ನಟಿ ರೆಜಿನಾಗೆ 'ಕಿಕಿ ಚಾಲೆಂಜ್' ಯಾಕ್ ಬೇಕಿತ್ತು.? ಜವಾಬ್ದಾರಿ ಬೇಡವಾ.?

By Harshitha

Recommended Video

ಬೇಡ ಅಂದಿದ್ದೇ ಮಾಡ್ತಾರೆ ಈ ನಟಿಯರು..! | Oneindia Kannada

ನಟ-ನಟಿಯರಿಗೆ ಲಕ್ಷಾಂತರ ಜನ ಅಭಿಮಾನಿಗಳು ಇರ್ತಾರೆ, ಸೆಲೆಬ್ರಿಟಿಗಳು ಮಾಡುವ ಕೆಲಸಗಳಿಂದ ಅನೇಕರು ಸ್ಫೂರ್ತಿ ಪಡೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಾರೆಯರನ್ನು ಫಾಲೋ ಮಾಡುವುದು ಮಾತ್ರ ಅಲ್ಲ, ಎಷ್ಟೋ ಮಂದಿ ನಿಜ ಜೀವನದಲ್ಲೂ ಅವರುಗಳನ್ನ ಅನುಸರಿಸುತ್ತಾರೆ. ಹೀಗಿರುವಾಗ, ಸ್ಟಾರ್ ಗಳು ಸ್ವಲ್ಪ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಅಲ್ಲವೇ.?

'ಕಿಕಿ ಚಾಲೆಂಜ್' ತುಂಬಾ ಡೇಂಜರಸ್.. ಸ್ವಲ್ಪ ಯಾಮಾರಿದ್ರೂ, ಜೀವಕ್ಕೆ ಅಪಾಯ.. ಹೀಗಾಗಿ ಅದನ್ನ ಸ್ವೀಕರಿಸಬೇಡಿ.. ಅಂತ ಪೊಲೀಸರು ಮನವಿ ಮಾಡುತ್ತಿದ್ದಾರೆ. ಸ್ಪೇನ್, ಈಜಿಪ್ಟ್ ಹಾಗೂ UAE ದೇಶಗಳಲ್ಲಿ 'ಕಿಕಿ ಚಾಲೆಂಜ್' ಬ್ಯಾನ್ ಆಗಿದೆ. ಹೀಗಿದ್ದರೂ, ಭಾರತದಲ್ಲಿ ಕೆಲವು ನಟಿಯರು ಈ ಸವಾಲನ್ನು ಸ್ವೀಕರಿಸಿ, ವಿಡಿಯೋನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ.

ಅದಾ ಶರ್ಮಾ, ನೋರಾ ಫತೇಹಿ 'ಕಿಕಿ ಚಾಲೆಂಜ್'ನ ಕಂಪ್ಲೀಟ್ ಮಾಡಿದ್ದಾರೆ. ಇದೀಗ ಇದೇ ಸಾಲಿಗೆ ಸೇರಿರುವವರು ನಟಿ ರೆಜಿನಾ. ಕನ್ನಡದಲ್ಲಿ 'ಸೂರ್ಯಕಾಂತಿ' ಸಿನಿಮಾ ಮಾಡಿದ್ದ ರೆಜಿನಾ ಇದೀಗ ಸ್ಯಾಂಡಲ್ ವುಡ್ ಗಿಂತ ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿಯೇ ಹೆಸರುವಾಸಿ. ಇಂತಿಪ್ಪ ರೆಜಿನಾ 'ಕಿಕಿ ಚಾಲೆಂಜ್' ನ ಹೇಗೆ ಸ್ವೀಕರಿಸಿದ್ದಾರೆ ಅಂತ ನೀವೇ ನೋಡಿರಿ...

ರೆಜಿನಾ ಮಾಡಿದ್ದು ಸರಿನಾ.?

ಕೆಂಪು ಬಣ್ಣದ ಲಂಗ-ದಾವಣಿ ತೊಟ್ಟು ನಟಿ ರೆಜಿನಾ 'ಕಿಕಿ' ಸವಾಲನ್ನು ಪೂರ್ಣಗೊಳಿಸಿದ್ದಾರೆ. ಸಾಲದಕ್ಕೆ, ''ಇನ್ ಮೈ ಫೀಲಿಂಗ್ಸ್ ಚಾಲೆಂಜ್ (ಕಿಕಿ ಚಾಲೆಂಜ್) ಮಾಡಲೇಬೇಕಿತ್ತು. ಚಿತ್ರೀಕರಣದ ಮಧ್ಯೆ ನಾನು ಮಾಡಿರುವ ಕ್ರೇಜಿ ಕೆಲಸ ಇದು'' ಎಂದು ರೆಜಿನಾ ಟ್ವೀಟ್ ಮಾಡಿದ್ದಾರೆ.

ಅಲ್ಲು ಸಿರೀಶ್ ಪ್ರತಿಕ್ರಿಯೆ ಹೇಗಿತ್ತು.?

ರೆಜಿನಾ ರವರ 'ಕಿಕಿ ಚಾಲೆಂಜ್' ವಿಡಿಯೋ ನೋಡಿ, ''ಎಪಿಕ್.. ಇದನ್ನೆಲ್ಲಾ ರೆಜಿನಾ ಮಾತ್ರ ಮಾಡಲು ಸಾಧ್ಯ'' ಎಂದು ನಗುತ್ತಾ ಪ್ರತಿಕ್ರಿಯೆ ನೀಡಿದ್ದಾರೆ ನಟ ಅಲ್ಲು ಸಿರೀಶ್.

ಸಮಾಜಕ್ಕೆ ಕೊಡುತ್ತಿರುವ ಸಂದೇಶ ಏನು.?

''ಈ ವಿಡಿಯೋದಿಂದ ಸಮಾಜಕ್ಕೆ ನೀವು ಕೊಡುತ್ತಿರುವ ಸಂದೇಶ ಏನು.? ಎಲ್ಲರೂ ಡ್ಯಾನ್ಸ್ ಮಾಡಿ ಪ್ರಾಣ ಕಳೆದುಕೊಳ್ಳಬೇಕಾ.? ನಿಮ್ಮ ವಿಡಿಯೋದಿಂದ ಸ್ಫೂರ್ತಿ ಪಡೆದು ಯಾರಾದರೂ ಅಪಘಾತಕ್ಕೀಡಾದರೆ, ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ.?'' ಎಂದು ಟ್ವೀಟಿಗರು ಗರಂ ಆಗಿದ್ದಾರೆ.

ಫ್ಲೋರ್ ನಲ್ಲಿ ಡ್ಯಾನ್ಸ್ ಮಾಡಿ...

''ಫ್ಲೋರ್ ನಲ್ಲಿ ಡ್ಯಾನ್ಸ್ ಮಾಡಿ.. ರೋಡ್ ನಲ್ಲಿ ಅಲ್ಲ. ಇದು ಪೊಲೀಸ್ ನೀಡಿರುವ ಸಂದೇಶ'' ಎನ್ನುವುದು ನೆಟ್ಟಿಗರ ಅಭಿಪ್ರಾಯ.

ಏನಿದು ಕಿಕಿ ಚಾಲೆಂಜ್.?

ಖ್ಯಾತ ಸಂಗೀತಗಾರ ಡ್ರೇಕ್ ರವರ ಹೊಸ ಹಾಡು 'ಕಿಕಿ ಡು ಯು ಲವ್ ಮಿ..' (ಇನ್ ಮೈ ಫೀಲಿಂಗ್ಸ್) ತಿಂಗಳ ಹಿಂದೆ ಬಿಡುಗಡೆ ಆಗಿ, ಬಹು ಜನಪ್ರಿಯತೆ ಪಡೆದಿದೆ. ಅಸಲಿಗೆ, 'ಕಿಕಿ ಚಾಲೆಂಜ್' ಶುರುವಾಗಿದ್ದು ಕೂಡ ಒಂದು ತಿಂಗಳ ಹಿಂದೆಯೇ. 'ಕಿಕಿ ಡು ಯು ಲವ್ ಮಿ..' ಹಾಡಿಗೆ ಕಾಮಿಡಿಯನ್ ಶಿಗ್ಗಿ ನಡು ಬೀದಿಯಲ್ಲಿ ಡ್ಯಾನ್ಸ್ ಮಾಡಿ, ವಿಡಿಯೋನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು. ಇಲ್ಲಿಂದಲೇ, 'ಕಿಕಿ ಚಾಲೆಂಜ್'/'ಇನ್ ಮೈ ಫೀಲಿಂಗ್ಸ್' ಚಾಲೆಂಜ್ ಶುರುವಾಗಿದ್ದು.! ಕಾಡ್ಗಿಚ್ಚಿನಂತೆ ಸೋಷಿಯಲ್ ಮೀಡಿಯಾದಲ್ಲಿ 'ಕಿಕಿ ಚಾಲೆಂಜ್' ಹಬ್ಬಿತು. ಚಲಿಸುತ್ತಿರುವ ಕಾರಿನಿಂದ ಇಳಿದು, ಕಾರಿನ ಸ್ಪೀಡ್ ಗೆ ತಕ್ಕ ಹಾಗೆ 'ಕಿಕಿ ಡು ಯು ಲವ್ ಮಿ...' ಹಾಡಿಗೆ ಡ್ಯಾನ್ಸ್ ಮಾಡಿ ನಂತರ ಮತ್ತೆ ಕಾರಿನೊಳಗೆ ಜಿಗಿಯುವ ಅಪಾಯಕಾರಿ ಸವಾಲು ವೈರಲ್ ಆಗಲು ಆರಂಭವಾಯ್ತು. 'ಕಿಕಿ ಚಾಲೆಂಜ್'ನ ನಡು ರಸ್ತೆಯಲ್ಲಿ ಸ್ವೀಕರಿಸಿ ಎಷ್ಟೋ ಮಂದಿ ಅಪಘಾತಕ್ಕೀಡಾಗಿದ್ದಾರೆ. ಕೈ-ಕಾಲು ಮುರಿದುಕೊಂಡಿದ್ದಾರೆ, ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ದಿನದಿಂದ ದಿನಕ್ಕೆ 'ಕಿಕಿ ಚಾಲೆಂಜ್'ನಿಂದ ಅವಾಂತರಗಳು ಹೆಚ್ಚಾದಂತೆ ಕೆಲವೆಡೆ ಬ್ಯಾನ್ ಮಾಡಲಾಗಿದೆ.

More from Filmibeat

English summary
Tollywood Actress Regina Cassandra accepts Dangerous KiKi Challenge. Watch video here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X