Don't Miss!
- Technology
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- News
Philips Layoffs : ಫಿಲೀಪ್ಸ್ನಿಂದ 6000 ಉದ್ಯೋಗಿಗಳ ವಜಾ
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಉಪ್ಪಿ 'UI' ಚಿತ್ರಕ್ಕೆ ಕೊಡಗಿನ ಚೆಲುವೆ ನಾಯಕಿಯಾಗಿ ಆಯ್ಕೆ!
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ 'UI' ಚಿತ್ರಕ್ಕೆ ಕನ್ನಡ ಹುಡುಗಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸಿನಿಮಾ ಶೂಟಿಂಗ್ ಭರದಿಂದ ಸಾಗಿದ್ದು, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಬಹಳ ವರ್ಷಗಳ ನಂತರ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಸಿನಿಮಾ 'UI'. ಕೆ. ಪಿ ಶ್ರೀಕಾಂತ್ ಹಾಗೂ ಜಿ. ಮನೋಹರನ್ ನಿರ್ಮಾಣದ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ವಿಭಿನ್ನ ಟೈಟಲ್ ಇಟ್ಟು ಉಪೇಂದ್ರ ಗಮನ ಸೆಳೆದಿದ್ದಾರೆ. ಸೂಪರ್ ಸ್ಟಾರ್ ಸಿನಿಮಾ ಅಂದರೆ ಸಹಜವಾಗಿಯೇ ನಿರೀಕ್ಷೆ ಗರಿಗೆದರುತ್ತೆ. ತಮ್ಮ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಉಪ್ಪಿ ಡಿಸೈನ್ ಮಾಡುತ್ತಾರೆ. ನಾಯಕಿಯರ ಪಾತ್ರಕ್ಕೂ ಅಷ್ಟೇ ಮಹತ್ವ ಇರುತ್ತದೆ. ಬಹು ನಿರೀಕ್ಷಿ 'UI' ಚಿತ್ರಕ್ಕೆ ನಾಯಕಿ ಯಾರಾಗಬಹುದು ಎನ್ನುವ ಕುತೂಹಲ ಇತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ.
ನೆಪೋಟಿಸಂ
ಅಂದ್ರೆ
ಅಪ್ಪು,
ದರ್ಶನ್,
ಶಿವಣ್ಣ
ಇರ್ತಾ
ಇರ್ಲಿಲ್ಲ;
ಮಗಳ
ಬಗ್ಗೆ
ಮಾತನಾಡಿದವರಿಗೆ
ಪ್ರೇಮ್
ಟಾಂಗ್!
ಸದ್ದಿಲ್ಲದೇ 'UI' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಹೊಸ ಹೊಸ ಕಲಾವಿದರು ತಾರಾಗಣವನ್ನು ಸೇರಿಕೊಳ್ಳುತ್ತಿದ್ದಾರೆ. ಉಪೇಂದ್ರ ತಮ್ಮ ಸಿನಿಮಾಗಳಿಗೆ ಪರಭಾಷಾ ಸ್ಟಾರ್ ಹೀರೊಯಿನ್ಸ್‌ನ ಕೂಡ ಕರೆ ತಂದಿದ್ದರು. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ದಕ್ಷಿಣ ಭಾರತದ ಟಾಪ್ ನಟಿ ನಾಯಕಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ಆ ಮಾತು ಸುಳ್ಳಾಗಿದೆ.

'UI' ಚಿತ್ರಕ್ಕೆ ನಾಯಕಿಯಾಗಿ ರೀಷ್ಮಾ ಆಯ್ಕೆ
ಹೌದು 'UI' ಚಿತ್ರಕ್ಕೆ ರೀಷ್ಮಾ ನಾಣಯ್ಯ ಹೀರೊಯಿನ್ ಆಗಿ ಆಯ್ಕೆ ಆಗಿದ್ದಾರೆ. ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದ ಮೂಲಕ ರೀಷ್ಮಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. 'ವಾಮನ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಈಕೆ ನಟಿಸುತ್ತಿದ್ದಾರೆ. ಈಗ ಉಪ್ಪಿ ನಿರ್ದೇಶನದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಮೊದಲ ಸಿನಿಮಾದಲ್ಲಿ ರೀಷ್ಮಾ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದೀಗ ಉಪೇಂದ್ರ ತಮ್ಮ ಚಿತ್ರಕ್ಕೆ ಕೊಡಗಿನ ಚೆಲುವೆಯನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ರೀಷ್ಮಾಗೆ 'UI' ಸಿನಿಮಾ ಮೂಲಕ ದೊಡ್ಡ ಬ್ರೇಕ್ ಸಿಗುವ ಸುಳಿವು ಸಿಗುತ್ತಿದೆ.

ಶೂಟಿಂಗ್ ವೇಳೆ ಉಪ್ಪಿ ಆರೋಗ್ಯದಲ್ಲಿ ಏರುಪೇರು
ಇನ್ನು ಇತ್ತೀಚೆಗೆ 'UI' ಸಿನಿಮಾ ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ವೇಳೆ ಆರೋಗ್ಯದಲ್ಲಿ ಏರುಪೇರಾಗಿ ಉಪೇಂದ್ರ ಆಸ್ಪತ್ರೆ ಸೇರಿದ್ದರು. ಡಸ್ಟ್ ಅಲರ್ಜಿಯಿಂದ ಮೂಗು ಬ್ಲಾಕ್ ಆಗಿ ಸಮಸ್ಯೆ ಆಗಿತ್ತು. ಕೂಡಲೇ ವೈದ್ಯರನ್ನು ಕರೆತಂದು ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ನಂತರ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ಹೊತ್ತಿನ ನಂತರ ಉಪೇಂದ್ರ ಮತ್ತೆ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ನಾನು ಆರೋಗ್ಯವಾಗಿದ್ದೀನಿ ಎಂದು ವಿಡಿಯೋ ಮಾಡಿ ಮಾಹಿತಿ ನೀಡಿದ್ದರು.

'UI' ಚಿತ್ರದಲ್ಲಿ ಸನ್ನಿ ಲಿಯೋನ್?
'ಉಪ್ಪಿ-2' ನಂತರ ರಿಯಲ್ ಸ್ಟಾರ್ 'UI' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಸಿನಿಮಾ ಕಥೆ, ಪಾತ್ರವರ್ಗದ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡುತ್ತಿಲ್ಲ. ನಿಧಿ ಸುಬ್ಬಯ್ಯ, ಇಂದ್ರಜಿತ್ ಲಂಕೇಶ್ ಹಾಗೂ ಪ್ರಶಾಂತ್ ಸಂಬರಗಿ ತಾರಾಗಣದಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಇನ್ನು ಮಾಜಿ ನೀಲಿ ರಾಣಿ ಸನ್ನಿ ಲಿಯೋನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಚಿತ್ರಕ್ಕೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಆಯ್ಕೆ ಆಗಿರುವ ಮಾತುಗಳು ಕೇಳಿಬರ್ತಿದೆ.

ಮುಂದಿನ ವರ್ಷ ತೆರೆಮೇಲೆ 'UI'
ವಿಭಿನ್ನ ಆಲೋಚನೆಗಳನ್ನು ತೆರೆಮೇಲೆ ತರುವುದರಲ್ಲಿ ಉಪೇಂದ್ರ ನಿಸ್ಸೀಮರು. ಟೈಟಲ್‌ನಿಂದಲೇ ಮತ್ತೊಮ್ಮೆ ಉಪ್ಪಿ ಗಮನ ಸೆಳೆದಿದ್ದಾರೆ. ಟೈಟಲ್ ಅರ್ಥ ಏನು? ಸಿನಿಮಾ ಕಾನ್ಸೆಪ್ಟ್ ಏನು ಎನ್ನುವುದು ಗೊತ್ತಾಗುತ್ತಿಲ್ಲ. ಬಹಳ ವರ್ಷಗಳಿಂದ ಉಪೇಂದ್ರ ಮತ್ತೆ ಸಿನಿಮಾ ನಿರ್ದೇಶನ ಮಾಡಬೇಕು ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಒಂದೊಳ್ಳೆ ಕಥೆ ಸಿದ್ಧಪಡಿಸಿಕೊಂಡಿದ್ದ ರಿಯಲ್ ಸ್ಟಾರ್ ಇದೀಗ ಸಿನಿಮಾ ಮಾಡುತ್ತಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.