ಶ್ರೇಯಸ್-ನಂದ ಕಿಶೋರ್ ಚಿತ್ರಕ್ಕೆ ರೀಷ್ಮಾ ನಾನಯ್ಯ ನಾಯಕಿ

ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ರೀಷ್ಮಾ ನಾನಯ್ಯ ಮತ್ತೊಂದು ದೊಡ್ಡ ಪ್ರಾಜೆಕ್ಟ್‌ನಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ನಂದ ಕಿಶೋರ್ ಹಾಗೂ ಶ್ರೇಯಸ್ ಕೆ ಮಂಜು ಅವರ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಇನ್ನು ಹೆಸರಿಡದ ಚಿತ್ರದಲ್ಲಿ ರೀಷ್ಮಾ ನಾನಯ್ಯ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ.

ಮಾಡೆಲ್ ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿರುವ ರೀಷ್ಮಾಗೆ ಮೊದಲಿನಂದಲೂ ನಟಿ ಆಗಬೇಕು ಎಂಬ ಕನಸಿತ್ತು. 'ಏಕ್ ಲವ್ ಯಾ' ಸಿನಿಮಾ ಮೂಲಕ ಆ ಆಸೆ ಈಡೇರಿತು. ಇದೀಗ, ಚೊಚ್ಚಲ ಸಿನಿಮಾ ತೆರೆಕಾಣುವ ಮೊದಲೇ ಮತ್ತೆರಡು ಚಿತ್ರಗಳಲ್ಲಿ ನಟಿಸುತ್ತಿರುವುದು ಸರ್ಪ್ರೈಸ್ ಎನಿಸಿದೆ.

Reeshma Nanaiah to play female lead opposite Shreyas Manju in Nanda Kishore’s next movie

'ಆ ದಿನಗಳು' ಚೇತನ್ ಕುಮಾರ್ ನಟಿಸುತ್ತಿರುವ ದ್ವಿಭಾಷಾ ಸಿನಿಮಾ 'ಮಾರ್ಗ'ದಲ್ಲೂ ರೀಷ್ಮಾ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಮುಹೂರ್ತ ನೆರವೇರಿಸಿಕೊಂಡಿದ್ದ ಈ ಚಿತ್ರ ಶೂಟಿಂಗ್ ಆರಂಭಿಸಬೇಕಿದೆ.

ಶ್ರೇಯಸ್-ನಂದ ಕಿಶೋರ್ ಪಾಜೆಕ್ಟ್ ಬಗ್ಗೆ ಹೇಳುವುದಾದರೆ ಕೆ ಮಂಜು ಮತ್ತು ಗುಜ್ಜಾಲ್ ಪುರುಷೋತ್ತಮ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಪ್ರಸ್ತುತ, ಪ್ರಿ-ಪ್ರೊಡಕ್ಷನ್ ಕೆಲಸ ಪ್ರಗತಿಯಲ್ಲಿದೆ. ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆಎಂ ಪ್ರಕಾಶ್ ಸಂಕಲನ ಒಳಗೊಂಡಿದೆ.

Recommended Video

Rishab Shetty ಕಿರಿಕ್ ಪಾರ್ಟಿ ಟೀಂ ವಿರುದ್ಧ ಜಾಮೀನು ರಹಿತ ವಾರೆಂಟ್ | Filmibeat Kannada

More from Filmibeat

English summary
Reeshma Nanaiah to play female lead opposite Shreyas Manju in Nanda Kishore’s next movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X