ನಟಿ ರೆಜಿನಾ ಕಸ್ಸಂದ್ರ ಮತಾಂತರಗೊಂಡಿದ್ದೇಕೆ? ಅದರ ಹಿಂದಿರುವ ನೋವಿನ ಕಥೆಯೇನು?

ಬಹುಭಾಷಾ ನಟಿ ರೆಜಿನಾ ಕಸ್ಸಂದ್ರ ಒಂದು ಕನ್ನಡ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಚೆನ್ನೈನಲ್ಲಿ ಹುಟ್ಟಿ ಬೆಳೆದ ರೆಜಿನಾ ಮುಂದೆ ನಿರೂಪಕಿಯಾಗಿ ಜರ್ನಿ ಆರಂಭಿಸಿದರು. ಬಳಿಕ ಚಿತ್ರರಂಗಕ್ಕೆ ಬಂದು ಗೆದ್ದರು. ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಚೆಲುವೆ ವೆಬ್ ಸೀರಿಸ್‌ಗಳಲ್ಲಿ ಸಹ ಮಿಂಚಿದ್ದಾರೆ.

ರೆಜಿನಾ ನಟನೆಯ 'ವಿಡಾಮುಯರ್ಚಿ' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಅಜಿತ್ ಹೀರೋ ಆಗಿ ನಟಿಸುತ್ತಿರುವ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಸಿಂಗಲ್ ಪೇರೆಂಟ್ ಆರೈಕೆಯಲ್ಲಿ ಬೆಳೆದ ರೆಜಿನಾ ಇಸ್ಲಾಂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಎದುರಾದ ಕಹಿ ಘಟನೆಯಿಂದ ಈ ನಿರ್ಧಾರಕ್ಕೆ ಅಮ್ಮ ಬಂದರು ಎಂದು ಹೇಳಿದ್ದಾರೆ.

Regina Cassandra reveals why she Converted from Islam to Christian Religion

'ಉತ್ಸವಂ' ಎಂಬ ತೆಲುಗು ಚಿತ್ರದಲ್ಲಿ ರೆಜಿನಾ ಕೊನೆಯದಾಗಿ ನಟಿಸಿದ್ದರು. ಆ ಚಿತ್ರದ ಪ್ರಚಾರದ ವೇಳೆ ಸಂದರ್ಶನದಲ್ಲಿ ಮಾತನಾಡುತ್ತಾ ತಮ್ಮ ಹೆಸರಿನ ಸೀಕ್ರೆಟ್ ಹೇಳಿದ್ದರು. ಅದೇ ಸಮಯದಲ್ಲಿ ಮುಸ್ಲಿಂ ಆಗಿ ಹುಟ್ಟಿ ಬಳಿಕ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ವಿಚಾರವನ್ನು ತಿಳಿಸಿದ್ದರು.

ರೆಜಿನಾ ಮಾತನಾಡಿ "ನಾನು ಮಸ್ಲಿಂ ಆಗಿ ಹುಟ್ಟಿದ್ದು. ಮೊದಲ 6 ವರ್ಷ ನನ್ನ ಹೆಸರು ಬೇರೆ ಇತ್ತು. ನಮ್ಮ ತಂದೆ ಮುಸ್ಲಿಂ, ನಮ್ಮ ತಾಯಿ ಕ್ರಿಶ್ಚಿಯನ್. ಅವರಿಬ್ಬರು ಡಿವೋರ್ಸ್ ಪಡೆದು ದೂರಾದ ಬಳಿಕ ಅಮ್ಮ ಯಾವುದಾದರೂ ಒಂದು ಧರ್ಮ ಅನುಸರಿಸಬೇಕು ಎಂದುಕೊಂಡರು. ಆಕೆಗೆ ಇಸ್ಲಾಂ ಗೊತ್ತಿರಲಿಲ್ಲ. ಹಾಗಾಗಿ ಮತ್ತೆ ಕ್ರಿಶ್ಚಿಯನ್ ಧರ್ಮ ಒಪ್ಪಿಕೊಂಡರು. ನಾನು ಬೈಬಲ್ ಎಲ್ಲಾ ಓದಿದೆ. ನಂತರ ಹೆಸರು ಬದಲಿಕೊಂಡೆ" ಎಂದು ಹೇಳಿದ್ದಾರೆ.

ತಮ್ಮ ಹೆಸರಿನ ಅರ್ಥದ ಬಗ್ಗೆಯೂ ರೆಜಿನಾ ಮಾತನಾಡಿದ್ದಾರೆ. "ರೆಜಿನಾ ಎನ್ನುವುದು ಮದರ್ ಮೇರಿ ಹೆಸರು. ಇಟಾಲಿಯನ್‌ ಭಾಷೆಯಲ್ಲಿ ಸ್ವರ್ಗದ ರಾಣಿ ಎನ್ನುವ ಅರ್ಥ ಇದೆ. ನಮ್ಮ ತಾಯಿಗೆ 'ಮಿಲ್ಸ್ & ಬೂನ್' ಕಾದಂಬರಿ ಬಹಳ ಇಷ್ಟ. ಅದರಲ್ಲಿ ಒಂದು ಪಾತ್ರದ ಹೆಸರು ಕಸ್ಸಂದ್ರ. ಅದನ್ನು ಇಷ್ಟಪಟ್ಟು ನನ್ನ ಹೆಸರಿನ ಜೊತೆ ಸೇರಿಸಿದರು. ಹಾಗಾಗಿ ನನ್ನ ಹೆಸರು ರೆಜಿನಾ ಕಸ್ಸಂದ್ರ ಆಯಿತು" ಎಂದು ಆಕೆ ವಿವರಿಸಿದ್ದಾರೆ.

2025ರಲ್ಲಿ 'ಕಂಡ ನಾಲ್ ಮುದಲ್' ಎಂಬ ತಮಿಳು ಚಿತ್ರದಲ್ಲಿ ರೆಜಿನಾ ನಟಿಸಿದ್ದರು. ಬಳಿಕ ಸಾಲು ಸಾಲು ಅವಕಾಶಗಳು ಸಿಕ್ಕಿದ್ದವು. ಕೆ. ಎಂ ಚೈತನ್ಯಾ ನಿರ್ದೇಶನದ 'ಸೂರ್ಯಕಾಂತಿ' ಕನ್ನಡ ಚಿತ್ರದಲ್ಲಿ ಕೂಡ ಆಕೆ ಬಣ್ಣ ಹಚ್ಚಿದ್ದರು. ಆ ದಿನಗಳು ಚೇತನ್ ಜೋಡಿಯಾಗಿ ನಟಿಸಿದ್ದರು. ಬಳಿಕ ಮತ್ತೆ ಕನ್ನಡದ ಯಾವುದೇ ಸಿನಿಮಾದಲ್ಲಿ ರೆಜಿನಾ ನಟಿಸಲಿಲ್ಲ.

'ನಿರ್ಣಯಂ', 'ರಾಜತಂತಿರಂ', 'ಮಾನಗರಂ', 'ಸರವಣನ್ ಇರುಕ್ಕ ಭಯಮೆಣುಂ', 'ಮಿ. ಚಂದ್ರಮೌಳಿ', 'ಮುಗಿಳ್', 'ಕಸದ ತಾಪರ' ಸೇರಿದಂತೆ ಕೆಲ ತಮಿಳು ಸಿನಿಮಾಗಳಲ್ಲಿ ರೆಜಿನಾ ಕಸ್ಸಂದ್ರ ನಟಿಸಿದ್ದಾರೆ. 'ಕೊತ್ತ ಜಂಟ', 'ಪವರ್', 'ಸೌಕ್ಯಂ', 'ಶೌರ್ಯ', 'ಬಾಲಕೃಷ್ಣುಡು', 'ಎವರು', 'ಶಾಕಿನಿ ಡಾಕಿನಿ' ಆಕೆ ನಟಿಸಿದ ಕೆಲ ತೆಲುಗು ಸಿನಿಮಾಗಳು. 'ಆಚಾರ್ಯ' ಚಿತ್ರದ ಐಟಂ ಸಾಂಗ್‌ಗೆ ಹೆಜ್ಜೆ ಕೂಡ ಹಾಕಿದ್ದರು.

'ಜಾಟ್' ಎಂಬ ಸಿನಿಮಾ ಮೂಲಕ ರಜಿನಾ ಬಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಡುತ್ತಿದ್ದಾರೆ. 'ಸೆಕ್ಷನ್ 108' ಎನ್ನುವ ಮತ್ತೊಂದು ಹಿಂದಿ ಸಿನಿಮಾ ಕೂಡ ಕೈಯಲ್ಲಿದೆ. 'ಫ್ಲಾಶ್‌ಬ್ಯಾಕ್' ಎಂಬ ತಮಿಳು ಚಿತ್ರದಲ್ಲಿ ಕೂಡ ಆಕೆ ನಟಿಸುತ್ತಿದ್ದಾರೆ.

More from Filmibeat

English summary
Actress Regina Cassandra says why she changed her Religion, she also shares her name secret;
Read more about: actress kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X