ಈ ನಟಿಯ ಹಲವು ಸ್ನೇಹಿತರು ಸಲಿಂಗಕಾಮಿಗಳಂತೆ.!
ನಾನು ಚಿಕ್ಕ ವಯಸ್ಸಿನಲ್ಲೇ ಬ್ಲೂಫಿಲಂ ನೋಡುತ್ತಿದ್ದೆ ಎಂದು ಹೇಳಿಕೊಳ್ಳುವ ಮೂಲಕ ಸಿನಿ ಜಗತ್ತಿನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ನಟಿ ರೆಜಿನಾ ಈಗ ಇನ್ನೊಂದು ಅಚ್ಚರಿಯ ವಿಷ್ಯವನ್ನ ಹೊರಹಾಕಿದ್ದಾರೆ.
'ನನ್ನ ಸ್ನೇಹಿತರಲ್ಲಿ ಬಹಳ ಜನ ಸಲಿಂಗಕಾಮಿಗಳು' ಎಂದು ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ,. ಇದು ಸಹಜವಾಗಿ ಭಾರಿ ಚರ್ಚೆಗೆ ಕಾರಣವಾಗಿದೆ. ಅಂದ್ರೆ, ರಜಿನಾ ಮೊದಲ ಹಿಂದಿ ಸಿನಿಮಾದಲ್ಲಿ ಸೋನಂ ಕಪೂರ್ ಜೊತೆ ನಟಿಸಿದ್ದ ರೆಜಿನಾ ಸಲಿಂಗಕಾಮಿ ಪಾತ್ರ ನಿರ್ವಹಿಸಿದ್ದರು.
ಈ ಚಿತ್ರದ ಬಗ್ಗೆ ಮಾತನಾಡುವ ವೇಳೆ ''ನನ್ನ ಸ್ನೇಹಿತರಲ್ಲಿ ಹಲವರು ಸಲಿಂಗಕಾಮಿಗಳಿದ್ದಾರೆ. 'ಏಕ್ ಲಡ್ಕಿ ಕೋ ದೇಖಾ, ತೋ ಐಸಾ ಲಗಾ' ಸಿನಿಮಾ ಮಾಡಿದ್ದ ವೇಳೆ ನಾನು ಸಲಿಂಗಕಾಮಿ ಪಾತ್ರ ಮಾಡಿದ್ದೆ. ಆ ಪಾತ್ರ ಮಾಡಿದ್ದಕ್ಕೆ ನನ್ನನ್ನು ಮೆಚ್ಚಿಕೊಂಡಿದ್ದರು. ಬಹಳ ಖುಷಿ ಪಟ್ಟಿದ್ದರು'' ಎಂದು ತಿಳಿಸಿದ್ದಾರೆ.

ಸಾಮಾಜಿಕ ಅಂಶಗಳಿಗೆ ಹತ್ತಿರವಾದಂತ ಪಾತ್ರಗಳನ್ನ ಮಾಡುವುದು ಎಂದರೆ ನನಗೆ ಹೆಚ್ಚು ಆಸಕ್ತಿ ಮತ್ತು ಇಷ್ಟ ಎಂದರು. ಅಂದ್ಹಾಗೆ, ರೆಜಿನಾ ಬಹಳ ಓಪನ್ ಆಗಿ ಮಾತನಾಡುತ್ತಾರೆ. ಈ ಹಿಂದೆ ಕೂಡ ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ಬ್ಲೂಫಿಲಂ ನೋಡುತ್ತಿದ್ದೆ ಎಂದು ಸಂದರ್ಶನದಲ್ಲಿ ಹೇಳಿದ್ದರು.
ಈ ಮಧ್ಯೆ ಸೀಕ್ರೆಟ್ ಆಗಿ ತೆಲುಗು ನಟನೊಬ್ಬನ ಜೊತೆ ರೆಜಿನಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯದಲ್ಲಿ ಮದುವೆ ಕೂಡ ಆಗ್ತಾರೆ ಎಂಬ ಸುದ್ದಿಯೀ ಹರಿದಾಡಿತ್ತು. ಆದರೆ, ಈ ಸುದ್ದಿಯನ್ನ ತಳ್ಳಿ ಹಾಕಿದ್ದ ರೆಜಿನಾ ''ನನಗೆ ಕದ್ದುಮುಚ್ಚಿ ಮದುವೆ ಆಗುವ ಸನ್ನಿವೇಶ ಬಂದಿಲ್ಲ. ಎಲ್ಲರಿಗೂ ಹೇಳಿಯೇ ಮದುವೆ ಆಗ್ತೇನೆ'' ಇದೆಲ್ಲ ಸುಳ್ಳು ಎಂದು ಸ್ಪಷ್ಟಪಡಿಸಿದ್ದರು.


Click it and Unblock the Notifications











