅಳಿಸಿ ಹೊಸ ದಾಖಲೆ ಬರೆದ ಕೆಜಿಎಫ್

    ವಿದೇಶದಲ್ಲೂ ಕೆಜಿಎಫ್ ಕಮಾಲ್

    ವಿದೇಶದಲ್ಲೂ ಕೆಜಿಎಫ್ ಕಮಾಲ್

    ಕನ್ನಡ ಸಿನಿಮಾಗಳ ಪೈಕಿ ವಿದೇಶಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಚಿತ್ರ ಕೆಜಿಎಫ್ ಆಗಿದೆ. ದಾಖಲೆಗಳ ಪ್ರಕಾರ ಸುಮಾರು 10 ಕೋಟಿವರೆಗೂ ವಿದೇಶಗಳಲ್ಲಿ ಕಲೆಕ್ಷನ್ ಮಾಡಿದೆ. ಯುಎಸ್ ಎ ನಲ್ಲಿ ಹೆಚ್ಚು ಹಣ ಗಳಿಕೆ ಕಂಡಿರುವ ದಾಖಲೆ ಇದೆ.

    ಅಮೇಜಾನ್ ನಲ್ಲಿ ದಾಖಲೆ

    ಅಮೇಜಾನ್ ನಲ್ಲಿ ದಾಖಲೆ

    2019ನೇ ಸಾಲಿನ ಅಮೇಜಾನ್ ಪ್ರೈಮ್ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿರುವ ಭಾರತ ಸಿನಿಮಾ ಕೆಜಿಎಫ್. ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಿತ್ರ ಡಿಜಿಟಲ್ ಮಾರ್ಕೆಟ್ ನಲ್ಲೂ ಮೋಡಿ ಮಾಡಿದೆ.

    2 ರಾಷ್ಟ್ರ ಪ್ರಶಸ್ತಿ

    2 ರಾಷ್ಟ್ರ ಪ್ರಶಸ್ತಿ

    66ನೇ ಸಾಲಿನಲ್ಲಿ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕೆಜಿಎಫ್ ಪಡೆದುಕೊಂಡಿದೆ. ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ ಮತ್ತು ಅತ್ಯುತ್ತಮ ಸಾಹಸ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

    9 ಸೈಮಾ ಪ್ರಶಸ್ತಿ

    9 ಸೈಮಾ ಪ್ರಶಸ್ತಿ

    2019ನೇ ವರ್ಷದಲ್ಲಿ ಒಟ್ಟು 9 ಸೈಮಾ ಪ್ರಶಸ್ತಿಯನ್ನು ಕೆಜಿಎಫ್ ಸಿನಿಮಾ ಬಾಚಿಕೊಂಡಿತ್ತು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ಸ್ಟೈಲ್ ಐಕಾನ್ ಆಫ್ ದಿ ಇಯರ್, ಅತ್ಯುತ್ತಮ ನಿರ್ದೇಶಕ, ಪೋಷಕ ನಟಿ, ಛಾಯಾಗ್ರಹಣ, ಸಂಗೀತ, ಪೋಷಕ ನಟ, ಹಿನ್ನೆಲೆ ಗಾಯಕ ವಿಭಾಗಗಳಲ್ಲಿ ಸೈಮಾ ಪ್ರಶಸ್ತಿ ಸಿಕ್ಕಿತ್ತು.

    English summary
    1 Year Celebration For KGF movie. The pride of Kannada cinema KGF, a film which has Took Kannada Film Industry To Another Level.
    Saturday, December 21, 2019, 13:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X